– ದೆಹಲಿಯಲ್ಲಿ ಯಾರನ್ನೂ ಭೇಟಿಯಾಗಿಲ್ಲ

ದಾವಣಗೆರೆ: ಪಕ್ಷದಲ್ಲಿ ತಲೆ ಹರಟೆ ಮಾಡಿದವರನ್ನ ಉಚ್ಛಾಟಿಸಿ ಎಂದು 65 ಶಾಸಕರು ಸಹಿ ಮಾಡಿರುವ ನನ್ನ ಬಳಿಯಲ್ಲಿದೆ. ಯಾವುದೇ ಕಾರಣಕ್ಕೂ ಶಾಸಕಾಂಗ ಸಭೆ ಕರೆಯುವ ಅವಶ್ಯಕತೆ ಇಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಸಕಾಂಗ ಸಭೆ ಅಗತ್ಯ ಇಲ್ಲ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಶಾಸಕ ರೇಣುಕಾಚಾರ್ಯ, 65 ಶಾಸಕರ ಸಹಿ ಪತ್ರವನ್ನು ಅಗತ್ಯ ಬಿದ್ದಾಗ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರಿಗೆ ತಲುಪಿಸುತ್ತೇನೆ. ಬೇರೆ ಪಕ್ಷದಿಂದ ಬಂದು ಯಡಿಯೂರಪ್ಪನವರ ಆಶೀರ್ವಾದದಿಂದ ಶಾಸಕನಾಗಿ, ಸದಾನಂದಗೌಡರ ಅವಧಿಯಲ್ಲಿ ಅರಣ್ಯ ಸಚಿವರಾಗಿ ಲೂಟಿ ಹೊಡೆದಿದ್ದರು. ನಂತರ ನಮ್ಮ ಪಕ್ಷ ಬಿಟ್ಟು ಸೈಕಲ್ ಏರಿ ಮತ್ತೆ ಬಿಜೆಪಿ ಸೇರಿದರು. ಶಿವಾನಂದ ಸರ್ಕಲ್ ನಲ್ಲಿ ವಿಜಯೇಂದ್ರ, ಕಾವೇರಿ ಭವನದಲ್ಲಿ ಯಡಿಯೂರಪ್ಪನವರ ಕಾಲು ಹಿಡಿದಿದ್ದನ್ನು ನಾನೇ ನೋಡಿದ್ದೇನೆ. ನಮ್ಮಲ್ಲಿ ಸೋತವರು ಬಹಳಷ್ಟು ಜನ. ಸೋತವರಿದ್ದರೂ ಯಡಿಯೂರಪ್ಪನವರ ಕೃಪಕಟಾಕ್ಷದಿಂದ ಸಚಿವರಾದಿರಿ ಎಂದು ಸಿಪಿ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.

ದೆಹಲಿಯಲ್ಲಿ ಯಾರನ್ನೂ ಭೇಟಿಯಾಗಿಲ್ಲ: ನೀವು ಶಾಸಕಾಂಗ ಸಭೆ ಕರೆಯಿರಿ ಎಂದು ಹೇಳಲು ಏನು ನೈತಿಕತೆ ಇದೆ? ಇದು ಮೂರು ಭಾಗವಾದ ಸರ್ಕಾರ ಎಂದು ಹೇಳ್ತೀರಿ, ಯಡಿಯೂರಪ್ಪನವರ ಆಡಳಿತ ಮೆಚ್ವಿ ನೀವೇ ಐದು ವರ್ಷ ಸಿಎಂ ಎಂದು ಹೇಳಿದ್ದಾರೆ. ವಿನಾಕಾರಣ ಪ್ರಹ್ಲಾದ್ ಜೋಶಿ ಅವರ ಹೆಸರು ತರುವ ಕೆಲಸ ಮಾಡುತ್ತಿದ್ದೀರಿ. ದೆಹಲಿಗೆ ಹೋಗಿ ಲಾಬಿ ಮಾಡಿದರೆ ಏನು ಪ್ರಯೋಜನ? ನೀವು ದೆಹಲಿಯಲ್ಲಿ ಯಾವ ನಾಯಕರನ್ನು ಭೇಟಿ ಮಾಡಿಲ್ಲ. ಅವರ ಗೇಟು ಮುಟ್ಟಿ ಬಂದು ಫೋಟೋ ತೆಗೆಸಿಕೊಂಡಿದ್ದೀರಿ ಎಂದು ವ್ಯಂಗ್ಯ ಮಾಡಿದರು. ಇದನ್ನೂ ಓದಿ: ಬಿಎಸ್‍ವೈ ಬಿಟ್ಟರೆ ಬಿಜೆಪಿಯಲ್ಲಿ ಸ್ಟಾರ್ ಲೀಡರ್ ಯಾರಿದ್ದಾರೆ : ಎಂ.ಪಿ. ಕುಮಾರಸ್ವಾಮಿ

ಸಿಪಿವೈಯನ್ನ ಬಂಧಿಸಿ: ಮೂರು ಭಾಗವಾದ ಬಿಜೆಪಿ ಎಂದು ಹೇಳ್ತಿರಲ್ಲಾ ನಿಮಗೇನಿದೆ ನೈತಿಕತೆ? ಇದರ ಬಗ್ಗೆ ನನಗೆ ಯಡಿಯೂರಪ್ಪ, ವಿಜಯೇಂದ್ರ ಹೇಳಿಲ್ಲ. ನನಗೆ ಸಿಕ್ಸರ್, ಬೌಂಡರಿ ಹೊಡೆಯುವುದು ಗೊತ್ತು. ತತಕ್ಷಣ ರಾಜೀನಾಮೆ ಕೊಡಬೇಕು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಮೆಗಾಸಿಟಿ ಪ್ರಕರಣದಲ್ಲಿ ಯೋಗೇಶ್ವರ್ ಅವರನ್ನ ಬಂಧಿಸಬೇಕು. ಇಂತರಹವರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಿಮ್ಮ ಸ್ವಾರ್ಥದ ಬಣ ಕಿತ್ತಾಟಕ್ಕೆ ಕಾಂಗ್ರೆಸ್ ಹೆಸ್ರು ಬಳಸಬೇಡಿ: ಸಿಪಿವೈ ಹೇಳಿಕೆಗೆ ತಿರುಗೇಟು

ಪಂಥಾಹ್ವಾನ: ಅಖಾಡಕ್ಕೆ ಬಾ ನಮಗೆ ಹೇಗೆ ಪಟ್ಟು ಹಾಕಬೇಕು ಎಂದು ಗೊತ್ತಿದೆ. ನಾನು ನೇರಾನೇರ ಅಖಾಡಕ್ಕೆ ಬಾ. ಸಚಿವನಾಗಲು ಕಾಲು ಹಿಡಿದವನು ಈಗ ಅವರ ವಿರುದ್ಧ ಮಾತನಾಡ್ತೀಯಾ. ಯಡಿಯೂರಪ್ಪನವರು ಅವರನ್ನ ಸಚಿವರನ್ನಾಗಿ ಮಾಡಿದ್ದೇ ದೊಡ್ಡ ತಪ್ಪು. 2023ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಸಿಪಿ ಯೋಗೇಶ್ವರ್ ಅವರಿಗೆ ಲೂಟಿ ಮಾಡುವ ಖಾತೆ ಬೇಕಂತೆ. ಖಾತೆ ಹಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡಲು ಬಂದ್ರೆ ನಾವು ಸುಮ್ಮನಿರಲ್ಲ. ಜನರ ರಕ್ಷಣೆ ಮಾಡುವ ಬದಲು ಈ ರೀತಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ನಾಯಕತ್ವ ಬದಲಾವಣೆಯನ್ನು ಪರೋಕ್ಷವಾಗಿ ಒಪ್ಪಿಕೊಂಡ ಸಚಿವ ಯೋಗೇಶ್ವರ್

The post 65 ಶಾಸಕರ ಸಹಿ ಪತ್ರ ನನ್ನಲ್ಲಿದೆ, ಅಖಾಡಕ್ಕೆ ಬಾ: ಸಿಪಿವೈಗೆ ರೇಣುಕಾಚಾರ್ಯ ಪಂಥಾಹ್ವಾನ appeared first on Public TV.

Source: publictv.in

Source link