60 ಸೆಕೆಂಡ್ಸ್​ನಲ್ಲಿ 305 ಪಂಚ್!​ ಕನ್ನಡದ ಪೋರನಿಂದ 35 ವರ್ಷದ ವ್ಯಕ್ತಿ ಮಾಡಿದ್ದ ದಾಖಲೆ ಉಡೀಸ್


ಬೆಳಗಾವಿ: ಜಿಲ್ಲೆಯ ಅಥಣಿ ಪಟ್ಟಣದ ಬಾಲಕನೊಬ್ಬ ಕೇವಲ 60 ಸೆಕೆಂಡುಗಳಲ್ಲಿ ಬರೋಬ್ಬರಿ 305 ಕರಾಟೆ ಪಂಚ್​ ಮಾಡುವ ವಿಶ್ವದಾಖಲೆ ನಿರ್ಮಿಸಿದ್ದಾನೆ.

ಈ ಹಿಂದೆ ಇದೇ ರೀತಿ 254 ಪಂಚ್ ಮಾಡಿದ್ದ  ಗೋವಾದ 35 ವರ್ಷದ ವ್ಯಕ್ತಿಯ ದಾಖಲೆಯನ್ನು 6 ವರ್ಷದ  ಸುಶೀಲ್​ ಕುಮಾರ ವಿವೇಕ ಹೆಗಡೆ ಮುರಿದು ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾನೆ. ಬಾಲಕನ್ನ ಈ ದಾಖಲೆಯನ್ನ ಶೊಟೋಕಾನ್ ಕರಾಟೆಯ ರಾಷ್ಟ್ರಾಧ್ಯಕ್ಷ ವಿನೋದ್ ಕುಮಾರ್ ಅವರು ಅಥನಿಗೆ ಆಗಮಿಸಿ ಈ ವಿಶ್ವ ದಾಖಲೆಯನ್ನು ದೃಢಿಕರಿಸಿದ್ದಾರೆ.

ಇನ್ನು ಬಾಲಕನ ಅದ್ಭುತ ಸಾಧನೆಗೆ ಅಥಣಿ ಸೇರಿದಂತೆ ಇಡೀ ರಾಜ್ಯದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಥಣಿಯ ಕರಾಟೆ ತರಬೇತುದಾರ ಮೋಹನ ಸಿಂಗ್ ರಜಪೂತ ಮಾರ್ಗದರ್ಶನ ನೀಡಿದ್ದಾರೆ. ಕೇವಲ ಒಂದು ನಿಮಿಷದಲ್ಲಿ ಈ ಹಿಂದೆ ಮಾಡಿರುವ ದಾಖಲೆಯನ್ನು ಮುರಿದು ವಿಶ್ವ ದಾಖಲೆ ಮಾಡಿರುವುದು ನಮ್ಮೆಲ್ಲರಿಗೆ ಸಂತಸದ ವಿಚಾರ ಎಂದು ತರಬೇತುದಾರ ಮೋಹನ ಸಿಂಗ್ ರಜಪೂತ ಸಂತಸ ಪಟ್ಟಿದ್ದಾರೆ.

News First Live Kannada


Leave a Reply

Your email address will not be published.