7 ತಿಂಗಳಿಂದ ಕೋಮಾದಲ್ಲಿರುವ ಮಹಿಳೆಗೆ ಹೆಣ್ಣು ಮಗು ಜನನ; ದೆಹಲಿಯಲ್ಲೊಂದು ಅಚ್ಚರಿಯ ಘಟನೆ! – Woman in coma for 7 months gives birth to baby girl at Delhi AIIMS Kannada News


ಅಪಘಾತದ ವೇಳೆ ಶಫಿಯಾ ಎಂಬ ಈ 23 ವರ್ಷದ ಮಹಿಳೆ 40 ದಿನಗಳ ಗರ್ಭಿಣಿಯಾಗಿದ್ದರು. ಅಕ್ಟೋಬರ್ 22ರಂದು ಅವರಿಗೆ ನಾರ್ಮಲ್ ಡೆಲಿವರಿಯಾಗಿದ್ದು, ಮಗು ಆರೋಗ್ಯಯುತವಾಗಿದೆ. ಆದರೆ, ತಾಯಿ ಇನ್ನೂ ಕೋಮಾದಿಂದ ಹೊರಬಂದಿಲ್ಲ.

7 ತಿಂಗಳಿಂದ ಕೋಮಾದಲ್ಲಿರುವ ಮಹಿಳೆಗೆ ಹೆಣ್ಣು ಮಗು ಜನನ; ದೆಹಲಿಯಲ್ಲೊಂದು ಅಚ್ಚರಿಯ ಘಟನೆ!

7 ತಿಂಗಳಿಂದ ಕೋಮಾದಲ್ಲಿರುವ ಮಹಿಳೆಗೆ ಹೆಣ್ಣು ಮಗು ಜನನ

ನವದೆಹಲಿ: ಕಳೆದ 7 ತಿಂಗಳಿನಿಂದ ಕೋಮಾದಲ್ಲಿರುವ ಮಹಿಳೆಯೊಬ್ಬರು ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಪರೂಪದ ಘಟನೆ ನಡೆದಿದೆ. ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗಳಾಗಿ ದೆಹಲಿಯ ಏಮ್ಸ್ ಟ್ರಾಮಾ ಸೆಂಟರ್‌ನಲ್ಲಿ 7 ತಿಂಗಳ ಕಾಲ ಕೋಮಾದಲ್ಲಿದ್ದ ಮಹಿಳೆಯೊಬ್ಬರು ಇದೀಗ ಮಗುವಿಗೆ ಜನ್ಮ ನೀಡಿದ್ದಾರೆ. 23 ವರ್ಷದ ಈ ಮಹಿಳೆಯನ್ನು ಏಪ್ರಿಲ್ 1ರಂದು ಏಮ್ಸ್‌ಗೆ ಕರೆತರಲಾಗಿತ್ತು.

ಅಪಘಾತದ ವೇಳೆ ಶಫಿಯಾ ಎಂಬ ಈ 23 ವರ್ಷದ ಮಹಿಳೆ 40 ದಿನಗಳ ಗರ್ಭಿಣಿಯಾಗಿದ್ದರು. ಬುಲಂದ್‌ಶರ್‌ನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಆಕೆಯನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕಳುಹಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ಸಮಯದಿಂದ ಇದುವರೆಗೂ ಅವರು 4 ನರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅಕ್ಟೋಬರ್ 22ರಂದು ಅವರಿಗೆ ನಾರ್ಮಲ್ ಡೆಲಿವರಿಯಾಗಿದ್ದು, ಮಗು ಆರೋಗ್ಯಯುತವಾಗಿದೆ. ಆದರೆ, ತಾಯಿ ಇನ್ನೂ ಕೋಮಾದಿಂದ ಹೊರಬಂದಿಲ್ಲ.

TV9 Kannada


Leave a Reply

Your email address will not be published.