ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ನಿಧಾನಗತಿಯಲ್ಲಿ ಇಳಿಕೆಯಾಗ್ತಿದೆ. 400 ಮತ್ತು 500ರ ಅಂತರದಲ್ಲಿ ನಿತ್ಯದ ಪಾಸಿಟಿವ್​ ಕೇಸ್​ಗಳು ದಾಖಲಾಗ್ತಿವೆ. ಇದ್ರ ಮಧ್ಯೆ ಬೆಂಗಳೂರಿಗರಿಗೆ ಮತ್ತೊಂದು ಆತಂಕ ಕಾಡೋದಕ್ಕೆ ಶುರುವಾಗಿದೆ. ನಿತ್ಯ ದಾಖಲಾಗ್ತಿರೋ ಕೇಸ್​ಗಳಲ್ಲಿ 18 ವರ್ಷ ಒಳಗಿನ ಮಕ್ಕಳೇ ಹೆಮ್ಮಾರಿಗೆ ಟಾರ್ಗೆಟ್ ಆಗ್ತಿದ್ದಾರಂತೆ.

ಕಳೆದ 10 ದಿನಗಳಲ್ಲಿ ನಗರದಲ್ಲಿ ಬರೋಬ್ಬರಿ 641 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅದ್ರಲ್ಲಿ, 285 ಹೆಣ್ಣು ಮಕ್ಕಳು, 366 ಗಂಡು ಮಕ್ಕಳಿಗೆ ಸೋಂಕು ತಗುಲಿದೆ. ಶೇಕಡ 8ರಷ್ಟು ಸರಾಸರಿಯಲ್ಲಿ ನಿತ್ಯ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ತಿದೆ. ಹೀಗಾಗಿ, ತಜ್ಞರ ಲೆಕ್ಕಾಚಾರ ಉಲ್ಟಾ ಮಾಡ್ತಿದ್ಯಾ ಕೊರೊನಾ ಎಂಬ ಆತಂಕ ಎದುರಾಗಿದೆ. ತಜ್ಞರ ಅಭಿಪ್ರಾಯದ ಪ್ರಕಾರ, ಮೂರನೇ ಅಲೆ ಸೆಪ್ಟೆಂಬರ್​ ಅಥವಾ ಅಕ್ಟೋಬರ್​​ನಲ್ಲಿ ಆರಂಭವಾಗಿ, ಹೆಚ್ಚಾಗಿ ಮಕ್ಕಳನ್ನೇ ಟಾರ್ಗೆಟ್​ ಮಾಡಲಿದೆ ಅಂತಾ ವರದಿ ನೀಡಿದ್ರು. ಸದ್ಯ ನಗರದಲ್ಲಿ, ಮಕ್ಕಳಿಗೆ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ತಿರೋದನ್ನ ನೋಡಿದ್ರೆ, ಈಗಾಗ್ಲೇ ಮೂರನೇ ಅಲೆ ಸುಳಿವು ಕೊಡ್ತಿದೆಯಾ ಕೊರೊನಾ ಎಂಬ ಆತಂಕವೂ ಶುರುವಾಗಿದೆ. ಈ ಹಿನ್ನೆಲೆ ಬಿಬಿಎಂಪಿ ಕೇಸ್​ಗಳು ಹೆಚ್ಚಾಗಿರೋ ನಗರದ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಿದೆ.

ಒಟ್ನಲ್ಲಿ, ಮೂರನೇ ಕೊರೊನಾ ಅಲೆಯಲ್ಲಿ ಹೆಚ್ಚಾಗಿ ಮಕ್ಕಳೇ ಟಾರ್ಗೆಟ್ ಆಗ್ತಾರೆ ಅಂತ ತಜ್ಞರು ಹೇಳ್ತಾ ಬರ್ತಿದ್ದದ್ದೂ ಇದೀಗ ನಿಜವಾದಂತಿದೆ. ಹೀಗಾಗಿ, ಪೋಷಕರು ಆದಷ್ಟು ಎಚ್ಚರದಿಂದಿದ್ದು, ನಿಮ್ಮ ಮಕ್ಕಳನ್ನ ಕೊರೊನಾದಿಂದ ಕಾಪಾಡಿಕೊಳ್ಳೋ ಜವಾಬ್ದಾರಿ ನಿಮ್ಮ ಮೇಲಿದೆ.

The post 641 ಮಕ್ಕಳಲ್ಲಿ ಕೊರೊನಾ ಸೋಂಕು.. ಮನೆಮನೆಗೆ ತೆರಳಿ ಮಾಹಿತಿ ಕಲೆಹಾಕಲು ಮುಂದಾದ BBMP appeared first on News First Kannada.

Source: newsfirstlive.com

Source link