‘777 ಚಾರ್ಲಿ’ ನೋಡಿ ಭಾವುಕರಾದ ಸಿಎಂ ಬಸವರಾಜ ಬೊಮ್ಮಾಯಿ; ಇಲ್ಲಿದೆ ವಿಡಿಯೋ | Cm Basavaraj Bommai get emotional after watched 777 Charlie Movie


‘777 ಚಾರ್ಲಿ’ ನೋಡಿ ಭಾವುಕರಾದ ಸಿಎಂ ಬಸವರಾಜ ಬೊಮ್ಮಾಯಿ; ಇಲ್ಲಿದೆ ವಿಡಿಯೋ

‘777 ಚಾರ್ಲಿ’ ಸಿನಿಮಾ ನೋಡಿದ ನಂತರ ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾವುಕರಾಗಿದ್ದಾರೆ. ಅಲ್ಲದೆ, ಸಿನಿಮಾ ಬಗ್ಗೆ ಒಂದಷ್ಟು ಭಾವುಕ ನುಡಿಗಳನ್ನು ನುಡಿದಿದ್ದಾರೆ.

TV9kannada Web Team

| Edited By: Rajesh Duggumane

Jun 14, 2022 | 7:53 AM
ಬೆಂಗಳೂರಿ ಒರಾಯನ್ ಮಾಲ್​ನಲ್ಲಿ ಜೂನ್ 13ರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು (Basavaraj Bommai) ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ (777 Charlie Movie) ವೀಕ್ಷಿಸಿದ್ದಾರೆ. ಇವರಿಗೆ ಅನೇಕ ಸಚಿವರು, ಶಾಸಕರು ಸಾತ್​ ನೀಡಿದ್ದಾರೆ.  ‘777 ಚಾರ್ಲಿ’ ಸಿನಿಮಾ ಮನುಷ್ಯ ಹಾಗೂ ಶ್ವಾನದ ನಡುವಿನ ಕಥೆಯನ್ನು ಒಳಗೊಂಡಿದೆ. ಚಿಕ್ಕ ಮಕ್ಕಳಿಂದ ಹಿಡಿದು, ವಯಸ್ಸಾದವರಿಗೂ ಈ ಸಿನಿಮಾ ಕಣ್ಣೀರು ತರಿಸುತ್ತದೆ. ಸಿಎಂ ಕೂಡ ಇದಕ್ಕೆ ಹೊರತಾಗಿಲ್ಲ. ‘777 ಚಾರ್ಲಿ’ ಸಿನಿಮಾ ನೋಡಿದ ನಂತರ ಅವರು ಭಾವುಕರಾಗಿದ್ದಾರೆ. ಅಲ್ಲದೆ, ಸಿನಿಮಾ ಬಗ್ಗೆ ಒಂದಷ್ಟು ಭಾವುಕ ನುಡಿಗಳನ್ನು ನುಡಿದಿದ್ದಾರೆ. ಅವರು ಸಿನಿಮಾ ಬಗ್ಗೆ ಹೇಳಿದ್ದೇನು ಎಂಬುದನ್ನು ಈ ವಿಡಿಯೋದಲ್ಲಿ ನೋಡಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published.