777 Charlie: ‘777 ಚಾರ್ಲಿ’ ಪ್ರಚಾರದ ವೇಳೆ ರಶ್ಮಿಕಾ ಮಂದಣ್ಣ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ರಕ್ಷಿತ್​ ಶೆಟ್ಟಿ | 777 Charlie movie star Rakshit Shetty answers to a question related to Rashmika Mandanna


777 Charlie: ‘777 ಚಾರ್ಲಿ’ ಪ್ರಚಾರದ ವೇಳೆ ರಶ್ಮಿಕಾ ಮಂದಣ್ಣ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ರಕ್ಷಿತ್​ ಶೆಟ್ಟಿ

ರಕ್ಷಿತ್ ಶೆಟ್ಟಿ – ರಶ್ಮಿಕಾ ಮಂದಣ್ಣ

Rakshit Shetty on Rashmika Mandanna: ಬ್ರೇಕಪ್​ ಬಳಿಕವೂ ರಕ್ಷಿತ್​ ಶೆಟ್ಟಿ ಅವರು ರಶ್ಮಿಕಾ ಮಂದಣ್ಣ ಬಗ್ಗೆ ಒಳ್ಳೆಯ ಭಾವನೆ ಹೊಂದಿದ್ದಾರೆ. ಕೆಲವು ಸಂದರ್ಭಗಳಲ್ಲಿ ರಕ್ಷಿತ್​ ನೀಡಿದ ಹೇಳಿಕೆಗಳೇ ಅದಕ್ಕೆ ಸಾಕ್ಷಿ.

ನಟ ರಕ್ಷಿತ್​ ಶೆಟ್ಟಿ (Rakshit Shetty) ಅವರು ಹಲವು ಕಾರಣಗಳಿಂದಾಗಿ ಸುದ್ದಿ ಆಗುತ್ತಿದ್ದಾರೆ. ಇಂದು (ಜೂನ್​ 6) ಅವರ ಜನ್ಮದಿನ. ‘ಸಿಂಪಲ್​ ಸ್ಟಾರ್​’ ಹುಟ್ಟುಹಬ್ಬದ ಪ್ರಯುಕ್ತ ಅವರ ಬಗೆಗಿನ ಅನೇಕ ವಿಚಾರಗಳನ್ನು ಫ್ಯಾನ್ಸ್​ ಚರ್ಚಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ರಕ್ಷಿತ್​ ಶೆಟ್ಟಿ ಅವರು ತುಂಬ ಶ್ರಮಪಟ್ಟು ಮೇಲೆ ಬಂದವರು. ಒಂದೊಂದು ಸಿನಿಮಾದಲ್ಲಿಯೂ ಅವರ ಶ್ರಮ ಕಾಣಿಸುತ್ತದೆ. ಎಲ್ಲ ಬಗೆಯ ಸಿನಿಮಾಗಳನ್ನು ಮಾಡುತ್ತ ಅವರು ಡಿಫರೆಂಟ್​ ಆಗಿ ಗುರುತಿಸಿಕೊಂಡಿದ್ದಾರೆ. ಅನೇಕರಿಗೆ ಅವರು ಅವಕಾಶ ನೀಡಿದ್ದಾರೆ ಎಂಬುದು ಕೂಡ ಗಮನಾರ್ಹ. ಇಂದು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಮೊದಲ ಬಾರಿಗೆ ಅವಕಾಶ ನೀಡಿದ್ದೇ ರಕ್ಷಿತ್ ಶೆಟ್ಟಿ. ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ನಟಿಸಿದ ರಶ್ಮಿಕಾಗೆ ದೊಡ್ಡಮಟ್ಟದ ಗೆಲುವು ಸಿಕ್ಕಿತು. ಬಳಿಕ ಅವರು ಪರಭಾಷೆಗೆ ತೆರಳಿ ಸ್ಟಾರ್​ ನಟಿಯಾಗಿ ಬೆಳೆದರು. ಇತ್ತೀಚೆಗೆ ‘777 ಚಾರ್ಲಿ’ (777 Charlie) ಸಿನಿಮಾದ ಪ್ರಮೋಷನ್​ ವೇಳೆ ರಶ್ಮಿಕಾ ಮಂದಣ್ಣ ಬಗ್ಗೆ ಕೇಳಿದ ಪ್ರಶ್ನೆಗೆ ರಕ್ಷಿತ್​ ಶೆಟ್ಟಿ ಉತ್ತರ ನೀಡಿದ್ದಾರೆ.

‘ಕಿರಿಕ್​ ಪಾರ್ಟಿ’ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ ಬಳಿಕ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ನಡುವೆ ಪ್ರೀತಿ ಚಿಗುರಿತ್ತು. ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ಎಂಗೇಜ್​ಮೆಂಟ್​ ಕೂಡ ಅದ್ದೂರಿಯಾಗಿ ನೆರವೇರಿತ್ತು. ಆದರೆ ಇಬ್ಬರ ನಡುವೆ ನಂತರದ ದಿನಗಳಲ್ಲಿ ವೈಮನಸ್ಸು ಮೂಡಿದ್ದರಿಂದ ಆ ಸಂಬಂಧ ಮುರಿದು ಬಿತ್ತು.

TV9 Kannada


Leave a Reply

Your email address will not be published.