ಬೆಂಗಳೂರು: ಕಳೆದ 6 ತಿಂಗಳಿನಿಂದ ವೇತನ ದೊರಕದೆ ತೀವ್ರ ತೊಂದರೆಗೆ ಸಿಲುಕಿಕೊಂಡಿರುವ ದಿ ಮೈಸೂರು ಪೇಪರ್ ಮಿಲ್ಸ್ ಅರಣ್ಯ ನೌಕರರ ವೇತನ ಬಿಡುಗಡೆಗೆ ಸೂಚನೆ ನೀಡುವಂತೆ ದಿ ಮೈಸೂರು ಪೇಪರ್ ಮಿಲ್ಸ್ ಫಾರೆಸ್ಟ್ ಎಂಪ್ಲಾಯೀಸ್ ಅಸೋಸಿಯೇಷನ್ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯಿಂದ ತೊಂದರೆಗೆ ಈಡಾಗಿರುವ ಕಾರ್ಮಿಕರುಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಅವರ ನೆರವಿಗೆ ಸ್ಪಂದಿಸಿರುತ್ತೀರಿ. ಆದರೆ, ಎಂ.ಪಿ.ಎಂ ಅರಣ್ಯ ಇಲಾಖೆಯಲ್ಲಿ ರಾತ್ರಿ-ಹಗಲು ಎನ್ನದೇ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಕಳೆದ 6 ತಿಂಗಳಿನಿಂದ ವೇತನ ನೀಡದಿರುವುದು ಮತ್ತು 2010 ರಿಂದ ನೌಕರರಿಗೆ ಬರಬೇಕಾದ ವೇತನ ಬಾಕಿಯನ್ನು ನೀಡದೇ ಇರುವುದು ಬಹಳ ದುಖಃಕರ ಸಂಗತಿಯಾಗಿದೆ.

ಎಂ.ಪಿ.ಎಂ ಅರಣ್ಯ ನೌಕರರು ವೇತನವಿಲ್ಲದೆ ಸಂಸಾರ ಸಾಗಿಸಲು ಆಗದೇ ಅವರ ಬದುಕು ಬೀದಿಪಾಲಾಗಿರುತ್ತದೆ. ನೌಕರರು ಮನನೊಂದು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಆದ್ದರಿಂದ ಅರಣ್ಯ ನೌಕರರ 6 ತಿಂಗಳ ವೇತನ ಮತ್ತು 2010 ರಿಂದ ಬರಬೇಕಾದ ಹಳೇ ಬಾಕಿ ವೇತನವನ್ನು ನೀಡಲು ಕೂಡಲೇ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಸಂಘದ ಅಧ್ಯಕ್ಷರಾದ ಜಗನ್ನಾಥ ಬಂಗೇರ ಅವರು ವಿನಂತಿಸಿಕೊಂಡಿದ್ದಾರೆ.

The post 6 ತಿಂಗಳ ವೇತನ ಬಿಡುಗಡೆ ಮಾಡಿ- ಸಿಎಂಗೆ ದಿ ಮೈಸೂರು ಪೇಪರ್ ಮಿಲ್ಸ್ ಅರಣ್ಯ ನೌಕರರ ಮನವಿ appeared first on Public TV.

Source: publictv.in

Source link