ಬಾಲಿವುಡ್ ನಟ ಹೃತಿಕ್ ರೋಷನ್ ಅವರು ತಮ್ಮ 68 ವರ್ಷದ ತಾಯಿ ಪಿಂಕಿ ರೋಷನ್ ಅವರು ಭರ್ಜರಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೃತಿಕ್ ರೋಷನ್ ತಮ್ಮ ಫಿಟ್ನೆಸ್ ವಿಚಾರದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಹಾಗೆ ಹೃತಿಕ್ ಅವರ ತಾಯಿ ಪಿಂಕಿ ಅವರಿಗೆ ವಯಸ್ಸು 68 ಆಗಿದ್ರೂ ಕೂಡ ಅವರಿಗೆ ತಮ್ಮ ಫಿಟ್ನೆಸ್ ಮೇಲಿರುವ ಆಸಕ್ತಿ ಕೊಂಚವೂ ಕಡಿಮೆಯಾಗಿಲ್ಲ.
ತಮ್ಮ ತಾಯಿ ಪಿಂಕಿ ಅವರು ರಾಕ್ ಕ್ಲೈಂಬಿಂಗ್, ಜಿಗಿತಗಳು ಮತ್ತು ಇತರ ವ್ಯಾಯಾಮ ಮಾಡುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.