500 ಕೋಟಿ ರೂ. ಬಜೆಟ್​ನ ‘ಆದಿಪುರುಷ್’ ಚಿತ್ರಕ್ಕೆ ರೀಶೂಟ್; ಮತ್ತೆ ಹೆಚ್ಚಿತು ಪ್ರಭಾಸ್ ಸಿನಿಮಾ ಬಜೆಟ್ – Prabhas Starrer Adipurush Movie To postponed its release date to reshoot some portion


ಹೇಗಾದರೂ ಮಾಡಿ ಈ ಟ್ರೋಲ್​ಗಳಿಂದ ತಪ್ಪಿಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಚಿತ್ರತಂಡದವರು ಬಂದಂತೆ ಇದೆ. ಈ ಕಾರಣಕ್ಕೆ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿ ಕೆಲ ಭಾಗದ ಶೂಟ್ ಅನ್ನು ಮರು ಚಿತ್ರೀಕರಿಸಲು ನಿರ್ಧರಿಸಲಾಗಿದೆ.

‘ಆದಿಪುರುಷ್’ (Adipurush) ಚಿತ್ರ ತಂಡ ಊಹಿಸಿದ್ದೇ ಒಂದು ಆಗಿದ್ದೇ ಒಂದು ಎಂಬಂತಾಗಿದೆ. ಟೀಸರ್​​ಗೆ ಅನೇಕರಿಂದ ಟೀಕೆ ವ್ಯಕ್ತವಾಗಿತ್ತು. ಈ ಟೀಕೆಯನ್ನು ಎದುರಿಸಲು ಚಿತ್ರತಂಡದ ಬಳಿ ಸಾಧ್ಯವೇ ಆಗುತ್ತಿಲ್ಲ. ಈ ಕಾರಣಕ್ಕೆ ಚಿತ್ರತಂಡ ಈಗ ಹಿಂದೇಟು ಹಾಕುತ್ತಿದೆ. ಮೂಲಗಳ ಪ್ರಕಾರ ಜನವರಿ 12ರಂದು ಚಿತ್ರ ರಿಲೀಸ್ ಮಾಡಬೇಕು ಎಂಬ ಪ್ಲ್ಯಾನ್​ನಿಂದ ಚಿತ್ರತಂಡ ಈಗಾಗಲೇ ಹಿಂದೆ ಸರಿದಿದೆ. ಈಗ, ‘ಆದಿಪುರುಷ್’ ಚಿತ್ರತಂಡ ರೀಶೂಟ್ ಮಾಡುವ ಆಲೋಚನೆಯಲ್ಲಿದೆ ಎಂದು ವರದಿ ಆಗಿದೆ. ಇದರಿಂದ ಚಿತ್ರಕ್ಕೆ ಮತ್ತಷ್ಟು ಹೊರೆ ಆಗಲಿದೆ.

‘ಆದಿಪುರುಷ್’ ಚಿತ್ರತಂಡ ನವರಾತ್ರಿ ಸಂದರ್ಭದಲ್ಲಿ ಟೀಸರ್ ರಿಲೀಸ್ ಮಾಡಿತ್ತು. ತಂಡದವರ ಪ್ರಕಾರ ಚಿತ್ರಕ್ಕೆ ಒಳ್ಳೆಯ ರಿಯಾಕ್ಷನ್ ಸಿಗಬಹುದು ಎಂದು ಚಿತ್ರತಂಡದವರು ಭಾವಿಸಿದ್ದರು. ಆದರೆ, ಅದು ಆಗಿಲ್ಲ. ಟೀಸರ್​ಗೆ ನೆಗೆಟಿವ್ ವಿಮರ್ಶೆಗಳು ಹೆಚ್ಚು ಸಿಕ್ಕವು. ಚಿತ್ರ ವಿಚಿತ್ರ ಪ್ರಾಣಿಗಳು ‘ಆದಿಪುರುಷ್’ ಚಿತ್ರದಲ್ಲಿ ಬಳಕೆ ಆಗಿದೆ ಎಂದು ಕೆಲವರು ಹೇಳಿದರು. ಇನ್ನೂ ಕೆಲವರು ರಾವಣನ ಪಾತ್ರಕ್ಕೆ ಅಪಸ್ವರ ತೆಗೆದರು. ಖಿಲ್ಜಿ ರೀತಿಯಲ್ಲಿ ರಾವಣ ಕಾಣಿಸಿಕೊಂಡಿದ್ದಾನೆ ಎಂದು ಅನೇಕರು ಹೇಳಿದರು. ಈ ಎಲ್ಲಾ ಕಾರಣದಿಂದ ಟೀಸರ್ ಟ್ರೋಲ್ ಆಯಿತು. ಮೀಮ್ ಮಾಡುವವರಿಗೆ ಭರ್ಜರಿ ಕಂಟೆಂಟ್ ಸಿಕ್ಕಿತ್ತು.

ಇದು ಚಿತ್ರತಂಡದ ಆತಂಕವನ್ನು ಹೆಚ್ಚಿಸಿದೆ. ಹೇಗಾದರೂ ಮಾಡಿ ಈ ಟ್ರೋಲ್​ಗಳಿಂದ ತಪ್ಪಿಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಚಿತ್ರತಂಡದವರು ಬಂದಂತೆ ಇದೆ. ಈ ಕಾರಣಕ್ಕೆ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿ ಕೆಲ ಭಾಗದ ಶೂಟ್ ಅನ್ನು ಮರು ಚಿತ್ರೀಕರಿಸಲು ನಿರ್ಧರಿಸಲಾಗಿದೆ. ಕೆಲ ದೃಶ್ಯಗಳಲ್ಲಿ ವಿಎಫ್​ಎಕ್ಸ್​ಗಳ ಮೇಲೆ ಮರು ಕೆಲಸ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದಕ್ಕಾಗಿ ಮತ್ತಷ್ಟು ಕೋಟಿ ಖರ್ಚು ಮಾಡಲು ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ಸಿನಿಮಾದ ಬಜೆಟ್ ಮತ್ತಷ್ಟು ಹೆಚ್ಚಲಿದೆ.

TV9 Kannada


Leave a Reply

Your email address will not be published.