ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆಗೆ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲು ಬೆಡ್​ ಹಾಗೂ ಅಕ್ಸಿಜನ್​ ಸಮಸ್ಯೆ ಎದುರಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸಿರುವ ರೈಲ್ವೆ ಇಲಾಖೆ 4 ಸಾವಿರ ಕೋವಿಡ್​​ ಕೇರ್ ಕೋಚ್​​ಗಳನ್ನು ಸಿದ್ಧಪಡಿಸಿದೆ.

ರೈಲ್ವೆ ಇಲಾಖೆಯ 4 ಸಾವಿರ ಕೋವಿಡ್​​ ಕೋಚ್​ಗಳ ಮೂಲಕ ಸುಮಾರು 60 ಸಾವಿರ ಬೆಡ್​ಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ಲಭ್ಯವಾಗಲಿದೆ. ಇವುಗಳನ್ನು ಕೊರೊನಾ ಸೋಂಕಿಗೆ ಒಳಗಾಗಿರುವ ಸೌಮ್ಯ ಲಕ್ಷಣಗಳನ್ನು ಒಳಗೊಂಡಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಲಾಗುತ್ತದೆ. ದೆಹಲಿ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರದಲ್ಲಿ ಈ ಕೋವಿಡ್​ ಕೇರ್​ ಕೋಚ್​ಗಳು ಲಭ್ಯವಿದೆ.

ಕೋವಿಡ್​​ ಕೋಚ್​​ಗಳಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗುವ ರೋಗಿಗಳಿಗೆ ಅಡುಗೆ ವ್ಯವಸ್ಥೆ ಮಾಡಲು ಹಾಗೂ ಕೋಚ್​​ಗಳಲ್ಲಿ ನೈರ್ಮಲ್ಯಗಳನ್ನು ಕಾಪಾಡಿಕೊಳ್ಳಲು ರೈಲ್ವೆ ಇಲಾಖೆ ವ್ಯವಸ್ಥೆ ಮಾಡಿದೆ. ಇನ್ನು ಸದ್ಯ ಬೇಸಿಗೆಯ ಬಿಸಿ ಹೆಚ್ಚಾಗಿರುವುದರಿಂದ ಕೋಚ್​​ಗಳಲ್ಲಿ ತಂಪಾದ ವಾತಾವರಣ ಇರುವಂತೆ ನೋಡಿಕೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

The post 64 ಸಾವಿರ ಹಾಸಿಗೆಗಳ 4 ಸಾವಿರ ಕೋವಿಡ್​ ಕೇರ್​ ಕೋಚ್​ ಸಿದ್ಧಪಡಿಸಿದ ಭಾರತೀಯ ರೈಲ್ವೆ appeared first on News First Kannada.

Source: News First Kannada
Read More