ದಾವಣಗೆರೆ: 7 ವರ್ಷದ ಬಾಲಕಿ ಮೇಲೆ ಬೀದಿ ನಾಯಿಗಳು ಭೀಕರವಾಗಿ ದಾಳಿ ನಡೆಸಿರೋ ಶಾಕಿಂಗ್ ಘಟನೆ ದಾವಣಗೆರೆಯ ಆಜಾದ್ ನಗರದಲ್ಲಿ ನಡೆದಿದೆ.

ಸಲಾಮ್ ಹಾಗೂ ತಬಸುಬ ಬಾನು ಎಂಬವರ ಮಗಳು ಕನೋಸ್ ಫಾತಿಮಾ ದಾಳಿಗೊಳಗಾದ ಬಾಲಕಿ. ಮಧ್ಯ ರಾತ್ರಿ ಮೂರು ಗಂಟೆ ಸುಮಾರಿಗೆ ಫಾತಿಮಾ ಮೇಲೆ ನಾಯಿಗಳು ದಾಳಿ ನಡೆಸಿವೆ. ಇದರಿಂದ ಬಾಲಕಿಯ ಕಾಲು, ತಲೆ ಸೇರಿದಂತೆ ಮೈತುಂಬಾ ಗಂಭೀರ ಗಾಯಗಳಾಗಿವೆ.

ಫಾತಿಮಾಳನ್ನ ಸದ್ಯ ಬಾಪುಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಬಾಲಕಿಗೆ ಪರಿಹಾರ ನೀಡಬೇಕೆಂದು ಆಜಾದ್ ನಗರದ ಜನರು ಪ್ರತಿಭಟನೆ ನಡೆಸಿದ್ದಾರೆ.

 

The post 7 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ಭೀಕರ ದಾಳಿ.. ಪರಿಹಾರಕ್ಕಾಗಿ ಒತ್ತಾಯ appeared first on News First Kannada.

Source: newsfirstlive.com

Source link