70 ವರ್ಷದ ವೃದ್ದೆ ಮೇಲೆ ಯುವಕನಿಂದ ಅತ್ಯಾತಾರ – A young boy raped 70-year-old woman in kalaguragi


70 ವರ್ಷದ ವೃದ್ದೆ ಮೇಲೆ ಯುವಕನಿಂದ ಅತ್ಯಾತಾರ ನಡೆದಿರುವಂತಹ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಅಣ್ಣೂರು ಗ್ರಾಮದಲ್ಲಿ ನಡೆದಿದೆ.

70 ವರ್ಷದ ವೃದ್ದೆ ಮೇಲೆ ಯುವಕನಿಂದ ಅತ್ಯಾತಾರ

ಪ್ರಾತಿನಿಧಿಕ ಚಿತ್ರ

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Nov 07, 2022 | 4:21 PM
ಕಲಬುರಗಿ: 70 ವರ್ಷದ ವೃದ್ದೆ ಮೇಲೆ ಯುವಕನಿಂದ ಅತ್ಯಾಚಾರ ನಡೆದಿರುವಂತಹ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಅಣ್ಣೂರು ಗ್ರಾಮದಲ್ಲಿ ನಡೆದಿದೆ. ಅಣ್ಣೂರು ಗ್ರಾಮದ ಸಂತೋಷ್ (28) ಎನ್ನುವ ಯುವಕನ ವಿರುದ್ಧ ಆರೋಪ ಮಾಡಲಾಗಿದೆ. ಕಳೆದ ಕೆಲ ವರ್ಷಗಳಿಂದ ವಯೋ ಸಹಜ ಖಾಯಿಲೆಯಿಂದ ವೃದ್ದೆ ಬಳಲುತ್ತಿದ್ದು, ಮೊಮ್ಮಗಳ ಮನೆಯಲ್ಲಿ ವಾಸವಾಗಿದ್ದರು. ನಿನ್ನೆ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಯುವಕ ಕೃತ್ಯವೆಸಗಿದ್ದಾನೆ. ಅತ್ಯಾಚಾರಕ್ಕೆ ಒಳಗಾದ ವೃದ್ದೆಯನ್ನ ಕಲಬುರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡು ಆಳಂದ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.