ಮುಂಬೈ: ಸಾವಿರಾರು ಗರ್ಭಿನಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದ ನರ್ಸ್ ಒಬ್ಬರು ತಮ್ಮ ಹೆರಿಗೆ ವೇಳೆಯಲ್ಲಿ ಸಾವನ್ನಪ್ಪಿದ ಮನಕಲಕುವ ಘಟನೆ ಮಹಾರಾಷ್ಟ್ದರ ಹೀಗೋಳಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಜ್ಯೋತಿ ಗಾವ್ಲಿ (38) ಎಂಬ ಹೆಸರಿನ ನರ್ಸ್ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಕೆಲ ವರ್ಷಗಳಿಂದ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ತಮ್ಮ ವೃತ್ತಿ ಜೀವನದಲ್ಲಿ 5,000ಕ್ಕೂ ಹೆಚ್ಚು ಹೆರಿಗೆಗಳನ್ನ ಮಾಡಿಸಿದ್ದರು. ಎರಡನೇ ಮಗುವಿನ ಗರ್ಭ ಧರಿಸಿದ್ದ ಅವರು ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ಕೆಲಸ ಕೂಡ ಮಾಡಿದ್ದರು.
ಇದನ್ನೂ ಓದಿ:ಪ್ಯಾರಾಸೈಲಿಂಗ್ ವೇಳೆ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ -ಭಯಾನಕ ವಿಡಿಯೋ
ಈ ವೇಳೆ ನವೆಂಬರ್ 2 ರಂದು ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು. ತಕ್ಷಣವೇ ಅವರಿಗೆ ಹೆರಿಗೆ ಮಾಡಿಸಲಾಗಿದೆ. ಆದರೆ ಹೆರಿಗೆ ಬಳಿಕ ಬೈಲ್ಯಾಟರಲ್ ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ಸಾವಿರಾರು ಮಕ್ಕಳಿಗೆ ಹೆರಿಗೆ ಮಾಡಿಸಿದ ತಾಯಿ ತನ್ನ ಹೆರಗೆಯಲ್ಲಿಯೇ ಸಾವನ್ನಪ್ಪಿದ್ದರು ಎಂದು ನರ್ಸ್ ಸಾವಿಗೆ ಆಸ್ಪತ್ರೆಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಕಂಬನಿ ಮಿಡಿದ್ದಾರೆ.
ಇದನ್ನೂ ಓದಿ:‘ಅಪ್ಪು ಹೆಸ್ರು 1,000 ವರ್ಷಗಳು ನೆನಪಿಡಬೇಕು, ಅಂತಹ ಕೆಲಸಗಳು ಮಾಡುತ್ತೇನೆ’- ನಟ ವಿಶಾಲ್