68 ವರ್ಷಗಳ ಏರ್​ ಇಂಡಿಯಾ ಘರ್ ವಾಪ್ಸಿ; ಭಾವುಕರಾದ ರತನ್ ಟಾಟಾ

ನವದೆಹಲಿ: ಯಶಸ್ವಿ ಹರಾಜಿನಲ್ಲಿ ಟಾಟಾ ಗ್ರೂಪ್​ನ ಸಂಸ್ಥಾಪಕ ರತನ್ ಟಾಟಾ ಏರ್​ ಇಂಡಿಯಾವನ್ನು ಮತ್ತೆ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ 68 ವರ್ಷಗಳ ಬಳಿಕ ಏರ್ ಇಂಡಿಯಾ ಮತ್ತೊಮ್ಮೆ ಟಾಟಾ ಸನ್ಸ್ ಗ್ರೂಪ್​ನ ಕೈ ಸೇರಿದಂತಾಗಿದೆ.

ಇದನ್ನೂ ಓದಿ: ‘ನಾನು ಇಷ್ಟ ಪಟ್ಟ ಪ್ರೀತಿ ನಂಗೆ ಕೈ ಕೊಡ್ತು’- ಮನದಾಳದ ನೋವು ಹಂಚಿಕೊಂಡ ರತನ್​ ಟಾಟಾ..!

ಈ ವಿಚಾರವಾಗಿ ರತನ್ ಟಾಟಾ ಭಾವುಕರಾಗಿದ್ದಾರೆ. ಕೇಂದ್ರ ಸರ್ಕಾರ ಏರ್ ಇಂಡಿಯಾ ಹರಾಜಿನಲ್ಲಿ ಟಾಟಾ ಸನ್ಸ್ ಗ್ರೂಪ್​ಗೆ ಸೇರಿದ ಕುರಿತು ಅಧಿಕೃತ ಮಾಹಿತಿ ಹೊರಹಾಕುತ್ತಿದ್ದಂತೆಯೇ ಫೋಟೋವೊಂದನ್ನ ರತನ್ ಟಾಟಾ ಟ್ವೀಟ್​ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ತಂದೆ ಜೆಆರ್​ಡಿ ಟಾಟಾ ಏರ್ ಇಂಡಿಯಾ ವಿಮಾನದ ಮುಂದೆ ನಿಂತಿರುವ ಹಳೇ ಫೋಟೋವನ್ನು ಟ್ವೀಟ್ ಮೂಲಕ ಹಂಚಿಕೊಂಡಿರುವ ಟಾಟಾ ವೆಲ್​ಕಂ ಬ್ಯಾಕ್ ಏರ್ ಇಂಡಿಯಾ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ತಮ್ಮನ್ನು ‘ಚೋಟು’ ಎಂದ ಬಾಲಕಿಗೆ ದೊಡ್ಡ ಮನಸ್ಸಿನ ರತನ್​ ಟಾಟಾ ಹೇಳಿದ್ದೇನು..?

ಅಲ್ಲದೇ ಟಾಟಾ ಗ್ರೂಪ್ ಬಿಡ್ಡಿಂಗ್​ನಲ್ಲಿ ಯಶಸ್ವಿಯಾಗಿರುವುದು ಗ್ರೇಟ್ ನ್ಯೂಸ್.. ಟಾಟಾ ಗ್ರೂಪ್ ಏರ್​ ಇಂಡಿಯಾವನ್ನು ಮತ್ತೆ ಕಟ್ಟಲು ಕಟಿಬದ್ಧವಾಗಿದೆ. ಅಲ್ಲದೇ ಬಲಿಷ್ಠ ಮಾರ್ಕೆಟ್​ನ್ನು ಸೃಷ್ಟಿಸುವ ವಿಶ್ವಾಸವನ್ನು ಹೊಂದಿದೆ ಎಂದಿದ್ದಾರೆ. ಹಿಂದೊಮ್ಮೆ ಏರ್ ಇಂಡಿಯಾ ಜೆ ಆರ್ ಡಿ ಟಾಟಾ ಅವರ ನಾಯಕತ್ವದಲ್ಲಿ ಜಗತ್ತಿನ ಪ್ರತಿಷ್ಟಿತ ಸಂಸ್ಥೆ ಎನ್ನಿಸಿಕೊಂಡಿತ್ತು. ಆ ಇಮೇಜ್​ನ್ನು ಮತ್ತೆ ವಾಪಸ್ ತರುವ ಅವಕಾಶ ಇದೀಗ ನಮ್ಮದಾಗಿದೆ. ಇಂದು ಅವರು ಇದ್ದಿದ್ದರೆ ಬಹಳ ಸಂತಸ ಪಡುತ್ತಿದ್ದರು ಎಂದಿದ್ದಾರೆ.

ಜೆಹಾಂಗೀರ್ ರತನ್​ಜಿ ದಾದಾಭೋಯ್ ಟಾಟಾ ರತನ್ ಟಾಟಾ ಅವರ ತಂದೆಯಾಗಿದ್ದು ಏರ್ ಇಂಡಿಯಾದ ಸಂಸ್ಥಾಪಕರೂ ಹೌದು. 1932 ರಲ್ಲಿ ಟಾಟಾ ಏರ್​ಲೈನ್ಸ್ ಎಂದು ನಾಮಕರಣ ಮಾಡಲಾಗಿತ್ತು. 1946 ರಲ್ಲಿ ಟಾಟಾ ಸನ್ಸ್ ಏವಿಯೇಷನ್ ಡಿವಿಷನ್ ಏರ್ ಇಂಡಿಯಾ ಎಂದು ಕರೆದಿತ್ತು. 1948 ರಲ್ಲಿ ಯೂರೋಪ್​ಗೆ ವಿಮಾನ ಹಾರಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರ್ ಇಂಡಿಯಾವನ್ನು ಕೊಂಡೊಯ್ಯಲಾಯ್ತು.

ಇದನ್ನೂ ಓದಿ: ಎಲ್ಲವನ್ನೂ ಗೆದ್ದ ರತನ್​ ಟಾಟಾ ಪ್ರೀತಿಸಿದಾಕೆಯನ್ನ ಮದುವೆಯಾಗಲಿಲ್ಲ ಏಕೆ..? -ಇಲ್ಲಿದೆ ಇಂಟರೆಸ್ಟಿಂಗ್​ ಸ್ಟೋರಿ..!

ಈ ವೇಳೆ ಸರ್ಕಾರ 49 ಪರ್ಸೆಂಟ್ ಹೋಲ್ಡಿಂಗ್ ಉಳಿಸಿಕೊಂಡಿದ್ದರೆ ಟಾಟಾ ಸಂಸ್ಥೆ 25 ಪರ್ಸೆಂಟ್ ಶೇರ್ ಅನ್ನು ಉಳಿಸಿಕೊಂಡಿತ್ತು. 1953 ರಲ್ಲಿ ರಾಷ್ಟ್ರೀಕರಣಗೊಂಡ ಸಂಸ್ಥೆ ಸರ್ಕಾರದಿಂದ ನಾಲ್ಕು ವರ್ಷಗಳ ಕಾಲ ಚಲಾವಣೆಯಲ್ಲಿತ್ತು. ಇದೀಗ ಮತ್ತೆ ಟಾಟಾ ಗ್ರೂಪ್​ನ ಕೈ ಸೇರಿದೆ.

News First Live Kannada

Leave a comment

Your email address will not be published. Required fields are marked *