ಬೆಂಗಳೂರು: ಜನತಾ ಲಾಕ್‍ಡೌನ್ ಎಫೆಕ್ಟ್ ಬಗ್ಗೆ ಅಧ್ಯಯನ ನಡೆಸಿರುವ ಐಐಎಸ್‍ಸಿ ಸೋಂಕು ಇನ್ನಷ್ಟು ಕಡಿಮೆ ಆಗಲು ಎರಡು ವಾರಗಳ ಲಾಕ್‍ಡೌನ್ ವಿಸ್ತರಣೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿತ್ತು.

ಮೇ 10ರಿಂದ ಜಾರಿಯಲ್ಲಿರುವ 14 ದಿನಗಳ ಜನತಾ ಲಾಕ್‍ಡೌನ್ ಪರಿಣಾಮಕಾರಿ ಕೆಲಸ ಮಾಡ್ತಿದೆ. ಸೋಂಕಿನ ಪ್ರಮಾಣ ಇಳಿಕೆಯಾಗ್ತಿದೆ. ಕೊರೋನಾ ಹಬ್ಬುವಿಕೆ 94% ರಷ್ಟು ಕಡಿಮೆ ಆಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ತಿಳಿಸಿದ್ದರು.

ಮೇ ಮೊದಲ ವಾರದಲ್ಲಿ 2ನೇ ಅಲೆಯ ಎಫೆಕ್ಟ್ ಜಾಸ್ತಿ ಇತ್ತು. ಅತ್ಯಧಿಕ ಕೇಸ್ ದಾಖಲಾಗಿದ್ದವು. ಇದೀಗ ಸೋಂಕು ಪ್ರಮಾಣ ಇಳಿದಿದೆ. ಆದರೆ ಸಂಪೂರ್ಣವಾಗಿ ಇಳಿಮುಖವಾಗಿಲ್ಲ. ಒಂದು ವೇಳೇ ಈಗೇನಾದ್ರೂ ಲಾಕ್‍ಡೌನ್ ಸಡಿಲಿಸಿದರೆ ಗ್ರಾಮೀಣ ಭಾಗದಲ್ಲಿ ಇನ್ನಷ್ಟು ಸೋಂಕು ಹೆಚ್ಚಳ ಆಗಬಹುದು. ಹೀಗಾಗಿ 2 ವಾರ ಲಾಕ್‍ಡೌನ್ ವಿಸ್ತರಣೆ ಮಾಡಿದರೆ  ಉತ್ತಮ ಎಂದು ಐಐಎಸ್‍ಸಿ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದರು.

ವರದಿಯಲ್ಲಿ ಏನಿದೆ?
ರಾಜ್ಯದಲ್ಲಿ ಲಾಕ್‍ಡೌನ್ 94.47%ರಷ್ಟು ಪರಿಣಾಮವಾಗಿದ್ದು, 7 ಜಿಲ್ಲೆಗಳಲ್ಲಿ 100% ರಷ್ಟು ಯಶಸ್ವಿಯಾಗಿ ಸೋಂಕು ಇಳಿಕೆಯಾಗುತ್ತಿದೆ. 9 ಜಿಲ್ಲೆಗಳಲ್ಲಿ 50% ರಷ್ಟು ಯಶಸ್ವಿಯಾಗಿದ್ದರೆ 7 ಜಿಲ್ಲೆಗಳಲ್ಲಿ 30% ರಿಂದ 49%ರಷ್ಟು ವರ್ಕೌಟ್ ಆಗಿದೆ. ಜಿಲ್ಲೆಗಳಲ್ಲಿ 15% – 25% ರಷ್ಟು ಲಾಕ್‍ಡೌನ್ ಯಶಸ್ವಿಯಾಗಿದೆ.

ಎಲ್ಲಿ ಯಶಸ್ವಿ?
ಬೆಂಗಳೂರು ನಗರ – 122%, ಚಿತ್ರದುರ್ಗ – 128%, ಉಡುಪಿ – 129%, ವಿಜಯಪುರ – 130% ದಕ್ಷಿಣ ಕನ್ನಡ 145%, ಕಲಬುರುಗಿ 180%, ಬೀದರ್ 200%

ಎಲ್ಲಿ ಫೇಲ್?
ಹಾವೇರಿ 16%, ರಾಮನಗರ 17%, ಕೊಪ್ಪಳ 18%, ಉತ್ತರ ಕನ್ನಡ 21%, ಬಾಗಲಕೋಟೆ 22%, ಯಾದಗಿರಿ 23%, ಚಾಮರಾಜನಗರ 26%

The post 7 ಜಿಲ್ಲೆಗಳಲ್ಲಿ 100% ಲಾಕ್‍ಡೌನ್ ಯಶಸ್ವಿ – 7 ಜಿಲ್ಲೆಗಳಲ್ಲಿ ಫೇಲ್ appeared first on Public TV.

Source: publictv.in

Source link