ಆತನೊಬ್ಬ ಪಾಕಿಸ್ತಾನದ ವ್ಯಕ್ತಿ. ಮಿಲಿಟರಿ ಸೇರಬೇಕು, ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಅಂತ ಪಾಕ್ ಸೇನೆ ಸೇರುತ್ತಾನೆ, ಸುಮಾರು ವರ್ಷ ಪಾಕ್‌ನ ಸೇನೆಯಲ್ಲಿಯೇ ಗನ್ ಹಿಡಿದು ಹೋರಾಡುತ್ತಾನೆ. ಅಂತಹ ವ್ಯಕ್ತಿಗೆ ಭಾರತ ಸರ್ಕಾರ ಇತ್ತೀಚೆಗೆ ಪದ್ಮಶ್ರೀ ನೀಡಿ ಗೌರವಿಸಿದೆ.
ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಲೆಫ್ಟಿನೆಂಟ್ ಕರ್ನಲ್ ಖಾಜಿ ಸಜ್ಜದ್ ಅಲಿ ಜಹೀರ್. ಇತ್ತೀಚೆಗೆ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಗೌರವ ನೀಡಿ ಗೌರವಿಸಿದೆ. ರಾಷ್ಟ್ರಪತಿ ರಾಮನಾಥ್ ಕೋವಿದ್ ಪ್ರಶಸ್ತಿ ವಿತರಣೆ ಮಾಡಿದ್ದಾರೆ. ಒಬ್ಬ ಪಾಕಿಸ್ತಾನ ವ್ಯಕ್ತಿಗೆ, ಅದರಲ್ಲಿಯೂ ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗೆ ಭಾರತದ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದ್ದು ಏಕೆ? ಅನ್ನೋ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
ಇದನ್ನೂ ಓದಿ:ರಾಷ್ಟಪತಿಗಳ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸಿ ಪದ್ಮಶ್ರೀ ಸ್ವೀಕರಿಸಿದ ಓಡಿಶಾದ ಅಕ್ಷರ ಸಂತ
ಬಲು ರೋಚಕವಾಗಿದೆ ಜಹೀರ್ ಕಥೆ
ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಹೀರ್
ಭಾರತದ ವಿರುದ್ಧ ನಾಲ್ಕು ಯುದ್ಧ ಮಾಡಿ ಸೋತಿರೋ ರಾಷ್ಟ್ರ ಪಾಕಿಸ್ತಾನ. ಸೋತು ಸೋತು ಸುಣ್ಣವಾಗಿರೋ ಪಾಕಿಸ್ತಾನಕ್ಕೆ ನೇರ ಯುದ್ಧ ಮಾಡಿ ಗೆಲ್ಲುವ ಸಾಮರ್ಥ್ಯ ಇಲ್ಲ ಅನ್ನೋದು ಅದಕ್ಕೆ ಅರಿವಾಗಿ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಅದು ಭಯೋತ್ಪಾದಕರನ್ನು ಭಾರತಕ್ಕೆ ನುಸುಳಿಸಿ ಭಾರತದ ವಿರುದ್ಧ ಯುದ್ಧ ಸಾರಿದೆ. ಆದ್ರೆ, ಭಾರತವೇನು ಕೈಕಟ್ಟಿ ಕುಳಿತಿಲ್ಲ, ಪಾಕ್‌ಗೆ ಸರಿಯಾಗಿಯೇ ತಿರುಗೇಟು ನೀಡುತ್ತಿದೆ. ಈ ಎಲ್ಲಾ ಬೆಳವಣಿಗೆಯಿಂದ ಪಾಕಿಸ್ತಾನ ಅಂದ್ರೆ ಭಾರತೀಯರ ರಕ್ತ ಕುದಿಯುತ್ತದೆ. ಈ ನಡುವೆ ಪಾಕ್ ಸೇನೆಯಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗೆ ನಮ್ಮ ದೇಶದ ಪದ್ಮಶ್ರೀ ಗೌರವ ನೀಡಿದ್ದಾರೆ ಎಂದ್ರೆ ಹೇಗಾಗಬೇಡ? ಆದ್ರೆ, ಜಹೀರ್ ಹಿಂದೆ ರೋಚಕ ಸ್ಟೋರಿ ಇದೆ. ಅದನ್ನು ಕೇಳಿದ್ರೆ ಭಾರತೀಯರಾದ ನಾವು ಖುಷಿ ಪಡ್ತೀವಿ.
1971ರಲ್ಲಿ ಭಾರತಕ್ಕೆ ನುಸುಳಿದ್ದ ಜಹೀರ್
ಜಹೀರ್‌ನ ಸೆರೆ ಹಿಡಿದಿದ್ದ ಭಾರತೀಯ ಸೇನೆ
ಅದು, 1971ರ ಸಮಯ. ಅಲ್ಲಿಯವರೆಗೂ ಪಾಕಿಸ್ತಾನದ ವಶದಲ್ಲಿದ್ದ ಬಾಂಗ್ಲಾದೇಶ ಸ್ವಾತಂತ್ರ್ಯವನ್ನು ಬಯಸಿತ್ತು. ಆದ್ರೆ, ಪಾಕಿಸ್ತಾನ ವಿರುದ್ಧ ಯುದ್ಧ ಮಾಡಿ ಗೆದ್ದು ಸ್ವಾತಂತ್ರ್ಯ ಪಡೆಯುವ ಸಾಮರ್ಥ್ಯ ಬಾಂಗ್ಲಾಗೆ ಇಲ್ಲವೇ ಇಲ್ಲವಾಗಿತ್ತು. ಅಂತಹ ಸಂದರ್ಭದಲ್ಲಿ ಬಾಂಗ್ಲಾ ನೆರವಿಗೆ ನಿಂತದ್ದು ಭಾರತ. ಯೆಸ್, ಅಂದಿನ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಬಾಂಗ್ಲಾದೇಶದ ನೆರವಿಗೆ ನಿಲ್ಲುತ್ತೆ. ಅಲ್ಲಿಯವರೆಗೂ ಊರಿಗೆ ನಾನೇ ರಾಜ, ಗೆಲುವು ತನ್ನದೇ ಎಂದು ಹಾರಾಡುತ್ತಿದ್ದ ಪಾಕಿಸ್ತಾನ್‌ಗೆ ಮಾಸ್ಟರ್ ಸ್ಟ್ಕೋಕ್ ಬಿತ್ತು. ಅಂತಿಮವಾಗಿ ಭಾರತದ ನೆರವಿನಿಂದ ಬಾಂಗ್ಲಾಗೆ ಸ್ವಾತಂತ್ರ್ಯ ಸಿಕ್ತು. ಮೊದಲೇ ಭಾರತ ಕಂಡ್ರೆ ಉರಿದು ಬೀಳುತ್ತಿದ್ದ ಪಾಕಿಸ್ತಾನಕ್ಕೆ ಭಾರತ ತಡೆದುಕೊಳ್ಳಲಾಗದು ಏಟು ನೀಡಿತ್ತು. ಈ ಯಶಸ್ಸಿನ ಹಿಂದೆ ಒಬ್ಬ ವ್ಯಕ್ತಿ ಇದ್ದಾನೆ. ಆ ವ್ಯಕ್ತಿ ಯಾರು ಗೊತ್ತಾ?
ಇದನ್ನೂ ಓದಿ:ರಾಷ್ಟ್ರಪತಿಗಳಿಗೇ ದೃಷ್ಟಿ ತೆಗೆದು ಪದ್ಮಶ್ರೀ ಸ್ವೀಕರಿಸಿದ ಜೋಗತಿ ಮಂಜಮ್ಮ..ದೃಷ್ಟಿ ತೆಗೆದಿದ್ದು ಯಾಕೆ ಗೊತ್ತಾ?
ಯೆಸ್, ಆ ಹೀರೋ ಬೇರೆ ಯಾರೂ ಅಲ್ಲ. ಅದೇಗೆ ಪಾಕಿಸ್ತಾನದ ಸೇನೆಯಲ್ಲಿ ಇದ್ದವರು. ಭಾರತ ಸೇನೆಗೆ ನೆರವಾಗಿ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಲು ಕಾರಣವಾದ್ರು ಅನ್ನೋ ಅನುಮಾನವೇ? ಮತ್ತೆ ಪುನಃ 1971ರ ಸಮಯಕ್ಕೆ ಹೋಗೋಣ. ಅಂದು ಎಂದಿನಂತೆ ಭಾರತೀಯ ಸೈನಿಕರು ಪಾಕಿಸ್ತಾನ ಗಡಿಯಲ್ಲಿ ಕಣ್ಗಾವಲಿಟ್ಟು ಕಾಯುತ್ತಿದ್ರು. ಒಂದು ಕಡೆ ಬಾಂಗ್ಲಾಗೆ ಸ್ವಾತಂತ್ರ್ಯ ಕೊಡಿಸಲು ಭಾರತೀಯ ಸೇನೆ ಪಾಕಿಸ್ತಾನ ವಿರುದ್ಧ ಯುದ್ಧಕ್ಕೆ ನಿಂತಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಕರ್ನಲ್ ಖಾಜಿ ಸಜ್ಜದ್ ಅಲಿ ಜಹೀರ್ ಗಡಿಯೊಳಗೆ ನುಗ್ಗುತ್ತಾನೆ. ತಕ್ಷಣ ಆತನ್ನು ಭಾರತೀಯ ಸೇನೆ ವಶಕ್ಕೆ ಪಡೆಯುತ್ತದೆ. ಪಾಕಿಸ್ತಾನದ ಗೂಢಚಾರಿ ಗಡಿಯೊಳಗೆ ನುಗ್ಗಿರಬೇಕು ಅಂತ ಭಾರತ ಅನುಮಾನ ಪಡುತ್ತೆ. ಆದ್ರೆ, ಆತ ನೀಡಿದ ದಾಖಲೆಗಳು ಭಾರತೀಯ ಸೇನೆಯ ಯೋಚನಾ ಲಹರಿಯನ್ನು ಬದಲಿಸಿ ಬಿಟ್ಟಿತ್ತು. ಹಾಗಾದ್ರೆ ಜಹೀರ್ ಭಾರತಕ್ಕೆ ನುಗ್ಗಿದ್ದು ಯಾಕೆ?
ಪಾಕ್ ಸೇನೆಯ ಕ್ರೌರ್ಯಕ್ಕೆ ಬೆಚ್ಚಿದ್ದ ಜಹೀರ್
ದಾಖಲೆ ಕಟ್ಟನ್ನು ಹಿಡಿದುಕೊಂಡು ಬಂದಿದ್ದ ಜಹೀರ್
ವಿರೋಧಿ ಸೇನೆಯಲ್ಲಿರುವ ಸೈನಿಕರನ್ನು ಅಷ್ಟು ಸುಲಭದಲ್ಲಿ ಯಾವ ದೇಶದ ಸೇನೆಯೂ ನಂಬಿಕೆಯನ್ನು ಇಡುವುದಿಲ್ಲ. ಹೀಗಾಗಿ ಜಹೀರ್ ಅನ್ನು ಭಾರತೀಯ ಸೇನೆ ನಾನಾ ರೀತಿಯಲ್ಲಿ ಅನುಮಾನಿಸುತ್ತೆ. ನಾನಾ ರೀತಿಯಲ್ಲಿ ಪರೀಕ್ಷೆ ನಡೆಸುತ್ತೆ. ಪಾಕಿಸ್ತಾನದ ಗೂಢಚಾರಿಯಾಗಿ ಪ್ರವೇಶ ಪಡೆದಿರಬಹುದೇ ಅಂತ ಪ್ರಶ್ನಿಸುತ್ತೆ. ಆದ್ರೆ, ಜಹೀರ್ ಒಂದು ಕಟ್ ದಾಖಲೆಯನ್ನು ಹೊಂದಿದ್ದ. ಅದನ್ನು ಬಿಚ್ಚಿ ತೋರಿಸಿದ ಮೇಲೆ ಭಾರತಕ್ಕೆ ಅರಿವಾಗಿದ್ದು, ಆತ ಪಾಕಿಸ್ತಾನ ಸೇನೆಯಲ್ಲಿರೋ ವ್ಯಕ್ತಿ ಹೌದು. ಆದ್ರೆ, ಗೂಢಚಾರಿ ಅಲ್ಲ. ಭಾರತಕ್ಕೆ ಬೇಕಾದ ಮಹತ್ವದ ವ್ಯಕ್ತಿ ಅನ್ನೋದು ತಿಳಿದು ಬರುತ್ತೆ.
ಭಾರತ ಗೆಲುವಿನಲ್ಲಿ ಪಾತ್ರ ವಹಿಸಿದ ಜಹೀರ್ ದಾಖಲೆ
ಈತ ಪಾಕ್ ವಿರುದ್ಧ ತಿರುಗಿ ಬಿದ್ದಿದ್ದೇಕೆ ಗೊತ್ತಾ?
ಯೆಸ್, ಭಾರತೀಯ ಸೇನೆ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿತು. ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ದೊರಕಿತು ಅಂದ್ರೆ ಅದರಲ್ಲಿ ಜಹೀರ್ ಕೊಡುಗೆಯೂ ಇದೆ. ಈ ವ್ಯಕ್ತಿ ಪಾಕಿಸ್ತಾನದವನಾಗಿದ್ರೂ ಪಾಕ್‌ನ ಕ್ರೌರ್ಯಕ್ಕೆ ಬೆಚ್ಚಿ ಬಿದ್ದಿದ್ದ. ಬಾಂಗ್ಲಾದೇಶ ಸ್ವತಂತ್ರ್ಯವಾಗಲಿ ಅಂತ ಭಯಸಿದ್ದ. ಇದೇ ಕಾರಣಕ್ಕೆ ಪಾಕಿಸ್ತಾನ ಸೇನೆಯ ಕಾರ್ಯ ತಂತ್ರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದ ದಾಖಲೆಯ ಕಟ್ಟು ಇಟ್ಟುಕೊಂಡು ಭಾರತದ ಗಡಿಯೊಳಗೆ ನುಸುಳಿದ್ದ. ಹಾಗೇ ಪಾಕ್ ಸೇನೆಯ ಕಣ್ಣು ತಪ್ಪಿಸಿ ನುಸುಳಿ ಬರುವುದು ಅಷ್ಟು ಸುಲಭದಾಗಿರಲಿಲ್ಲ. ಆದ್ರೆ ಆತ ತಂದ ದಾಖಲೆಯಿಂದ ಭಾರತೀಯ ಸೇನೆಗೆ ಸಿಕ್ಕಿತ್ತು ಆನೆ ಬಲ.
ಪಾಕಿಸ್ತಾನ ಯಾವ ರೀತಿಯಲ್ಲಿ ಕಾರ್ಯ ತಂತ್ರಮಾಡಿಕೊಂಡಿದೆ. ಯಾವ ರೀತಿಯ ಪ್ಲಾನ್ ಹಾಕಿಕೊಂಡಿದೆ ಅನ್ನೋ ಸಂಪೂರ್ಣ ಮಾಹಿತಿ ಭಾರತೀಯ ಸೇನೆಗೆ ಸಿಕ್ಕಿತ್ತು. ಅದನ್ನು ನೋಡಿದ ಭಾರತೀಯ ಸೇನೆಯ ಅಧಿಕಾರಿಗಳು ಪಾಕ್ ಸೋಲಿಸಲು ಏನು ಬೇಕೋ ಆ ತಂತ್ರಗಳನ್ನು ಹೆಣೆದಿದ್ರು. ಭಾರತೀಯ ಸೇನೆಯ ಪ್ರತಿತಂತ್ರಕ್ಕೆ ಪಾಕಿಸ್ತಾನ ಸೇನೆ ಕಕ್ಕಾ ಬಿಕ್ಕಿಯಾಗಿತ್ತು. ಅಂತಿವಾಗಿ ಭಾರತ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿತ್ತು. ಬಾಂಗ್ಲಾದೇಶಕ್ಕೆ 26 ಮಾರ್ಚ್ 1971 ರಲ್ಲಿ ಪಾಕಿಸ್ತಾನದಿಂದ ವಿಮೋಚನೆ ಸಿಕ್ಕಿತ್ತು.
50 ವರ್ಷದ ಹಿಂದೆಯೇ ಜಹೀರ್‌ಗೆ ಗಲ್ಲು ಶಿಕ್ಷೆ
ಈತನ ಹೆಸರು ಕೇಳಿದ್ರೆ ಪಾಕ್ ಉರಿದು ಬೀಳುತ್ತೆ
ಇಂದು ಭಾರತ ಸರ್ಕಾರದಿಂದ ಪದ್ಮಶ್ರೀ ಪುರಸ್ಕಾರ ಪಡೆದಿರೋ ಜಹೀರ್ ಹೆಸರು ಕೇಳಿದ್ರೆ ಪಾಕಿಸ್ತಾನ ಉರಿದು ಬೀಳುತ್ತೆ. ಈತನಿಂದಲೇ ತನ್ನ ತಂತ್ರವೆಲ್ಲ ಭಾರತಕ್ಕೆ ತಿಳಿದು ಬಿಟ್ತು. ಪಾಕ್ ಸೋಲಲು ಇತನೇ ಕಾರಣ ಅಂತ ಅಲ್ಲಿಯ ಸೇನೆ ಹೇಳಿಕೊಳ್ಳುತ್ತಿದೆ. ಹೀಗಾಗಿ 50 ವರ್ಷದ ಹಿಂದೆಯೇ ಅಂದ್ರೆ 1971 ರಲ್ಲಿಯೇ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಜಹೀರ್‌ಗೆ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ಪಾಕ್ ಕೈಯಲ್ಲಿ ಸಿಕ್ಕಿದ್ರೆ ಜಹೀರ್ ಕಥೆ ಯಾವಾಗಲೋ ಮುಗಿದಿರುತ್ತಿತ್ತು. ಈತ ಭಾರತದಲ್ಲಿ ಎಲ್ಲಿದ್ದಾನೆ? ಹೇಗಿದ್ದಾನೆ? ಅನ್ನೋದು ಗೌಪ್ಯವಾಗಿಯೇ ಇತ್ತು.
ಜಹೀರ್ ವಿಷಯದಲ್ಲಿ ಗೌಪ್ಯತೆ ಕಾಪಾಡಿದ ಭಾರತ
ಬಾಂಗ್ಲಾದಿಂದಲೂ ಸಿಕ್ಕಿದೆ ನಾಗರಿಕ ಗೌರವ
ಭಾರತಕ್ಕೆ ಅಷ್ಟೊಂದು ನೆರವು ನೀಡಿದ ಜಹೀರ್ ವಿಷಯದಲ್ಲಿ ಭಾರತ ಇಲ್ಲಿಯವರೆಗೆ ಗೌಪ್ಯತೆಯನ್ನು ಕಾಪಾಡಿಕೊಂಡಿತ್ತು. ಆತನಿಗೆ ನೀಡಬೇಕಾದ ಭದ್ರತೆಯನ್ನು ನೀಡಿತ್ತು. ಆದ್ರೆ, ತೆರೆ ಮರೆಯಲ್ಲಿದ್ದ ಆ ಸಾಧಕನಿಗೆ ಭಾರತ ಸರ್ಕಾರ ಈ ಬಾರಿ ಪದ್ಮಶ್ರೀ ಗೌರವಿ ನೀಡಿ ಗೌರವಿಸಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ವ್ಯಕ್ತವಾಗಿದೆ. ಈ ವ್ಯಕ್ತಿ ಮಾಡಿರೋ ಉಪಕಾರಕ್ಕೆ ಭಾರತ ಅಷ್ಟೇ ಅಲ್ಲ. ನೆರೆಯ ಬಾಂಗ್ಲಾ ದೇಶ ಕೂಡ ಸೌರ್ಯ ಪದಕ, ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಸ್ವಾಧಿನತಾ ಪದಕ್’ ನೀಡಿ ಗೌರವಿಸಿದೆ.
ಪಾಕ್, ಬಾಂಗ್ಲಾ ಜೊತೆಯಿದ್ರೆ ಭಾರತಕ್ಕೆ ಅಪಾಯ ಇತ್ತು
ಯೆಸ್, 1971 ರಲ್ಲಿ ಅಂದಿನ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಯೋಚಿಸಿಯೇ ನಿರ್ಣಯ ಕೈಗೊಂಡಿತ್ತು. ಒಮ್ಮೆ ಭಾರತ ಅಂದು ಆ ನಿರ್ಧಾರ ಕೈಗೊಳ್ಳದಿದ್ರೆ ಭಾರತ ಇನ್ನಷ್ಟು ಸಮಸ್ಯೆ ಏದುರಿಸಬೇಕಾಗುತ್ತಿತ್ತು. ಯಾಕಂದ್ರೆ ಬಾಂಗ್ಲಾ ದೇಶ ಸಂಪೂರ್ಣವಾಗಿ ಭಾರತ ಕುಂಕುಳಿನ ಒಳಗೆ ಸೇರಿಕೊಂಡಿದೆ. ಒಮ್ಮೆ ಭಾರತ, ಪಾಕಿಸ್ತಾನ ಯುದ್ಧವಾದ್ರೆ ಪಾಕ್ ಬಾಂಗ್ಲಾ ನೆಲೆಯನ್ನು ಉಪಯೋಗಿಸಿಕೊಂಡು ಯುದ್ಧ ಮಾಡುತ್ತಿತ್ತು. ಅಷ್ಟೇ ಅಲ್ಲ, ಭಾರತದ ಮೇಲೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿದ್ವು. ಈ ಎಲ್ಲಾ ಕಾರಣಕ್ಕೆ ಭಾರತ ಸೂಕ್ತ ನಿರ್ಧಾರವನ್ನೇ ಕೈಗೊಂಡು ಪಾಕ್‌ಗೆ ಪಾಠ ಕಲಿಸಿತ್ತು. ಭಾರತ ತೆರೆಮರೆಯ ಸಾಧಕರನ್ನು ಹುಡುಕಿ ಪ್ರಶಸ್ತಿ ನೀಡುತ್ತಿದೆ. ಜಹೀರ್ ಸ್ಟೋರಿಯನ್ನು ನೋಡಿದ್ರೆ ಆತ ಇಲ್ಲಿಯವರೆಗೂ ತೆರೆಮರೆಯ ಸಾಧಕನಾಗಿದ್ರು. ಭಾರತದ ಪದ್ಮಶ್ರೀ ಪುರಸ್ಕಾರಕ್ಕೆ ಆತ ಸೂಕ್ತ ವ್ಯಕ್ತಿ ಆಗಿದ್ದಾನೆ.