ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ನಿರ್ಮಾಣ ಮಾಡಿ ನಟಿಸಿರುವ 777 ಚಾರ್ಲಿ ಸಿನಿಮಾ ಕಳೆದ ಮೂರು ವರ್ಷಗಳಿಂದ ಶೂಟಿಂಗ್​ನಲ್ಲಿದ್ದು, ಈ ವರ್ಷ ಚಿತ್ರೀಕರಣ ಮುಗಿಸಿ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ. ಜೂನ್​ 6 ಅಂದ್ರೆ ನಾಳೆ ನಟ ರಕ್ಷಿತ್​​ ಶೆಟ್ಟಿ ಹುಟ್ಟುಹಬ್ಬದಂದು ಚಾರ್ಲಿಯ ‘ಲೈಫ್ ಆಫ್ ಚಾರ್ಲಿ’ ಟೀಸರ್​ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ. ಹೌದು.. ಈ ಬಗ್ಗೆ ಚಿತ್ರತಂಡ ಈಗಾಗಲೇ ಅಧಿಕೃತ ಮಾಹಿತಿ ನೀಡಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಟೀಸರ್​​ ರಿಲೀಸ್​ ಆಗಲಿದೆ. ಅಂದ್ಹಾಗೇ ವಿಶೇಷ ಇರೋದು ಇಲ್ಲೇ.. ಮಲಯಾಳಂನಲ್ಲಿ 777 ಚಾರ್ಲಿ ಟೀಸರ್​ನ ಎಂಟು ಸ್ಟಾರ್​ ನಟ-ನಟಿಯರು ಬಿಡುಗಡೆ ಮಾಡಲಿದ್ದಾರೆ.

ಹೌದು.. ಕಳೆದ ಒಂದು ವಾರಗಳಲ್ಲಿ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿರುವ 777 ಚಾರ್ಲಿ, ಬ್ಯಾಕ್​ ಟು ಬ್ಯಾಕ್​ ಗುಡ್​ ನ್ಯೂಸ್​ ನೀಡಿತ್ತು. ಮಲಯಾಳಂನಲ್ಲಿ ಸೂಪರ್​ ಸ್ಟಾರ್​ ನಟ ಪೃಥ್ವಿರಾಜ್​ ಪ್ರೊಡಕ್ಷನ್​​ ಕಂಪನಿ ಡಿಸ್ಟ್ರಿಬ್ಯೂಷನ್​ ರೈಟ್ಸ್​​ ತೆಗೆದುಕೊಂಡ್ರೆ, ತಮಿಳಿನಲ್ಲಿ ಸ್ಟಾರ್​ ನಿರ್ದೇಶಕ ಕಾರ್ತಿಕ್​ ಸುಬ್ಬರಾಜ್​​ ನಿರ್ಮಾಣ ಸಂಸ್ಥೆ ಸಾಥ್​ ನೀಡಿದೆ. ಇದೀಗ ಮಲಯಾಳಂನ ಟೀಸರ್​ ಬಿಡುಗಡೆ ಮಾಡೋದಕ್ಕೆ ಬರೋಬ್ಬರಿ ಎಂಟು ಮಲಯಾಳಂ ನಟ-ನಟಿಯರು ಸಜ್ಜಾಗಿದ್ದಾರೆ. ಇದಲ್ಲದೇ, ತೆಲುಗಿನಲ್ಲಿ ನ್ಯಾಚುರಲ್​ ಸ್ಟಾರ್​ ನಾಣಿ ಟೀಸರ್​ ಲಾಂಚ್​ ಮಾಡಲಿದ್ದಾರೆ.

ಮಲಯಾಳಂನ ನಟರಾದ ಕುಂಚ್ಯಾಕು ಬೋಬನ್​, ನಿವೀನ್​ ಪೌಳಿ, ಟೊವಿನೋ ಥಾಮಸ್​, ಉನ್ನಿ ಮುಕುಂದನ್​, ಆ್ಯಂಟನಿ ವರ್ಗೀಸ್​​ ಹಾಗೂ ನಟಿಯರಾದ ಅನ್ನಾ ಬೆನ್​, ನಿಖಿಲಾ ವಿಮಲ್​ ಟೀಸರ್​ ಬಿಡುಗಡೆ ಮಾಡುವಲ್ಲಿ ನಟ ಪೃಥ್ವಿರಾಜ್​ ಸುಕುಮಾರನ್​ಗೆ ಜೊತೆಯಾಗಲಿದ್ದಾರೆ. ನಾಳೆ ಸರಿಯಾಗಿ ಬೆಳಗ್ಗೆ 11.04ಕ್ಕೆ 777 ಚಾರ್ಲಿ ಸಿನಿಮಾದ ಎಲ್ಲಾ ಐದು ಭಾಷೆಗಳ ಟೀಸರ್​ ಏಕಕಾಲದಲ್ಲಿ ರಿಲೀಸ್​ ಆಗಲಿದೆ. ಸಿನಿಮಾ ರಿಲೀಸ್​​ಗೂ ಮುನ್ನ ಘಟಾನುಘಟಿ ನಟ-ನಟಿಯರು ಮುಂದೆ ಬಂದು ಚಾರ್ಲಿಗೆ ಸಾಥ್​ ನೀಡ್ತಿರೋದು ನಿಜಕ್ಕೂ ಖುಷಿಯ ವಿಚಾರ. ಒಂದು ವಾರದಿಂದ ಚಿತ್ರತಂಡ ಕ್ರಿಯೇಟ್​​ ಮಾಡಿರುವ ಕ್ಯೂರಿಯಾಸಿಟಿಗೆ ಎಲ್ಲರೂ ನಾಳೆ ತೆರೆ ಕಾಣಲಿರುವ ಟೀಸರ್​ ಮೇಲೆ ತಮ್ಮ ಚಿತ್ತ ನೆಟ್ಟಿದ್ದಾರೆ ಅಂದ್ರೆ ತಪ್ಪಾಗಲ್ಲ. ಕಿರಣ್​ ರಾಜ್​ 777 ಚಾರ್ಲಿಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

The post 777 ಚಾರ್ಲಿಗೆ ಮಲಯಾಳಂನ ಘಟಾನುಘಟಿಗಳ ಸಾಥ್​; ತೆಲುಗಿನಲ್ಲಿ ನಾಣಿಯಿಂದ ಟೀಸರ್​ ರಿಲೀಸ್​ appeared first on News First Kannada.

Source: newsfirstlive.com

Source link