ಬೆಂಗಳೂರು: ಲೋನ್​ ಕೊಡಿಸೋದಾಗಿ ನಂಬಿಸಿ ಉದ್ಯಮಿಗಳಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾನೆ ಎನ್ನಲಾದ ಅಂತರಾಜ್ಯ ವಂಚಕನೊಬ್ಬನನ್ನು ಸಿಸಿಬಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಹರಿನಾಡರ್ ಬಂಧಿತ ಆರೋಪಿ.

ತಮಿಳುನಾಡು ಮೂಲದ ಹರಿನಾಡರ್ ಅಲಿಯಾಸ್​ ಹರಿ ಗೋಪಾಲಕೃಷ್ಣ ನಾಡರ್​, ಕೇರಳದ ರಂಜಿತ್ ಪಣಿಕ್ಕರ್ ಹಾಗೂ ತಂಡ ಬೆಂಗಳೂರಿನ ಉದ್ಯಮಿಯೊಬ್ಬರಿಗೆ ಕಡಿಮೆ ಬಡ್ಡಿದರದಲ್ಲಿ ಲೋನ್ ಕೊಡಿಸೋದಾಗಿ ನಂಬಿಸಿದ್ದರು. 6 ಪರ್ಸೆಂಟ್​​​ ಬಡ್ಡಿಗೆ 360 ಕೋಟಿ ರೂಪಾಯಿ ಸಾಲ ಕೊಡಿಸಾಗಿ ಹೇಳಿ, ಉದ್ಯಮಿಯನ್ನ ಫೈವ್​ಸ್ಟಾರ್​ ಹೋಟೆಲ್​ಗೆ ಕರೆಸಿ ಮೀಟಿಂಗ್ ಮಾಡಿದ್ದರು. ಅಲ್ಲದೆ ₹360 ಕೋಟಿಯ ನಕಲಿ ಡಿ.ಡಿ ತೋರಿಸಿ ನಂಬಿಸಿದ್ದರು. ಬಳಿಕ ಡಿ.ಡಿ ನೀಡಬೇಕೆಂದರೆ, ಲೋನ್ ಸರ್ವೀಸ್ ಚಾರ್ಜ್ ಆಗಿ ಲೋನ್ ಮೊತದ ಶೇಕಡ 2ರಷ್ಟು ಹಣ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.

ಇದನ್ನ ನಂಬಿದ ಉದ್ಯಮಿ ಸರ್ವೀಸ್​ ಜಾರ್ಜ್​​ಗೆಂದು ಹರಿನಾಡರ್ ಹೇಳಿದಂತೆ ಎರಡು ಪರ್ಸೆಂಟ್​​ ಆಗಿ ಒಟ್ಟು 7.20 ಕೋಟಿ ರೂಪಾಯಿ ಹಣವನ್ನ ಆರೋಪಿಗೆ ವರ್ಗಾವಣೆ ಮಾಡಿದ್ದರು. ಆದ್ರೆ ಅತ್ತ ಲೋನ್ ಕೂಡ ಕೊಡಿಸದೇ, 7 ಕೋಟಿ ಹಣವನ್ನೂ ವಾಪಸ್​ ನೀಡದೇ ಹರಿನಾಡರ್​ ಉದ್ಯಮಿಗೆ ನಾಮ ಹಾಕಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಉದ್ಯಮಿ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದ್ಯ ಸಿಸಿಬಿ ಪೊಲೀಸರು ಹರಿನಾಡರ್​ನನ್ನು ಕೇರಳದ ಕೋವಲಂನಲ್ಲಿ ಬಂಧಿಸಿದ್ದಾರೆ. ಆರೋಪಿಯಿಂದ 8 ಲಕ್ಷ ರೂಪಾಯಿ ನಗದು ಮತ್ತು 2 ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನ ವಶಪಡಿಸಿಕೊಂಡಿದ್ದಾರೆ.

The post 6% ಬಡ್ಡಿಗೆ ₹360 ಕೋಟಿ ಲೋನ್‌ ಕೊಡಿಸ್ತೀನಿ ಅಂತಾ ಉದ್ಯಮಿಗೆ ಉಂಡೆನಾಮ ಹಾಕಿದ್ದ ಖದೀಮ ಅರೆಸ್ಟ್​ appeared first on News First Kannada.

Source: newsfirstlive.com

Source link