545 ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ; ಕಿಂಗ್ ಪಿನ್ಗಳ ಜೊತೆ ಸಂಪರ್ಕ ಹೊಂದಿರುವವರಿಗೂ ಸಂಕಷ್ಟ ಶುರು | PSI Recruitment Scam Updates CID to investigate kingpins friends and relatives


545 ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ; ಕಿಂಗ್ ಪಿನ್ಗಳ ಜೊತೆ ಸಂಪರ್ಕ ಹೊಂದಿರುವವರಿಗೂ ಸಂಕಷ್ಟ ಶುರು

ಪೊಲೀಸ್ ಠಾಣೆ ಸೆಲ್​ನಲ್ಲಿರುವ ಕಿಂಗ್​ಪಿನ್​ಗಳು

ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ(PSI Recruitment Scam) ಪ್ರಕರಣಕ್ಕೆ ಸಂಬಂಧಿಸಿ ಅಕ್ರಮ ಮಾಡಿದವರ ಜೊತೆ ಸಂಪರ್ಕ ಹೊಂದಿದವರಿಗೆ ಸಂಕಷ್ಟ ಎದುರಾಗಿದೆ. ಕಿಂಗ್ ಪಿನ್ಗಳ ಜೊತೆ ಸಂಪರ್ಕ ಹೊಂದಿರೋರನ್ನ ಸಿಐಡಿ ವಿಚಾರಣೆ ನಡೆಸುತ್ತಿದೆ. ತಲೆ ಮರೆಸಿಕೊಂಡಿರೋ ದಿವ್ಯಾ ಹಾಗರಗಿ ಜೊತೆ ಈ ಹಿಂದೆ ಸಂಪರ್ಕ ದಲ್ಲಿದ್ದವರಿಗೆ ವಿಚಾರಣೆ ಮಾಡಲಾಗಿತ್ತು. ಈಗ ಬೇರೆ ಬೇರೆ ಸ್ಥಳಗಳಿಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಅಕ್ರಮದ ಬಗ್ಗೆ, ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಕ್ರಮದಲ್ಲಿ ಭಾಗಿಯಾಗಿದ್ರೆ, ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ರೆ ಅವರಿಗೆ ಸಂಕಷ್ಟ ಶುರುವಾಗಲಿದೆ. ಇನ್ನು ಈಗಾಗಲೇ ಆರೋಪಿಗಳು ಪರಾರಿಯಾಗಲು ಸಹಾಯ ಮಾಡಿದ್ದ ಕೆಲವರನ್ನು ಸಿಐಡಿ ಬಂಧಿಸಿದೆ.

ಪ್ರಕರಣದ ಮತ್ತೋರ್ವ ಕಿಂಗ್ಪಿನ್ ಮಂಜುನಾಥ ನಾಪತ್ತೆ
ಪ್ರಕರಣದ ಮತ್ತೋರ್ವ ಕಿಂಗ್ಪಿನ್, ಕಲಬುರಗಿ ನೀರಾವರಿ ಇಲಾಖೆಯಲ್ಲಿ ಎಇ ಆಗಿರುವ ಮಂಜುನಾಥ ಮೇಳಕುಂದಿ ನಾಪತ್ತೆಯಾಗಿದ್ದಾರೆ. ಎಂಟೆಕ್ ಪದವೀಧರರಾಗಿರುವ ಮಂಜುನಾಥ ಪರೀಕ್ಷಾ ಅಕ್ರಮಕ್ಕೆ ಎಲೆಕ್ಟ್ರಾನಿಕ್ ಡಿವೈಸ್ ತರಿಸುತ್ತಿದ್ದರು. ಎಲೆಕ್ಟ್ರಾನಿಕ್ ಡಿವೈಸ್ ಬಳಸುವುದರಲ್ಲಿ ಪರಿಣತಿ ಹೊಂದಿದ್ದ ಮಂಜುನಾಥ ನಾಪತ್ತೆಯಾಗಿದ್ದು ಪತ್ತೆಯಾದರೆ ಅಕ್ರಮದ ಸಾಕಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ. ಈ ಹಿಂದೆ ಬಳಸಿದ್ದ ಡಿವೈಸ್ಗಳು ಇವೆಯಾ, ನಾಶಮಾಡಿದ್ದಾರಾ? ಎಂಬ ಬಗ್ಗೆ ಮಾಹಿತಿ ಸಿಗಲಿದೆ. ಮಂಜುನಾಥ ಸಾಕ್ಷ್ಯನಾಶ ಮಾಡಲು ಹತ್ತಾರು ತಂತ್ರ ಉಪಯೋಗಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ನಾಪತ್ತೆಯಾಗಿರೋ ದಿವ್ಯಾ & ಗ್ಯಾಂಗ್ ಗಾಗಿ ಸಿಐಡಿ ಹುಡುಕಾಟ
ಪ್ರಕರಣದ ಮುಖ್ಯ ಕಿಗ್ ಪಿನ್ ದಿವ್ಯಾ & ಗ್ಯಾಂಗ್ ನಾಪತ್ತೆಯಾಗಿದ್ದು ಸಿಐಡಿ ಹುಡುಕಾಟದಲ್ಲಿ ತೊಡಗಿದೆ. ಮಾಹಿತಿ ಸಿಕ್ಕಲೆಲ್ಲಾ ಹೋಗಿ ಹುಡುಕಾಟ ನಡೆಸುತ್ತಿದ್ದಾರೆ. ಕಲಬುರಗಿ ಯಿಂದ ಕಾಶ್ಮೀರದವರಗೆ ತಲಾಶ್ ನಡೆಯುತ್ತಿದೆ. ಸಿಐಡಿಗೆ ಕೆಲವರಿಂದ ಈಶಾನ್ಯ ರಾಜ್ಯಗಳತ್ತ ಹೋಗಿರೋ ಬಗ್ಗೆ ಮಾಹಿತಿ ಸಿಕ್ಕಿದೆ. ನರ್ಸಿಂಗ್ ಕಾಲೇಜು, ಸಲೂನ್ ಸೇರಿದಂತೆ ಅನೇಕ ಬಿಜಿನೆಸ್ ಮಾಡುತ್ತಿದ್ದ ದಿವ್ಯಾ ಹಾಗರಗಿಗೆ ಈಶಾನ್ಯ ರಾಜ್ಯಗಳಲ್ಲಿ ಕೆಲ ಪರಿಚಿತರು ಇದ್ದಾರೆ. ದಿವ್ಯಾ ಹಾಗರಗಿ ಈಶಾನ್ಯ ರಾಜ್ಯಗಳಿಂದ ಅನೇಕ ಕಾರ್ಮಿಕರನ್ನು ಕರೆತಂದಿದ್ದರು. ಹೀಗಾಗಿ ಅದೇ ಸೇಫ್ ಜಾಗ ಅಂತ ಆ ಕಡೆ ಹೋಗಿರೋ ಅನುಮಾನ ವ್ಯಕ್ತವಾಗಿದೆ. ಆದ್ರೆ ಸದ್ಯ ದಿವ್ಯ ಹಾಗರಗಿಗಾಗಿ ಎಲ್ಲಡೆ ತಲಾಶ್ ನಡೆದಿದೆ. ಆರೋಪಿಗಳ ಬಂಧನಕ್ಕಿಂತ ಸಾಕ್ಷಿ ಸಂಗ್ರಹ ಮುಖ್ಯ. ಸಾಕ್ಷಿ ನಾಶವಾದ್ರೆ ಸಿಗೋದಿಲ್ಲಾ, ಆರೋಪಿಗಳನ್ನು ತಿಂಗಳ ನಂತರವಾದ್ರು ಬಂಧಿಸಬಹುದು. ಆರೋಪಿಗಳ ಪತ್ತೆ ಜೊತೆ ಅವರ ಅಕ್ರಮದ ಜನ್ಮ ಜಾಲಾಡುತ್ತಿದ್ದೇವೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

11 ಅಭ್ಯರ್ಥಿಗಳ ಪೈಕಿ ಇಲ್ಲಿವರಗೆ 7 ಅಭ್ಯರ್ಥಿಗಳ ಬಂಧನ
ಅಕ್ರಮದ ಕೇಂದ್ರ ಸ್ಥಾನ ಜ್ಞಾನಜೋತಿ ಇಂಗ್ಲಿಷ್ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ 11 ಅಭ್ಯರ್ಥಿಗಳ ಆಯ್ಕೆಯಾಗಿದೆ. ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ 11 ಜನರ ಹೆಸರಿದೆ. ಈ 11 ಅಭ್ಯರ್ಥಿಗಳ ಪೈಕಿ ಇಲ್ಲಿವರಗೆ 7 ಅಭ್ಯರ್ಥಿಗಳ ಬಂಧನವಾಗಿದೆ. ಏಳು ಜನರು ಅಕ್ರಮವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದರು. ಉಳಿದ ನಾಲ್ವರ ಬಗ್ಗೆ ಸಿಐಡಿ ಮಾಹಿತಿ ಸಂಗ್ರಹಿಸುತ್ತಿದೆ. ನಾಲ್ವರಲ್ಲಿ ಇಬ್ಬರು ಅಕ್ರಮವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದಾರೆ. ನಾಪತ್ತೆಯಾಗಿರೋ ಇನ್ನಿಬ್ಪರಿಗಾಗಿ ಸಿಐಡಿ ಹುಡುಕಾಡುತ್ತಿದೆ.

TV9 Kannada


Leave a Reply

Your email address will not be published.