ಬೆಂಗಳೂರು: ರಾಜ್ಯದಲ್ಲಿ ಎರಡನೇ ಡೋಸ್ ವ್ಯಾಕ್ಸಿನ್ ಕೊರತೆ ಬಗ್ಗೆ ಹೈಕೋರ್ಟ್ ಮುಖ್ಯ ಪೀಠ ಆತಂಕ ವ್ಯಕ್ತಪಡಿಸಿದೆ.

18- 44 ವರ್ಷದವರಿಗಿರಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೂ ವ್ಯಾಕ್ಸಿನ್ ಸಿಗುತ್ತಿಲ್ಲ. 65 ಲಕ್ಷ ಜನರಿಗೆ 2ನೇ ಡೋಸ್ ಲಸಿಕೆ ಸಿಕ್ಕಿಲ್ಲ. 1.60 ಲಕ್ಷ ಜನರಿಗೆ 8 ವಾರವಾದರೂ 2ನೇ ಲಸಿಕೆ ಸಿಕ್ಕಿಲ್ಲ. 16.63 ಲಕ್ಷ ಜನಕ್ಕೆ 6 ವಾರವಾದರೂ 2ನೇ ಲಸಿಕೆ ಸಿಕ್ಕಿಲ್ಲ. ಒಟ್ಟು 26 ಲಕ್ಷ ಜನಕ್ಕೆ ತಕ್ಷಣ ವ್ಯಾಕ್ಸಿನೇಷನ್‌ ಅಗತ್ಯವಿದೆ. ಒಂದು ವೇಳೆ ಕ್ರಮಕೈಗೊಳ್ಳದಿದ್ದರೆ ಲಸಿಕಾ ಕಾರ್ಯಕ್ರಮವೇ ವಿಫಲವಾಗಲಿದೆ ಅಂತಾ ಸಿಜೆ ಎ.ಎಸ್.ಒಕಾ ಹಾಗೂ ನ್ಯಾ.ಅರವಿಂದ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

2ನೇ ಡೋಸ್ ವಿಳಂಬವಾದರೆ 1ನೇ ಡೋಸ್ ನಿಷ್ಕ್ರಿಯವಾಗಲ್ಲ. ಡೋಸ್ ನಿಷ್ಕ್ರಿಯವಾಗುತ್ತದೆಂದು ವೈಜ್ಞಾನಿಕ ವರದಿಯಿಲ್ಲ. ಲಸಿಕೆ ಒದಗಿಸಲು ಎಲ್ಲಾ ಪ್ರಯತ್ನ ಮಾಡಲಾಗುವುದು ಅಂತಾ ಹೈಕೋರ್ಟ್​ಗೆ ಎಜಿ ಪ್ರಭುಲಿಂಗ್ ನಾವದಗಿ ಕೋರ್ಟ್​​ಗೆ ತಿಳಿಸಿದರು.

The post ‘65 ಲಕ್ಷ ಜನರಿಗೆ 2ನೇ ಡೋಸ್ ಲಸಿಕೆ ಸಿಕ್ಕಿಲ್ಲ’ ಆತಂಕ ವ್ಯಕ್ತಪಡಿಸಿದ ಹೈಕೋರ್ಟ್ appeared first on News First Kannada.

Source: newsfirstlive.com

Source link