50 ಲಕ್ಷ ರೂ. ಸ್ವಂತ ಹಣದಲ್ಲಿ ‘ಉಚಿತ ಕೋವಿಡ್ ಕೇರ್ ಸೆಂಟರ್’ ಸ್ಥಾಪಿಸಿದ ಸವದಿ

50 ಲಕ್ಷ ರೂ. ಸ್ವಂತ ಹಣದಲ್ಲಿ ‘ಉಚಿತ ಕೋವಿಡ್ ಕೇರ್ ಸೆಂಟರ್’ ಸ್ಥಾಪಿಸಿದ ಸವದಿ

ಬೆಳಗಾವಿ: ಅಥಣಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ವಸತಿ ಶಾಲೆಯಲ್ಲಿ ಸುಮಾರು 60 ಹಾಸಿಗೆಗಳುಳ್ಳ ಉಚಿತ ಕೋವಿಡ್ ಕೇರ್ ಸೆಂಟರ್ ಅನ್ನು ಪ್ರಾರಂಭಿಸುತ್ತಿದ್ದು ನಾಳೆಯಿಂದ ಅಧಿಕೃತವಾಗಿ ಚಾಲನೆ ಆಗಲಿದೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಕೊರೊನಾ ಸೋಂಕಿನಿಂದ ಹೊರಗಡೆ ಆಸ್ಪತ್ರೆಗಳಲ್ಲಿ ಬೆಡ್ ಆಕ್ಸಿಜನ್ ಸಿಗದೆ ತೊಂದರೆಗೀಡಾಗಿರುವಂತವರಿಗೆ 10 ಲೀಟರ್ ಹಾಗೂ 15 ಲೀಟರ್ ಸಾಮರ್ಥ್ಯವುಳ್ಳ 50 ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ಈಗಾಗಲೇ ಖರೀದಿಸಲಾಗಿದೆ. ಇದು ನಾಳೆಯಿಂದ ಸಾರ್ವಜನಿಕರ ಉಪಯೋಗಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.

ಆಕ್ಸಿಜನ್ ಕಾನ್ಸನ್ಟ್ರೇಟರ್ ಕಿಟ್ ಜೊತೆಗೆ ಜ್ವರ ಪರೀಕ್ಷೆ ಮಾಡುವ ಥರ್ಮಾಮೀಟರ್, ಸ್ಯಾಚು ರೇಷನ್ ಹಾಗೂ ಪಲ್ಸ್ ಚೆಕ್ ಮಾಡುವ ಆಕ್ಸಿಮೀಟರ್ ಉಳ್ಳ ಕಿಟ್ ಗಳನ್ನು ಕೂಡ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಕೋವಿಡ್ ನಂತಹ ಮಹಾಮಾರಿ ಇಂದಾಗಿ ಅಥಣಿಯ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಹಾಗೂ ಔಷಧೋಪಚಾರಗಳು ಸಿಗದೆ ಸಂಕಷ್ಟ ಪರಿಸ್ಥಿತಿಯಲ್ಲಿ ಇರುವ ಜನತೆಗೆ ಸುಸಜ್ಜಿತ ಆಕ್ಸಿಜನ್ ಕಾನ್ಸನ್ಟ್ರೇಟರ್ ಹಾಗೂ ಬೆಡ್ ನೀಡುವ ಮೂಲಕ ಪ್ರಾಥಮಿಕ ಚಿಕಿತ್ಸೆ ನೀಡುವ ಮುಖೇನ ಅಳಿಲು ಸೇವೆ ಮಾಡುತ್ತಿರುವುದಾಗಿ ಲಕ್ಷ್ಮಣ ಸವದಿ ತಿಳಿಸಿದರು.

ಅಲ್ಲದೇ ಕೊರೊನಾ ಬಂದಿದೆ ಎಂದು ಉದಾಸೀನತೆ ತೋರದೆ ಕೂಡಲೇ ಚಿಕಿತ್ಸೆ ಪಡೆಯಬೇಕು. ಯಾರು ಧೈರ್ಯಗೆಡಬಾರದು, ಭಯದಿಂದಾಗಿಯೇ ಅನೇಕ ಜನ ಜೀವ ತೆತ್ತಿರುವ ಉದಾಹರಣೆ ನಮ್ಮ ಕಣ್ಣಮುಂದಿದೆ. ಇದರಿಂದಾಗಿ ಜನತೆ ತಮ್ಮ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಜನತೆಯಲ್ಲಿ ಮನವಿ ಮಾಡಿದ್ದಾರೆ.

The post 50 ಲಕ್ಷ ರೂ. ಸ್ವಂತ ಹಣದಲ್ಲಿ ‘ಉಚಿತ ಕೋವಿಡ್ ಕೇರ್ ಸೆಂಟರ್’ ಸ್ಥಾಪಿಸಿದ ಸವದಿ appeared first on News First Kannada.

Source: newsfirstlive.com

Source link