ಜೈಪುರ: ವರನೊಬ್ಬ ತನಗೆ ಮಡದಿಯಾಗುವವಳ ಕನಸನ್ನು ನನಸು ಮಾಡಿದ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ.

ಹೌದು. ವರನನ್ನು ಸಿಯಾರಾಮ್ ಗುರ್ಜರ್ ಎಂದು ಗುರುತಿಸಲಾಗಿದ್ದು, ಈತ ಭರತ್‍ಪುರ ಜಿಲ್ಲೆಯ ವೈರ್ ಸಬ್‍ಬ್ಲಾಕ್‍ನ ರಾಯ್‍ಪುರ ಗ್ರಾಮದ ನಿವಾಸಿ. ಸಿಯಾರಾಮ್ ತನ್ನ ಮದುವೆ ಸಮಾರಂಭದ ಬಳಿಕ ವಧುವನ್ನು ಹೆಲಿಕಾಪ್ಟರ್ ಮೂಲಕ ಮನೆಗೆ ಕರೆತಂದಿದ್ದಾನೆ. ಈ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.

ರೈತನ ಮಗನಾಗಿರುವ ಗುರ್ಜರ್ ತನ್ನ ಸಹೋದರ ಕರ್ತಾರ್ ಸಿಂಗ್ ಮತ್ತು ಸೋದರ ಮಾವ ರಾಮ್‍ಪ್ರಸಾದ್ ಅವರೊಂದಿಗೆ ಚಾಪರ್‍ಗೆ ಹತ್ತಿದ್ದಾನೆ. ಟೇಕ್-ಆಫ್ ಸಮಯದಲ್ಲಿ ಹೆಲಿಕಾಪ್ಟರ್ ನೋಡಲು ಜನರ ದಂಡೇ ಜಮಾಯಿಸಿತ್ತು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲು ಪೊಲೀಸರು ಸ್ಥಳದಲ್ಲಿದ್ದರು.

ಗುರ್ಜರ್ ಅವರು ತಮ್ಮ ಪತ್ನಿ ರಾಮಾ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಿ ‘ಸ್ವೀಟ್ ಹೋಮ್’ಗೆ ಪ್ರಯಾಣಿಸುವ ಕನಸು ಹೊಂದಿದ್ದರು. ಇದಕ್ಕಾಗಿ ಅವರು 7 ಲಕ್ಷ ರೂ. ನೀಡಿ ಚಾಪರ್ ಬುಕ್ ಮಾಡಿದ್ದರು.

The post 7 ಲಕ್ಷ ಖರ್ಚು ಮಾಡಿ ವಧುವನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದ ವರ! appeared first on Public TV.

Source: publictv.in

Source link