75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಕೆಂಪು ಕೋಟೆಯಲ್ಲಿ ಬಿಗಿ ಭದ್ರತೆ, ಸಕಲ ಸಿದ್ಧತೆ ಪೂರ್ಣ | 75th Independence Day celebrations Multi layered security cover in Red Fort


Independence Day ಪ್ರವೇಶ ದ್ವಾರದಲ್ಲಿ ಹೈ ರೆಸಲ್ಯೂಷನ್ ಇರುವ ಎಫ್ಆರ್​​ಎಸ್ ಸಾಧನ ಇರಿಸಲಾಗಿದೆ. ದೆಹಲಿಯಲ್ಲಿ ಸಿಆರ್​​ಪಿಸಿಯ ಸೆಕ್ಷನ್ 144 ಹೇರಲಾಗಿದೆ ಎಂದು ದೆಹಲಿಯ ವಿಶೇಷ ಪೊಲೀಸ್ ಕಮಿಷನರ್ (ಕಾನೂನು ಮತ್ತು ಆದೇಶ) ದೀಪೇಂದ್ರ ಪಾಠಕ್ ಹೇಳಿದ್ದಾರೆ.

75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಕೆಂಪು ಕೋಟೆಯಲ್ಲಿ ಬಿಗಿ ಭದ್ರತೆ, ಸಕಲ ಸಿದ್ಧತೆ ಪೂರ್ಣ

ಕೆಂಪುಕೋಟೆಯಲ್ಲಿ ಬಿಗಿ ಬಂದೋಬಸ್ತ್

75ನೇ ಸ್ವಾತಂತ್ರ್ಯ ದಿನಾಚರಣೆ (75th Independence Day) ಹಿನ್ನಲೆಯಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದೆ. ನಾಳೆ (ಭಾನುವಾರ) ಬೆಳಗ್ಗೆ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಷ್ಟ್ರಧ್ವಜ ಹಾರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿಯಾಗಿ ಕೆಂಪುಕೋಟೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಫೇಷಿಯಲ್ ರೆಕಗ್ನಿಷನ್ ಸಿಸ್ಟಂ (Facial Recognition System) ಕ್ಯಾಮೆರಾ ಸೇರಿದಂತೆ ಬಹು ಪದರದ ಭದ್ರತೆ ಒದಗಿಸಲಾಗಿದೆ. ಪೊಲೀಸರ ಪ್ರಕಾರ ಕೆಂಪುಕೋಟೆ ಸುತ್ತ 10,000 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗದೆ. ಇಲ್ಲಿ ನಾಳೆ ನಡೆಯುವ ಕಾರ್ಯಕ್ರಮದಲ್ಲಿ 7000 ಅತಿಥಿಗಳು ಭಾಗವಹಿಸಲಿದ್ದಾರೆ. ಡ್ರೋನ್, ಗಾಳಿಪಟ ಅಥವಾ ಆಗಂತುಕ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದೆ. ಹಾಗಾಗಿ 400ಕ್ಕಿಂತಲೂ ಹೆಚ್ಚು ಗಾಳಿಪಟ ಹಿಡಿಯುವ ಸಾಧನ, ಮೇಲ್ಛಾವಣಿಯಲ್ಲಿ ಇದನ್ನು ನಿಯಂತ್ರಿಸುವ ವ್ಯವಸ್ಥೆ,  ಉತ್ತರ ದೆಹಲಿಯ ಸೂಕ್ಷ್ಮ ಪ್ರದೇಶಗಳಲ್ಲಿ ಇಂಥಾ ದಾಳಿಯನ್ನು ನಿಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಕೆಂಪುಕೋಟೆಯ ಹತ್ತಿರದ ಪ್ರದೇಶವನ್ನು ಗಾಳಿಪಟ ಹಾರಾಟ ನಿಷೇಧ ಪ್ರದೇಶ ಮಾಡಿದ್ದು, ಡ್ರೋನ್ ನಿಗ್ರಹ ವ್ಯವಸ್ಥೆ ಸ್ಥಾಪಿಸಲಾಗಿದೆ.

ಪ್ರವೇಶ ದ್ವಾರದಲ್ಲಿ ಹೈ ರೆಸಲ್ಯೂಷನ್ ಇರುವ ಎಫ್ಆರ್​​ಎಸ್ ಸಾಧನ ಇರಿಸಲಾಗಿದೆ. ದೆಹಲಿಯಲ್ಲಿ ಸಿಆರ್​​ಪಿಸಿಯ ಸೆಕ್ಷನ್ 144 ಹೇರಲಾಗಿದೆ ಎಂದು ದೆಹಲಿಯ ವಿಶೇಷ ಪೊಲೀಸ್ ಕಮಿಷನರ್ (ಕಾನೂನು ಮತ್ತು ಆದೇಶ) ದೀಪೇಂದ್ರ ಪಾಠಕ್ ಹೇಳಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಅಗತ್ಯ ಸಲಕರಣೆಗಳೊಂದಿಗೆ ಗಾಳಿಪಟ ಹಿಡಿಯುವವರನ್ನು ನಿಯೋಜಿಸಲಾಗಿದೆ ಮತ್ತು ಅವರು ಯಾವುದೇ ರೀತಿಯ ಗಾಳಿಪಟ, ಬಲೂನ್ ಮತ್ತು ಚೈನೀಸ್ ಲ್ಯಾಂಟರ್ನ್‌ಗಳು ಈ ಪ್ರದೇಶವನ್ನು ತಲುಪದಂತೆ ತಡೆಯುತ್ತಾರೆ. ವೈಮಾನಿಕ ವಸ್ತುಗಳು ಮತ್ತು ಮಾನವಸಹಿತ ಅಥವಾ ಮಾನವರಹಿತ ಹಾರುವ ವಸ್ತುಗಳಿಂದ ಯಾವುದೇ ಬೆದರಿಕೆಗಳನ್ನು ಎದುರಿಸಲು ರೆಡಾರ್‌ಗಳನ್ನು ಕೆಂಪು ಕೋಟೆಯಲ್ಲಿ ನಿಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ.

ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು ಇತರ ಘಟಕಗಳು ಸುಧಾರಿತ ಸ್ಫೋಟಕ ಸಾಧನಗಳ (ಐಇಡಿ) ತಪಾಸಣೆ ನಡೆಸುತ್ತಿವೆ. ಹೋಟೆಲ್‌ಗಳು, ಅತಿಥಿ ಗೃಹಗಳು, ರೆಸ್ಟೋರೆಂಟ್‌ಗಳು ಮತ್ತು ಮಾರುಕಟ್ಟೆಗಳ ಸುತ್ತಲೂ ಭದ್ರತಾ ತಪಾಸಣೆ ಮತ್ತು ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಲಾಗಿದೆ.

ಉತ್ತರ, ಮಧ್ಯ ಮತ್ತು ನವದೆಹಲಿ ಜಿಲ್ಲಾ ಘಟಕಗಳಲ್ಲಿ 1,000 ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಈ ಕ್ಯಾಮೆರಾಗಳು ಸ್ಮಾರಕಕ್ಕೆ ವಿವಿಐಪಿ ಮಾರ್ಗವನ್ನು ಮೇಲ್ವಿಚಾರಣೆ ಮಾಡಲು ಸಹ ಸಹಾಯ ಮಾಡುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ಸಂಚಾರ ವ್ಯವಸ್ಥೆ ನಿಯಂತ್ರಣ

ಸ್ವಾತಂತ್ರ್ಯ ದಿನದಂದು ಉತ್ತರ, ಮಧ್ಯ ಮತ್ತು ನವದೆಹಲಿ ಜಿಲ್ಲೆಗಳಲ್ಲಿ ಭದ್ರತೆಯನ್ನು ಏರ್ಪಡಿಸಲಾಗಿರುವುದರಿಂದ ಒಟ್ಟು ಎಂಟು ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಲೇಬಲ್ ಇರುವ ವಾಹನಗಳನ್ನು ಮಾತ್ರ ಅನುಮತಿಸಲಾಗುವುದು. ಸೋಮವಾರ ಬೆಳಗ್ಗೆ 4ರಿಂದ 10ರವರೆಗೆ ಇತರೆ ವಾಹನಗಳನ್ನು ನಿರ್ಬಂಧಿಸಲಾಗುವುದು. ನೇತಾಜಿ ಸುಭಾಷ್ ಮಾರ್ಗ, ಲೋಥಿಯನ್ ರಸ್ತೆ, ಎಸ್‌ಪಿ ಮುಖರ್ಜಿ ಮಾರ್ಗ, ಚಾಂದಿನಿ ಚೌಕ್ ರಸ್ತೆ, ನಿಶಾದ್ ರಾಜ್ ಮಾರ್ಗ, ಎಸ್‌ಪ್ಲನೇಡ್ ರಸ್ತೆ, ಔಟರ್ ರಿಂಗ್ ರೋಡ್ (ರಾಜ್‌ಘಾಟ್‌ನಿಂದ ಐಎಸ್‌ಬಿಟಿ), ರಿಂಗ್ ರಸ್ತೆ (ರಾಜ್‌ಘಾಟ್‌ನಿಂದ ವೈ-ಪಾಯಿಂಟ್) ಸಂಚಾರ ವ್ಯವಸ್ಥೆ ನಿಯಂತ್ರಿಸಲಾಗಿದೆ. ನವದೆಹಲಿ ಪ್ರದೇಶದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳ ಕಾರಣ, ಪ್ರಯಾಣಿಕರು ಮಂಡಿ ಹೌಸ್, ಕೋಪರ್ನಿಕಸ್ ಮಾರ್ಗ, ಸಿ-ಹೆಕ್ಸಗಾನ್ ಇಂಡಿಯಾ ಗೇಟ್, ಸಿಕಂದರಾ ರಸ್ತೆ ಮೊದಲಾದ ರಸ್ತೆ ಅವಾಯ್ಡ್ ಮಾಡುವಂತೆ ಹೇಳಿದ್ದಾರೆ. ಸಂಚಾರ ಸಲಹೆ ಪ್ರಕಾರ ಕೆಂಪು ಕೋಟೆ ಅಥವಾ ಹಳೆ ದೆಹಲಿ ರೈಲು ನಿಲ್ದಾಣಕ್ಕೆ ಸಂಚರಿಸುವ ಬಸ್‌ಗಳನ್ನು ಐಎಸ್‌ಬಿಟಿ ಸೇತುವೆಯ ರಸ್ತೆಗೆ ತಿರುಗಿಸಲಾಗುತ್ತದೆ. ಇವು ಮೋರಿ ಗೇಟ್ ಬಳಿಯ ಬೌಲೆವರ್ಡ್ ರಸ್ತೆಯಲ್ಲಿ ನಿಲ್ಲಲಿವೆ. ರೈಲ್ವೇ ನಿಲ್ದಾಣ, ಮೋರಿ ಗೇಟ್, ಐಎಸ್‌ಬಿಟಿ, ಪ್ರಗತಿ ಮೈದಾನಕ್ಕೆ ಹೋಗುವ ಇತರ ಬಸ್‌ಗಳನ್ನು ತುರ್ಕಮನ್ ಗೇಟ್, ಅಸಫ್ ಅಲಿ ರಸ್ತೆ ಬಳಿ ನಿಲ್ಲಿಸಲಾಗುತ್ತದೆ. ಕೆಂಪು ಕೋಟೆ ಪ್ರದೇಶದಲ್ಲಿ ದಟ್ಟಣೆಯನ್ನು ತಪ್ಪಿಸಲು ಕೆಲವು ಬಸ್‌ಗಳನ್ನು ರಿಂಗ್ ರಸ್ತೆ- NH-24 ಗೆ ತಿರುಗಿಸಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *