50 ವರ್ಷಗಳಿಂದ ಮಸೀದಿಯನ್ನು ಕಾಳಜಿ ವಹಿಸಿ ನೋಡಿಕೊಳ್ಳುತ್ತಿದೆ ಪಶ್ಚಿಮ ಬಂಗಾಳದ ಈ ಹಿಂದೂ ಕುಟುಂಬ | Communal harmony in West Bengal Hindu family takes care of Amanati Masjid for over 50 years


50 ವರ್ಷಗಳಿಂದ ಮಸೀದಿಯನ್ನು ಕಾಳಜಿ ವಹಿಸಿ ನೋಡಿಕೊಳ್ಳುತ್ತಿದೆ ಪಶ್ಚಿಮ ಬಂಗಾಳದ ಈ ಹಿಂದೂ ಕುಟುಂಬ

ಮಸೀದಿಯ ಉಸ್ತುವಾರಿ ವಹಿಸಿರುವ ಹಿಂದೂ ಕುಟುಂಬ

ನಾರ್ಥ್ 24 ಪರಗಣಾಸ್: ಪಶ್ಚಿಮ ಬಂಗಾಳದಲ್ಲಿ (West Bengal) ಕೋಮು ಸೌಹಾರ್ದತೆಯ(communal harmony) ಕಥೆ ಇದು. ಇಲ್ಲಿನ ನಾರ್ಥ್ 24 ಪರಗಣಾಸ್​​ನಲ್ಲಿ ಹಿಂದೂ ಕುಟುಂಬವೊಂದು ಕಳೆದ 50 ವರ್ಷಗಳಿಂದ ಬರಾಸತ್‌ನಲ್ಲಿರುವ ಅಮಾನತಿ ಮಸೀದಿಯನ್ನು(Amanati Masjid)  ಕಾಳಜಿಯಿಂದ ನೋಡಿಕೊಳ್ಳುತ್ತಿದೆ. ನಾರ್ಥ್ 24 ಪರಗಣದ ಬರಾಸತ್‌ನ ಹಿರಿಯ ನಾಗರಿಕರಾದ ದೀಪಕ್ ಕುಮಾರ್ ಬೋಸ್ ಮತ್ತು ಅವರ ಪುತ್ರ ಪಾರ್ಥ ಸಾರಥಿ ಬೋಸ್ ಅವರು ಇಂದಿನ ಜಗತ್ತಿನಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಗೆ ಉದಾಹರಣೆಯಾಗಿದ್ದಾರೆ. ಬೋಸ್ ಕುಟುಂಬವು ಅಮಾನತಿ ಮಸೀದಿಯನ್ನು ನವೀಕರಿಸಿದೆ. ಕಳೆದ 50 ವರ್ಷಗಳಿಂದ, ದೀಪಕ್ ಬೋಸ್ ಅವರು ಉಸ್ತುವಾರಿಯಾಗಿ ಪ್ರತಿದಿನ ಮಸೀದಿಗೆ ಭೇಟಿ ನೀಡುತ್ತಾರೆ. ಮುಸ್ಲಿಂ ಸಮುದಾಯದ ಜನರು ತಮ್ಮ ಪ್ರಾರ್ಥನೆಯ ಸಮಯದಲ್ಲಿ ಆರಾಮವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅದರ ಕಾರಿಡಾರ್‌ಗಳನ್ನು ಸ್ವಚ್ಛಗೊಳಿಸುತ್ತಾರೆ. ಅಮಾನತಿ ಮಸೀದಿಯು ಹಿಂದೂಗಳ ಪ್ರಾಬಲ್ಯವಿರುವ ನಾಬೋಪಲ್ಲಿ ಪ್ರದೇಶದಲ್ಲಿದೆ ಎಂಬುದು ಉಲ್ಲೇಖನೀಯ. 1964 ರಲ್ಲಿ ಬೋಸ್ ಕುಟುಂಬವು ಖುಲ್ನಾದಲ್ಲಿ (ಈಗ ಬಾಂಗ್ಲಾದೇಶ) ಹೊಂದಿದ್ದ ಆಸ್ತಿಯನ್ನು ನಾರ್ಥ್ 24 ಪರಗಣದಲ್ಲಿನ ಭೂಮಿಯೊಂದಿಗೆ ವಿನಿಮಯ ಮಾಡಿಕೊಂಡಿತು. ಆ ಜಮೀನಿನಲ್ಲಿ ಒಂದು ಚಿಕ್ಕ ಮಸೀದಿ ಇರುವುದನ್ನು ಅವರು ಕಂಡುಕೊಂಡರು. ಅನೇಕರು ಆ ಜಾಗವನ್ನು ಒಡೆದು ಕಟ್ಟಡವನ್ನು ನಿರ್ಮಿಸಲು ಸಲಹೆ ನೀಡಿದರೆ, ಬೋಸ್ ಕುಟುಂಬವು ಅದನ್ನು ವಿರೋಧಿಸಿತು. ನಾವು ಅದನ್ನು ನವೀಕರಿಸಲು ನಿರ್ಧರಿಸಿದ್ದೇವೆ ಮತ್ತು ಅಂದಿನಿಂದ ನಾವು ಈ ಮಸೀದಿಯನ್ನು ನೋಡಿಕೊಳ್ಳುತ್ತಿದ್ದೇವೆ. ವಿವಿಧ ಪ್ರದೇಶಗಳಿಂದ ಮುಸ್ಲಿಂ ಸಮುದಾಯದವರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ನಾವು ದೈನಂದಿನ ಆಜಾನ್‌ಗೆ ಇಮಾಮ್ ಅನ್ನು ನೇಮಿಸಿದ್ದೇವೆ ”ಎಂದು ಮಸೀದಿಯ ಉಸ್ತುವಾರಿ ದೀಪಕ್ ಕುಮಾರ್ ಬೋಸ್ ಎಎನ್‌ಐಗೆ ತಿಳಿಸಿದರು.

ದೀಪಕ್ ಅವರ ಪುತ್ರ ಪಾರ್ಥ ಸಾರಥಿ ಬೋಸ್, “ಹಿಂದೂಗಳು ಮಸೀದಿಯನ್ನು ನೋಡಿಕೊಳ್ಳುವುದನ್ನು ಇಲ್ಲಿಯವರೆಗೆ ಯಾರೂ ವಿರೋಧಿಸಿಲ್ಲ. ವರ್ಷಗಳಿಂದ ಮಸೀದಿಯನ್ನು ನೋಡಿಕೊಳ್ಳುತ್ತಿದ್ದೇವೆ. ವಾಸ್ತವವಾಗಿ, ಪ್ರದೇಶದ 2 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಮಸೀದಿಗಳಿಲ್ಲ, ಆದ್ದರಿಂದ ವಿವಿಧ ಪ್ರದೇಶಗಳಿಂದ ಮುಸ್ಲಿಮರು ಇಲ್ಲಿ ಪ್ರಾರ್ಥನೆ ಮಾಡಲು ಬರುತ್ತಾರೆ ಎಂದು ಹೇಳಿದ್ದಾರೆ.

“ನಾನು ಸ್ಥಳೀಯ ಜನರಿಂದ ಯಾವುದೇ ಬೆದರಿಕೆಯನ್ನು ಅನುಭವಿಸಿಲ್ಲ. 1992 ರಿಂದ ನಾನು ನಿರಂತರವಾಗಿ ಆಜಾನ್‌ಗೆ ಬರುವಂತೆ ಜನರನ್ನು ಕೇಳುತ್ತಿದ್ದೇನೆ. ನಾವು ಏಕತೆ ಮತ್ತು ಶಾಂತಿಯನ್ನು ನಂಬುತ್ತೇವೆ ಎಂದು ಇಮಾಮ್ ಸರಾಫತ್ ಅಲಿ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *