6 ದಿನ ನಡೆಯುವ ಕತ್ರಿನಾ ಮದುವೆಗೆ ಮಾಜಿ ಬಾಯ್​ಫ್ರೆಂಡ್​ಗಳಿಗೆ ಇದೆಯಾ ಆಹ್ವಾನ? ರಣಬೀರ್​, ಸಲ್ಲು ಕೂಡ ಬರ್ತಾರಾ? | Here is The guest List Of Katrina Kaif And Vicky Kaushal Salman Khan And Ranbir Kapoor May attend


6 ದಿನ ನಡೆಯುವ ಕತ್ರಿನಾ ಮದುವೆಗೆ ಮಾಜಿ ಬಾಯ್​ಫ್ರೆಂಡ್​ಗಳಿಗೆ ಇದೆಯಾ ಆಹ್ವಾನ? ರಣಬೀರ್​, ಸಲ್ಲು ಕೂಡ ಬರ್ತಾರಾ?

ಸಲ್ಲು-ಕತ್ರಿನಾ-ರಣಬೀರ್​

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್ ಮದುವೆಗೆ (Katrina Kaif And Vicky Kaushal Marriage)​ ದಿನಾಂಕ ನಿಗದಿಯಾಗಿದೆ. ಡಿಸೆಂಬರ್​ 7ರಿಂದ 12ರವರೆಗೆ ಮದುವೆ ಕಾರ್ಯಕ್ರಮ ನಡೆಯಲಿದೆ. ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ (Six Senses Fort Hotel) ಮದುವೆ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ಸುಮಾರು ಒಂದು ವಾರಗಳ ಕಾಲ ಮದುವೆ ಕಾರ್ಯಕ್ರಮ ನಡೆಯಲಿದ್ದು, ವಿವಿಧ ರೀತಿಯ ಶಾಸ್ತ್ರಗಳು ನೆರವೇರಲಿದೆ. ಈಗಾಗಲೇ ಬಾಲಿವುಡ್​ ಸೆಲೆಬ್ರಿಟಿಗಳಿಗೆ ಆಮಂತ್ರಣ ಹೋಗಿದೆ. ಹಾಗಾದರೆ, ಈ ಸೆಲೆಬ್ರಿಟಿ ಮದುವೆಗೆ ಯಾರೆಲ್ಲಾ ತೆರಳಲಿದ್ದಾರೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ವಿಕ್ಕಿ ಹಿಂದು, ಕತ್ರಿನಾ ಕೈಫ್​ ಮುಸ್ಲಿಂ. ಈ ಕಾರಣಕ್ಕೆ ಎರಡೂ ಧರ್ಮದ ಪ್ರಕಾರ ಮದುವೆ ಕಾರ್ಯ ನಡೆಯಲಿದೆ ಎನ್ನಲಾಗುತ್ತಿದೆ. ಹೀಗಾಗಿ, ಆರು ದಿನಗಳ ಕಾಲ ಮದುವೆ ಕಾರ್ಯಗಳನ್ನು ಆಯೋಜನೆ ಮಾಡಲಾಗಿದೆ. ವಿವಾಹ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದ್ದು, ಬಾಲಿವುಡ್​ ಸೆಲೆಬ್ರಿಟಿಗಳು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಸೆಲೆಬ್ರಿಟಿ ಮದುವೆ ಆದ ಕಾರಣ ಸಾಕಷ್ಟು ಭದ್ರತೆ ಕೂಡ ಒದಗಿಸಲಾಗುತ್ತಿದೆ.

ಕೊವಿಡ್​ ಕಡಿಮೆ ಆಗಿದೆ. ಈ ಕಾರಣಕ್ಕೆ ಮದುವೆ ಅದ್ದೂರಿಯಾಗಿ ನಡೆಯಲಿದೆ. ಈ ಹೈ ಪ್ರೊಫೈಲ್​ ಕಲ್ಯಾಣಕ್ಕೆ ಕುಟುಂಬದವರು, ಆಪ್ತರು, ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಕರಣ್​ ಜೋಹರ್, ಅಲಿ ಅಬ್ಬಾಸ್​ ಜಫರ್​, ಕಬೀರ್​ ಖಾನ್​, ರೋಹಿತ್​ ಶೆಟ್ಟಿ, ಸಿದ್ದಾರ್ಥ್​ ಮಲ್ಹೋತ್ರಾ, ಕಿಯಾರಾ ಆಡ್ವಾಣಿ, ವರುಣ್​ ಧವನ್​ ಹಾಗೂ ಅವರ ಪತ್ನಿ ನತಾಶಾ ದಲಾಲ್​ ಸೇರಿ ಅನೇಕರಿಗೆ ಆಮಂತ್ರಣ ಹೋಗಿದೆ.

ಸಲ್ಮಾನ್​ ಖಾನ್​ ಅವರನ್ನು ಕತ್ರಿನಾ ಪ್ರೀತಿಸುತ್ತಿದ್ದರು. ಇವರ ಸಂಬಂಧ ಮುರಿದುಬಿದ್ದಿದೆ. ಆದರೆ, ಇಬ್ಬರ ನಡುವೆ ಒಳ್ಳೆಯ ಫ್ರೆಂಡ್​ಶಿಪ್​ ಇದೆ. ಈ ಕಾರಣಕ್ಕೆ ಸಲ್ಮಾನ್​ ಖಾನ್​ಗೂ ಮದುವೆ ಆಮಂತ್ರಣ ಹೋಗಿದೆ ಎನ್ನಲಾಗುತ್ತಿದೆ. ಆಲಿಯಾ ಹಾಗೂ ಕತ್ರಿನಾ ನಡುವೆ ಉತ್ತಮ ಗೆಳೆತನ ಇದೆ. ಹೀಗಾಗಿ, ಆಲಿಯಾ ಭಟ್​ ಹಾಗೂ ಅವರ ಭಾವಿ ಪತಿ ರಣಬೀರ್ ಕಪೂರ್​​​ಗೂ ಮದುವೆಯ ಕರೆಯೋಲೆ ಸಿಕ್ಕಿದೆ. ರಣಬೀರ್​ ಜತೆಯೂ ಕತ್ರಿನಾ ರಿಲೇಶನ್​ಶಿಪ್​ನಲ್ಲಿದ್ದರು  ಒಟ್ಟಿನಲ್ಲಿ ಈ ಮದುವೆಯಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳ ದಂಡು ನೆರೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಇದನ್ನೂ ಓದಿ: Nykaa IPO: ಅಬ್ಬಬ್ಬಾ.. ನೈಕಾ ಕಂಪನಿಯಲ್ಲಿ ಹೂಡಿಕೆ ಮಾಡಿ ಕತ್ರಿನಾ ಕೈಫ್​ ಮತ್ತು ಆಲಿಯಾ ಭಟ್​ ಗಳಿಸಿದ್ದು ಇಷ್ಟೊಂದಾ?

ಮದುವೆ ಬಳಿಕ ಹನಿಮೂನ್​ಗೆ ಹೋಗಲ್ಲ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​; ಕಾರಣ ಏನು?

TV9 Kannada


Leave a Reply

Your email address will not be published. Required fields are marked *