545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಭ್ರಷ್ಟಾಚಾರ ಪ್ರಕರಣ; ದಿವ್ಯಾ ಹಾಗರಗಿ ಸೇರಿ 8 ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ | The bail application of 8 accused including Divya has been rejected in Kalaburagi PSI Recruitment Scam issue


545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಭ್ರಷ್ಟಾಚಾರ ಪ್ರಕರಣ; ದಿವ್ಯಾ ಹಾಗರಗಿ ಸೇರಿ 8 ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

ಸಾಂದರ್ಭಿಕ ಚಿತ್ರ

ಆರೋಪಿಗಳ ತನಿಖೆಯಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ. ಅಲ್ಲದೆ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪಿಗಳು ನಿರಂತರವಾಗಿ ಅರೆಸ್ಟ್ ಆಗುತ್ತಿದ್ದಾರೆ.

ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ (PSI Recruitment) ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ (CID) ಅಧಿಕಾರಿಗಳು ಕಠಿಣ ಶ್ರಮ ವಹಿಸಿದ್ದಾರೆ. ಆರೋಪಿಗಳ ತನಿಖೆಯಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ. ಅಲ್ಲದೆ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪಿಗಳು ನಿರಂತರವಾಗಿ ಅರೆಸ್ಟ್ ಆಗುತ್ತಿದ್ದಾರೆ. ಇನ್ನು ಅಧಿಕಾರಿಗಳ ಹಾರ್ಡ್​ವರ್ಕ್​ನಿಂದ ಬಂಧನಕ್ಕೆ ಒಳಗಾಗಿರುವ ಯಾರಿಗೂ ಜಾಮೀನು ಸಿಗುತ್ತಿಲ್ಲ. ದಿವ್ಯಾ ಹಾಗರಗಿ, ಮಹಾಂತೇಶ್ ಪಾಟೀಲ್ ಸೇರಿ 8 ಆರೋಪಿಗಳ ಜಾಮೀನು ಅರ್ಜಿಗಳು ತಿರಸ್ಕೃತವಾಗಿವೆ. ನಿನ್ನೆ ಜಾಮೀನು ಅರ್ಜಿ ತಿರಸ್ಕೃತಗೊಳಿಸಿ ಕಲಬುರಗಿ 1ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.

 ರುದ್ರಗೌಡ ಪಾಟೀಲ್​ನ ಮತ್ತಿಬ್ಬರು ಆಪ್ತರಯ ಅರೆಸ್ಟ್: ಪ್ರಕರಣದಲ್ಲಿ ಕಿಂಗ್​ಪಿನ್​ ರುದ್ರಗೌಡ ಪಾಟೀಲ್​ನ ಮತ್ತಿಬ್ಬರು ಆಪ್ತರನ್ನು ಅರೆಸ್ಟ್ ಮಾಡಲಾಗಿದೆ. ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ನಿವಾಸಿ ಅಸ್ಲಂ ಮುಜಾವರ್ ಹಾಗೂ ಕರಜಗಿ ಗ್ರಾಮದ ಮೂಲದ ಮುನಾಫ್ ಜಮಾದಾರ್ ಬಂಧಿತರು. ಇವರಿಬ್ಬರೂ ರುದ್ರಗೌಡ ಜೊತೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ಬಂಧಿತ ಆರೋಪಿಗಳು ಬ್ಲೂಟೂತ್ಗಳನ್ನು ಸರಬರಾಜು ಮಾಡುತ್ತಿದ್ದರು. ಜೊತೆಗೆ, ರುದ್ರಗೌಡ ಪಾಟೀಲ್ ಜೊತೆ ಸೇರಿ ಅಭ್ಯರ್ಥಿಗಳ ಜೊತೆ ಇವರಿಬ್ಬರೂ ಡೀಲ್ ಮಾಡುತ್ತಿದ್ದರು. ಅಕ್ರಮವಾಗಿ ಪರೀಕ್ಷೆ ಬರೆಯಲು ಸಿದ್ದರಿದ್ದವರನ್ನು ಹುಡುಕಿ ರುದ್ರಗೌಡ ಪಾಟೀಲ್​ಗೆ ಭೇಟಿ ಮಾಡಿಸುತ್ತಿದ್ದರು.

TV9 Kannada


Leave a Reply

Your email address will not be published.