ಆ್ಯಷಸ್ ಟೆಸ್ಟ್ ಸರಣಿಗೂ ಮುನ್ನ ಆಸ್ಟ್ರೇಲಿಯಾ ನೂತನ ನಾಯಕ ಮತ್ತು ಉಪ ನಾಯಕನನ್ನ ನೇಮಿಸಿದೆ. ಟೆಸ್ಟ್ ತಂಡದ ನೂತನ ನಾಯಕನಾಗಿ ವೇಗಿ ಪ್ಯಾಟ್ ಕಮಿನ್ಸ್ ನೇಮಕಗೊಂಡಿದ್ದರೆ, ಉಪನಾಯಕನಾಗಿ ಸ್ಟೀವ್ ಸ್ಮಿತ್ ಆಯ್ಕೆಯಾಗಿದ್ದಾರೆ. ಹಾಗೇ 47ನೇ ಟೆಸ್ಟ್ ನಾಯಕನಾಗಿ ಆಯ್ಕೆಯಾಗುವ ಮೂಲಕ ಕಮಿನ್ಸ್ ಸಾಧನೆಯೊಂದನ್ನೂ ಮಾಡಿದ್ದಾರೆ.
65 ವರ್ಷಗಳ ನಂತರ ವೇಗಿಯೊಬ್ಬ ಟೆಸ್ಟ್ ತಂಡವನ್ನ ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದು, ವೇಗಿ ರಿಚಿ ಬೆನಾಡ್ ನಂತರ ಟೆಸ್ಟ್ ಮುನ್ನಡೆಸಿದ ಮೊದಲ ಬೌಲರ್ ಆಗಿದ್ದಾರೆ. ಲೈಂಗಿಕ ಹಗರಣದ ನಂತರ ಟಿಮ್ ಪೈನ್ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ರು. ಹಾಗಾಗಿ ಸುಮಾರು ಎರಡು ವರ್ಷಗಳ ಕಾಲ ಉಪನಾಯಕನಾಗಿದ್ದ ಕಮಿನ್ಸ್, ಇದೀಗ ನಾಯಕನಾಗಿ ಬಡ್ತಿ ಪಡೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಮಿನ್ಸ್, ಮೊದಲಿಗೆ ಕ್ರಿಕೆಟ್ ಆಸ್ಟ್ರೇಲಿಯಾಗೆ ಧನ್ಯವಾದ ಹೇಳಿದ್ದಾರೆ. ಈ ಜವಾಬ್ದಾರಿ ಆ್ಯಷಸ್ ಸರಣಿಗೆ ಒಲಿದು ಬಂದಿರೋದು ಅತ್ಯಂತ ಸವಾಲಿನದ್ದು. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
Australian captain Pat Cummins and vice captain Steve Smith are currently speaking to the media about their leadership positions.
Tweets to follow 👇 pic.twitter.com/cmZsStiyb6
— Cricket Australia (@CricketAus) November 26, 2021