ಅಮೆರಿಕಾದ ನ್ಯೂಯಾರ್ಕ್​ ರಾಜ್ಯದಲ್ಲಿ 70 ಪ್ರತಿಶತ ವ್ಯಾಕ್ಸಿನೇಷನ್ ಮುಗಿದಿದ್ದು ಇಡೀ ರಾಜ್ಯದಲ್ಲಿ ಸಂಭ್ರಮ ಮನೆಮಾಡಿದೆ.  70 ಪರ್ಸೆಂಟ್​ ಜನರು 1 ಅಥವಾ ಎರಡೂ ಡೋಸ್​ಗಳನ್ನು ಪಡೆದುಕೊಂಡಿದ್ದಾರೆಂದು ಅಲ್ಲಿನ ಗವರ್ನರ್ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಇದೇ ಸಂಭ್ರಮದಲ್ಲಿ ಕೋವಿಡ್​ ನಿರ್ಬಂಧಗಳನ್ನ  ಹಿಂಪಡೆಯಲಾಗಿದೆ ಎಂದು ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ನ್ಯೂಯಾರ್ಕ್ ಗವರ್ನರ್ ಆ್ಯಂಡ್ರೂ ಕುವೊಮೊ.. ಇಂದು 70 ಪರ್ಸೆಂಟ್ ವಯಸ್ಕರಿಗೆ ವ್ಯಾಕ್ಸಿನೇಷನ್ ನೀಡುವ ನಮ್ಮ ಗುರಿಯನ್ನ ತಲುಪಿದ್ದೇವೆ. ಇದರ ಅರ್ಥ ನಾವು ಮತ್ತೆ ಸಹಜ ಜೀವನಕ್ಕೆ ಮರಳಿದ್ದೇವೆ. ಈ ಕ್ಷಣದಿಂದಲೇ ಜಾರಿಯಾಗುವಂತೆ ಸಾರ್ವಜನಿಕ ಮತ್ತು ಆರ್ಥಿಕ ವಲಯಗಳ ಕೋವಿಡ್ ನಿರ್ಬಂಧಗಳನ್ನು ಹಿಂಪಡೆಯಲಾಗಿದೆ ಎಂದಿದ್ದಾರೆ.

ಅಲ್ಲದೇ ಈ ಸಂಭ್ರಮದ ಘಳಿಗೆಯಲ್ಲಿ ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಪಟಾಕಿಗಳನ್ನ ಸಿಡಿಸುವ ಮೂಲಕ ನ್ಯೂಯಾರ್ಕ್ ಜನತೆ ಸಂಭ್ರಮಾಚರಣೆ ಮಾಡಿದ್ದಾರೆ.

The post 70% ವ್ಯಾಕ್ಸಿನೇಷನ್ ಗರಿ ತಲುಪಿದ ನ್ಯೂಯಾರ್ಕ್​ನಲ್ಲಿ ಸಂಭ್ರಮಾಚರಣೆ appeared first on News First Kannada.

Source: newsfirstlive.com

Source link