6-8 ವಾರಗಳಲ್ಲಿ ಮೂರನೇ ಅಲೆ ಪ್ರಾರಂಭವಾಗಲಿದೆ- ತಜ್ಞರಿಂದ ಮತ್ತೆ ಎಚ್ಚರಿಕೆ

6-8 ವಾರಗಳಲ್ಲಿ ಮೂರನೇ ಅಲೆ ಪ್ರಾರಂಭವಾಗಲಿದೆ- ತಜ್ಞರಿಂದ ಮತ್ತೆ ಎಚ್ಚರಿಕೆ

ನವದೆಹಲಿ: ದೇಶದಲ್ಲಿ ಮುಂದಿನ 6 ರಿಂದ 8 ವಾರಗಳಲ್ಲಿ ಕೊರೊನಾ ಸೋಂಕಿನ 3 ನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ಏಮ್ಸ್​ನ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ಲಾಕ್​ಡೌನ್ ಸಡಿಲಿಕೆ ಮಾಡಿ ಅನ್​ಲಾಕ್ ಪ್ರಕ್ರಿಯೆ ಪ್ರಾರಂಭಿಸುತ್ತಿದ್ದಂತೆಯೇ ಕೋವಿಡ್​ ನಿಯಮಗಳನ್ನು ಪಾಲಿಸುವುದು ಕಣ್ಮರೆಯಾಗುತ್ತಿದೆ. ಮೊದಲ ಮತ್ತು ಎರಡನೇ ಅಲೆಯ ನಂತರವೂ ನಾವು ಪಾಠ ಕಲಿತಿಲ್ಲವೆಂದು ಅನ್ನಿಸುತ್ತದೆ. ಇಷ್ಟೆಲ್ಲ ಆದರೂ ಜನರು ಮತ್ತೆ ಗುಂಪು ಸೇರುತ್ತಿದ್ದಾರೆ.. ದೇಶದ ಮಟ್ಟದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಾಣಲು ಕೆಲವು ಸಮಯ ತೆಗೆದುಕೊಳ್ಳುತ್ತದೆ. ಥರ್ಡ್ ವೇವ್​ ಅನಿರೀಕ್ಷಿತ.. ಅದು 6 ರಿಂದ 8 ವಾರಗಳಲ್ಲಿ ಕಾಣಿಸಿಕೊಳ್ಳಬಹುದು. ಅಥವಾ ಇನ್ನೂ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಇದೆಲ್ಲವೂ ನಾವು ಹೇಗೆ ಕೊರೊನಾ ನಿಮಯಗಳನ್ನ ಪಾಲಿಸುತ್ತೇವೆ ಎಂಬುದರ ಮೇಲೆ ನಿರ್ಧಾರವಾಗಲಿದೆ.

ವ್ಯಾಕ್ಸಿನೇಷನ್ ನಮ್ಮ ಬಹುಮುಖ್ಯ ಸವಾಲು.. ಹೊಸ ಅಲೆ ಸಾಮಾನ್ಯವಾಗಿ 3 ತಿಂಗಳ ಅಂತರದಲ್ಲಿ ಕಾಣಿಸಿಕೊಳ್ಳುತ್ತದೆ.. ಅದು ಕೆಲವು ಪ್ರಮುಖ ಅಂಶಗಳ ಆಧಾರದ ಮೇಲೆ ಸಂಭವಿಸುತ್ತದೆ. ಬಹುಶಃ ಮಿನಿ ಲಾಕ್​ಡೌನ್​ನಂಥ ಕ್ರಮಗಳನ್ನ ತೆಗೆದುಕೊಳ್ಳಬೇಕಾಗಬಹುದು. ವ್ಯಾಕ್ಸಿನೇಷನ್ ಹಾಕಿಸಿಕೊಳ್ಳದಿದ್ದರೆ ಇದರಿಂದ ನಾವು ಹೊಡೆತ ತಿನ್ನಲಿದ್ದೇವೆ. ಹಾಟ್​ಸ್ಪಾಟ್​ಗಳಲ್ಲಿ ಟೆಸ್ಟಿಂಗ್, ಟ್ರ್ಯಾಕಿಂಗ್, ಮತ್ತು ಟ್ರೀಟಿಂಗ್ ಹೆಚ್ಚಿಸಬೇಕಿದೆ. ವೈರಸ್ ಮ್ಯೂಟೇಟ್ ಆಗುತ್ತಿದೆ. ನಾವು ಎಚ್ಚರವಹಿಸಬೇಕಿದೆ. ಮೊದಲ ಅಲೆಯಲ್ಲಿ ಸೋಂಕು ವೇಗವಾಗಿ ಹರಡುತ್ತಿರಲಿಲ್ಲ. ಎರಡನೇ ಅಲೆಯಲ್ಲಿ ಸೋಂಕು ವೇಗ ಪಡೆದುಕೊಳ್ತು. ಸದ್ಯ ಡೆಲ್ಟಾ ವೇರಿಯೆಂಟ್ ಇದ್ದು ಇದು ಮತ್ತಷ್ಟು ವೇಗವಾಗಿ ಹರಡುತ್ತಿದೆ ಎಂದು ಏಮ್ಸ್ ವೈದ್ಯ ರಂದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.

The post 6-8 ವಾರಗಳಲ್ಲಿ ಮೂರನೇ ಅಲೆ ಪ್ರಾರಂಭವಾಗಲಿದೆ- ತಜ್ಞರಿಂದ ಮತ್ತೆ ಎಚ್ಚರಿಕೆ appeared first on News First Kannada.

Source: newsfirstlive.com

Source link