ನೆಲಮಂಗಲ: ಅನಧಿಕೃತವಾಗಿ ಕೋವಿಡ್ ಲಸಿಕೆ ಕೊಡ್ತಿದ್ದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ತಹಶೀಲ್ದಾರ್ ಮತ್ತು ಆರೋಗ್ಯಾಧಿಕಾರಿಗಳ ಬಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆ ಆರೋಗ್ಯ ಉಪಕೇಂದ್ರದಲ್ಲಿ ನಡೆದಿದೆ.

ಆರೋಗ್ಯ ಉಪಕೇಂದ್ರದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗಾಯತ್ರಿ ಅನಧಿಕೃತವಾಗಿ ಲಸಿಕೆ ನೀಡಿ ಹಣ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಆರೋಗ್ಯ ಕೇಂದ್ರದ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಲಸಿಕೆ ನೀಡಿ ಹಣ ಪಡೆದುಕೊಳ್ಳುತ್ತಿದ್ದದ್ದು ಕಂಡು ಬಂದಿದೆ ಎನ್ನಲಾಗಿದೆ

ಅಧಿಕಾರಿಗಳ ಬಳಿ ತನ್ನ ನಿಜ ಬಣ್ಣ ಬಯಲಾಗುತ್ತಿದಂತೆ ಎಲ್ಲಿ ನನಗೆ ಶಿಕ್ಷೆಯಾಗುತ್ತದೋ ಎಂದು ಆರೋಗ್ಯ ಕೇಂದ್ರದಲ್ಲಿ ಆಕೆ ಹೈ ಡ್ರಾಮಾವನ್ನೇ ಸೃಷ್ಟಿಸಿದ್ದಾರೆ. ಅಲ್ಲದೇ ತನ್ನ ಮೇಲೆ ಕ್ರಮಕೈಗೊಂಡರೆ ನೇಣು ಬಿಗಿದು ಕೊಳ್ಳೋದಾಗಿ ಅಧಿಕಾರಿಗಳ ಬ್ಲ್ಯಾಕ್ ಮೇಲ್​ ಕೂಡ ಮಾಡಿದ್ದಾರಂತೆ.

ಸದ್ಯ ಆಧಿಕಾರಿಗಳು ದಾಳಿ ನಡೆಸಿದ ವೇಳೆ ಗಾಯತ್ರಿ ಇದುವರೆಗೂ 50 ಡೋಸ್ ವ್ಯಾಕ್ಸಿನ್ ಅನ್ನು 80 ಜನರಿಗೆ ಹಾಕಿ ಹಣ ಪಡೆದುಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಅಲ್ಲದೇ, ಕಾಲೇಜು ವಿದ್ಯಾರ್ಥಿಗಳಿಗೆ ಫ್ರಂಟ್ ಲೈನ್ ವರ್ಕರ್ ಎಂದು ಹೇಳಿ ವ್ಯಾಕ್ಸಿನ್ ವಿತರಣೆ ಮಾಡಿದ್ದಾಳೆ ಎನ್ನಲಾಗಿದೆ. ಅಧಿಕಾರಿಗಳ ಎದುರು ಆಕೆ ನಡೆಸಿದ ಹೈ ಡ್ರಾಮಾ ದೃಶ್ಯಗಳು ಮೊಬೈಲ್​​​ನಲ್ಲಿ ಸೆರೆಯಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತಾಲೂಕು ಅಧಿಕಾರಿ, ಲಸಿಕೆ ದುರುಪಯೋಗ ಆಗದಂತೆ ಕ್ರಮಕೈಗೊಳ್ಳುತ್ತೇವೆ. ಸದ್ಯದ ಪ್ರಕರಣದ ಬಗ್ಗೆ ಮಾಧ್ಯಮದವರಿಂದ ಮಾಹಿತಿ ಪಡೆದು ದಾಳಿ ನಡೆಸಿದ್ದೆವು. ಈ ವೇಳೆ ಇಂದು 50 ಡೋಸ್​ ವ್ಯಾಕ್ಸಿನ್ ನೀಡಿದ್ದೆವು. ಆದರೆ ಲಸಿಕೆ ನೀಡಿದ ಬಳಿಕವೂ 2 ವಯಾಲ್ ಬಾಟಲ್​ ಉಳಿದಿರುವುದು ಕಂಡು ಬಂದಿದೆ. ಆದ್ದರಿಂದ ಈ ಬಗ್ಗೆ ಹೆಚ್ಚಿನ ಕ್ರಮಕೈಗೊಂಡು ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು.

The post 50 ಡೋಸ್ ಲಸಿಕೆಯನ್ನ 80 ಜನರಿಗೆ ನೀಡಿದ ಈಕೆ.. ಸಿಕ್ಕಿಬಿದ್ದಾಗ ಏನು ಹೇಳಿದ್ಳು ಗೊತ್ತಾ..? appeared first on News First Kannada.

Source: newsfirstlive.com

Source link