ಅಮೆರಿಕಾದ ನರ್ತಕಿ, ನಟಿ ಮತ್ತು ಗಾಯಕಿ ಜೂಲಿಯಾನ್ನೆ ಹಗ್​​​ ಇತ್ತೀಚೆಗೆ ತಾವು ಹೊಸದಾಗಿ ಖರೀದಿಸಿರುವ ವಿಭಿನ್ನ ಬಟ್ಟೆಯ ಫೋಟೋವನ್ನು ಇನ್​​ಸ್ಟಾದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಅಮೆರಿಕಾ ಗಾಟ್​ ಟ್ಯಾಲೆಂಟ್​ ಶೋದಲ್ಲಿ ತೀರ್ಪುಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ 32 ವರ್ಷದ ಜೂಲಿಯಾನ್ನೆ ಹನ್​​ ತಮ್ಮ ಫಿಟ್ನೆಸ್​, ಸೌಂದರ್ಯ ಹಾಗೂ ಡ್ಯಾನ್ಸ್​ನಿಂದ ಹೆಚ್ಚು ಖ್ಯಾತಿ ಪಡೆದುಕೊಂಡಿದ್ಧಾರೆ. ಸದ್ಯ ರಜಾ ಸಮಯವನ್ನು ಎಂಜಾಯ್ ಮಾಡುತ್ತಿರುವ ಹಗ್​, ಇತ್ತೀಚೆಗೆ 67 ಸಾವಿರ ರೂಪಾಯಿ ನೀಡಿ ಖರೀದಿಸುವ ಡ್ರೆಸ್​ ಧರಿಸಿ ಬೀಚ್​​​​ನಲ್ಲಿ ವಿಹರಿಸುತ್ತಿರುವ ಫೋಟೋಗಳನ್ನು ತಮ್ಮ ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಹಗ್​ ಫೋಟೋಗಳಿಗೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು, ನಟಿ ಧರಿಸುವ ಬಟ್ಟೆ ಬಗ್ಗೆ ತಮ್ಮದೇ ಶೈಲಿಯಲ್ಲಿ ಮೆಚ್ಚುಗೆ ನೀಡಿದ್ದಾರೆ. ಫಿಟ್ನೆಸ್​ ಮಾದಕವಾಗಬಹುದು ಎಂದು ನಂಬಲು ಸಾಧ್ಯವಿಲ್ಲ ಎಂದು ಅಭಿಮಾನಿಯೊಬ್ಬ ಬರೆದುಕೊಂಡಿದ್ದರೆ, ಸಮುದ್ರದ ಅತ್ಯುತ್ತಮ ಕ್ಯಾಚ್​​, ಹಗ್​​ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಜೂಲಿಯಾನ್ನೆ ಹನ್ ಎರಡು ಬಾರಿ ವೃತ್ತಿ ಪರ ಡ್ಯಾನ್ಸ್ ಶೋಗಳಲ್ಲಿ ಚಾಂಪಿಯನ್​ ಆಗಿದ್ದರು. ಅಲ್ಲದೇ 2015 ರಲ್ಲಿ ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಪ್ರೈಮ್ಟೈಮ್ ಎಮ್ಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಹಲವು ಸಿನಿಮಾಗಳಲ್ಲೂ ನಟಿಸಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.

 

View this post on Instagram

 

A post shared by Julianne Hough (@juleshough)

The post 67 ಸಾವಿರ ಕೊಟ್ಟು ಡ್ರೆಸ್ ಖರೀದಿಸಿದ ನಟಿ.. ಅದು ಬಟ್ಟೆಯೋ.. ಮೀನಿನ ಬಲೆಯೋ ನೀವೇ ಹೇಳಿ appeared first on News First Kannada.

Source: newsfirstlive.com

Source link