ನವದೆಹಲಿ: ಬಾಲಿವುಡ್​ ನಟಿ ಜೂಹಿ ಚಾವ್ಲಾ ಭಾರತದಲ್ಲಿ, 5G ಮೊಬೈಲ್ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸೋದಕ್ಕೆ ಹೊರಟಿದ್ದಾರೆ. ರೇಡಿಯೇಷನ್​​ ಅನುಷ್ಠಾನದ ವಿರುದ್ಧ ಕಾನೂನು ವ್ಯಾಜ್ಯ ಹೂಡಿದ್ದಾರೆ.

ಈಗ ಇರುವ 3ಜಿ. 4ಜಿ ಗಳಿಗಿಂತಲೂ 5G ತಂತ್ರಜ್ಞಾನದ ರೇಡಿಯೋ ಫ್ರೀಕ್ವೆನ್ಸಿ ರೇಡಿಯೇಷನ್​ಗೆ ಜನರು ಮತ್ತು ಪ್ರಾಣಿಗಳ ಮೇಲೆ 10ರಿಂದ 100 ಪಟ್ಟಿನ ಪರಿಣಾಮವಾಗಲಿದೆ ಎಂದು ಜೂಹಿ ಚಾವ್ಲಾ ಆರೋಪಿಸಿದ್ದಾರೆ. ನ್ಯಾಯಮೂರ್ತಿ ಸಿ. ಹರಿಶಂಕರ್ ಅವರನ್ನು ಒಳಗೊಂಡ ಪೀಠವು ಈ ವಿಚಾರಣೆಯನ್ನು ದೆಹಲಿ ಹೈಕೋರ್ಟ್​ನ ಮತ್ತೊಂದು ಪೀಠಕ್ಕೆ ವರ್ಗಾಯಿಸಿದ್ದಾರೆ. ಈ ಬಗ್ಗೆ ಜೂನ್ 2ನೇ ತಾರೀಕಿನಂದು ಅಹವಾಲು ಆಲಿಸಲಾಗುತ್ತದೆ.

5G ತಂತ್ರಜ್ಞಾನ ಸೇಫ್​ ಅನ್ನೋದನ್ನ ಸಾಬೀತು ಪಡಿಸಿ

ಜೂಹಿ ಚಾವ್ಲಾ ಅವರ ವಕ್ತಾರರುಈ ಕುರಿತು ಮಾತನಾಡಿ 5G ತಂತ್ರಜ್ಞಾನವು ಮನುಷ್ಯರಿಗೆ ಮತ್ತು ಎಲ್ಲ ಜೀವಿಗಳಿಗೂ ಸುರಕ್ಷಿತ ಎಂಬುದನ್ನು ಪ್ರತಿವಾದಿಗಳು ಸ್ಪಷ್ಟಪಡಿಸಬೇಕು. ರೇಡಿಯೋಫ್ರೀಕ್ವೆನ್ಸಿ ರೇಡಿಯೇಷನ್ ಅಧ್ಯಯನ ವರದಿಯನ್ನು ಅದಕ್ಕೆ ಪೂರಕವಾಗಿ ನೀಡುವಂತೆ ಮನವಿ ಮಾಡಲಾಗಿದೆ ಎಂದಿದ್ದಾರೆ.

5G ತಂತ್ರಜ್ಞಾನದ ವಿರುದ್ಧ ನಟಿ ನೀಡಿರೋ ಕಾರಣಗಳೇನು? 

ಮನುಷ್ಯರು ಹಾಗೂ ಭೂಮಿಯ ಪರಿಸರದ ಮೇಲೆ ಮತ್ತೆಂದೂ ರಿಪೇರಿ ಮಾಡಲಾಗದಂಥ ಹಾನಿಯಾಗುತ್ತದೆ. ಅಲ್ಲದೇ 5G ತಂತ್ರಜ್ಞಾನದಿಂದ ಮನುಷ್ಯರ ಮೇಲೆ ಗಂಭೀರ ಪರಿಣಾಮ ಆಗೋದು ಖಂಡಿತ. 5 ಜಿ ನೆಟ್ವರ್ಕ್ ಮನುಷ್ಯರ ಡಿಎನ್​ಎ, ಜೀವಕೋಶಗಳು, ಅಂಗಾಂಗ ವ್ಯವಸ್ಥೆಗೆ ಹಾನಿ ಮಾಡಿರುವುದು ಕ್ಲಿನಿಕಲ್ ಪರೀಕ್ಷೆಯಲ್ಲಿ ಕಂಡುಬಂದಿದೆ. ಇದರ ಜತೆಗೆ ಪ್ರಾಣಿಗಳು ಮತ್ತು ಸಸ್ಯಗಳ ಮೇಲೂ ಪರಿಣಾಮ ಆಗುತ್ತೆ ಅನ್ನೋದು ಗೊತ್ತಾಗಿದೆ. ಎಲೆಕ್ಟ್ರೋಮ್ಯಾಗ್ನೆಟಿಕ್ ಮಾಲಿನ್ಯದಿಂದ, ಈಗಿನ ಆಧುನಿಕ ಜನರಲ್ಲಿ ಕ್ಯಾನ್ಸರ್, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಬರಬಹುದು ಅನ್ನೋದು 10,000ಕ್ಕೂ ಹೆಚ್ಚು ಅಧ್ಯಯನಗಳಿಂದ ಗೊತ್ತಾಗಿದೆ. ಇಷ್ಟು ಅಂಕಿಅಂಶಗಳಿದ್ದರೂ ನಿರ್ಲಕ್ಷ್ಯ ಮಾಡಲು ಸಾಧ್ಯವೇ? ಅಂತ ಕೋರ್ಟ್​ಗೆ ಪ್ರಶ್ನೆ ಮಾಡಿದ್ದಾರೆ.

ಅಷ್ಟೇ ಅಲ್ಲ, ಮಾರ್ಚ್ 20, 2019ರಲ್ಲಿ ಆರ್​ಟಿಐ ಅಡಿ, ದೂರಸಂಪರ್ಕ ಸಚಿವಾಲಯವು ಉತ್ತರಿಸಿದ್ದು, ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನೆ ಮಂಡಳಿಯ ಮಾಹಿತಿಯಂತೆ, 2G, 3G, 4G, 5G ಸೆಲ್ಯುಲಾರ್ ಟೆಕ್ನಾಲಜಿಯ ಪರಿಣಾಮ ಮನುಷ್ಯರು, ಪ್ರಾಣಿಗಳು, ಪಕ್ಷಿಗಳು, ಸಸ್ಯಗಳು ಮತ್ತು ಇತರ ಜೀವಿಗಳ ಮೇಲೆ ಯಾವುದೇ ರೀತಿಯ ಅಧ್ಯಯನ ಆಗಿಲ್ಲ ಅಂತ ತಿಳಿಸಿದ್ದಾರೆ.

The post 5G ನೆಟ್ವರ್ಕ್ ವಿರುದ್ಧ ಜೂಹಿ ಚಾವ್ಲಾ ಯುದ್ಧ: ಕೋರ್ಟ್ ಮೆಟ್ಟಿಲೇರಿದ ಬಹುಭಾಷಾ ನಟಿ appeared first on News First Kannada.

Source: newsfirstlive.com

Source link