64ನೇ ವಯಸ್ಸಿಗೆ ಮದುವೆಯಾದ ವ್ಯಕ್ತಿಗೆ ನಿರಾಸೆ; ಒಂದೇ ತಿಂಗಳಿಗೆ ಜೀವನಾಂಶ ಕೇಳಿದ ಪತ್ನಿ – Wife demand alimony from her husband for one month after marriage


ಮದುವೆಯಾಗಿ ಸುಂದರ ಸಂಸಾರ ನಡೆಸಬೇಕೆಂದುಕೊಂಡು 64 ವರ್ಷದ ವ್ಯಕ್ತಿ 58 ವರ್ಷದ ವಿಚ್ಛೇದಿತೆ ಮಹಿಳೆಯೊಂದಿಗೆ ವಿವಾಹವಾಗಿದ್ದಾರೆ.

64ನೇ ವಯಸ್ಸಿಗೆ ಮದುವೆಯಾದ ವ್ಯಕ್ತಿಗೆ ನಿರಾಸೆ; ಒಂದೇ ತಿಂಗಳಿಗೆ ಜೀವನಾಂಶ ಕೇಳಿದ ಪತ್ನಿ

ಸಾಂಧರ್ಬಿಕ ಚಿತ್ರ

ಬೆಂಗಳೂರು: 64ನೇ ವಯಸ್ಸಿನಲ್ಲಿ ಮದುವೆಯಾಗಿ ಸುಂದರ ಸಂಸಾರ ನಡೆಸಬೇಕೆಂದುಕೊಂಡಿದ್ದ ವ್ಯಕ್ತಿಗೆ ಪತ್ನಿಯಿಂದ ನಿರಾಸೆಯಾಗಿದೆ. 2020 ಏ.29 ರಂದು 64 ವರ್ಷದ ವ್ಯಕ್ತಿ 58 ವರ್ಷದ ವಿಚ್ಛೇದಿತೆ ಮಹಿಳೆಯೊಂದಿಗೆ ವಿವಾಹವಾಗಿದ್ದಾರೆ. ಆದರೆ ಮದುವೆಯಾಗಿ ಒಂದೇ ತಿಂಗಳಿಗೆ ಸರಿಯಾಗಿ ಮೇ 29ಕ್ಕೆ ಪತ್ನಿ ಪತಿಯನ್ನು ತೊರೆದು ವಿಚ್ಛೇದನ ಹಾಗೂ ಜೀವನಾಂಶ ಕೋರಿ ಮೈಸೂರು ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನಂತರ ಮಹಿಳೆ ವಿಚ್ಛೇದನದ ಅರ್ಜಿ ಹಿಂಪಡೆದು ಜೀವನಾಂಶ ನೀಡುವಂತೆ ಕೋರಿದಳು. ಆಗ ಮೈಸೂರಿನ ನ್ಯಾಯಾಲಯ 7 ಸಾವಿರ ಜೀವನಾಂಶ ನೀಡಬೇಕೆಂದು ಆದೇಶ ಹೊರಡಿಸಿತ್ತು.

ಆಗ ವ್ಯಕ್ತಿ ಮೈಸೂರಿನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಈಗ 67 ವರ್ಷ ಆಗಿರುವುದರಿಂದ ಜೀವನಾಂಶ ನೀಡಲು ಆಗುವುದಿಲ್ಲ. ಸಹಬಾಳ್ವೆಗೆ ಸಿದ್ಧನಿರುವುದರಿಂದ ಜೀವನಾಂಶ ವಿಧಿಸದಂತೆ ಮನವಿ ಮಾಡಿದ್ದರು.

ಆದರೆ ಹೈಕೋರ್ಟ್​ ಮಹಿಳೆ ಪರವಾಗಿ ತೀರ್ಪು ನೀಡಿದ್ದು, ವಿಚ್ಛೇದನ ಅರ್ಜಿ ಹಿಂಪಡೆದರೂ ಪತ್ನಿ ಜೀವನಾಂಶಕ್ಕೆ ಅರ್ಹಳು. ಪತ್ನಿಗೆ ಜೀವನಾಂಶ ನೀಡುವುದು ಪತಿಯ ಕರ್ತವ್ಯವಾಗಿದೆ. ಹೀಗಾಗಿ ಜೀವನಾಂಶ ನೀಡುವಂತೆ ಮೈಸೂರು ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.