777 Charlie OTT: ಒಟಿಟಿಗೆ ಎಂಟ್ರಿ ಕೊಟ್ಟ ರಕ್ಷಿತ್​ ಶೆಟ್ಟಿಯ ‘777 ಚಾರ್ಲಿ’; ಜುಲೈ 29ರಿಂದ ವೂಟ್​ ಸೆಲೆಕ್ಟ್​ನಲ್ಲಿ ಪ್ರಸಾರ | Rakshit Shetty starrer 777 Charlie OTT premiere on Voot Select from 29th July


777 Charlie | Voot Select: ವೂಟ್​ ಸೆಲೆಕ್ಟ್​ನಲ್ಲಿ ‘777 ಚಾರ್ಲಿ’ ಸಿನಿಮಾ ಪ್ರಸಾರ ಆಗುತ್ತಿದೆ. ಥಿಯೇಟರ್​ನಲ್ಲಿ ಮಿಸ್​ ಮಾಡಿಕೊಂಡವರು ಹಾಗೂ ಮನೆಯಲ್ಲೇ ಕುಳಿತು ಮತ್ತೆ ಮತ್ತೆ ನೋಡಬೇಕು ಎಂದು ಹಂಬಲಿಸುವವರಿಗೆ ಒಟಿಟಿ ಮೂಲಕ ಈ ಚಿತ್ರ ಲಭ್ಯವಾಗಿದೆ.

777 Charlie OTT: ಒಟಿಟಿಗೆ ಎಂಟ್ರಿ ಕೊಟ್ಟ ರಕ್ಷಿತ್​ ಶೆಟ್ಟಿಯ ‘777 ಚಾರ್ಲಿ’; ಜುಲೈ 29ರಿಂದ ವೂಟ್​ ಸೆಲೆಕ್ಟ್​ನಲ್ಲಿ ಪ್ರಸಾರ

ರಕ್ಷಿತ್ ಶೆಟ್ಟಿ, 777 ಚಾರ್ಲಿ

ಈ ವರ್ಷ ಗೆಲುವು ಪಡೆದ ಕೆಲವೇ ಕೆಲವು ಸಿನಿಮಾಗಳಲ್ಲಿ ‘777 ಚಾರ್ಲಿ’ (777 Charlie) ಕೂಡ ಒಂದು. ಚಂದನವನದ ಈ ಚಿತ್ರವನ್ನು ದೇಶಾದ್ಯಂತ ಜನರು ಮೆಚ್ಚಿಕೊಂಡಿದ್ದಾರೆ. ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಕಥೆಯನ್ನು ಈ ಸಿನಿಮಾ ವಿವರಿಸಿದೆ. ಕಾಮಿಡಿ ಮತ್ತು ಎಮೋಷನಲ್​ ಶೈಲಿಯಲ್ಲಿ ಮೂಡಿಬಂದ ‘777 ಚಾರ್ಲಿ’ ಚಿತ್ರಕ್ಕೆ ಥಿಯೇಟರ್​ನಲ್ಲಿ ಭರ್ಜರಿ ಕಮಾಯಿ ಆಗಿದೆ. ಬಹುಕೋಟಿ ರೂಪಾಯಿ ಬಿಸ್ನೆಸ್​ ಮಾಡಿದ ಬಳಿಕ ಈ ಸಿನಿಮಾ ಈಗ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ವೂಟ್​ ಸೆಲೆಕ್ಟ್​ (Voot Select) ಮೂಲಕ ಪ್ರೇಕ್ಷಕರು ಈ ಚಿತ್ರವನ್ನು ನೋಡಬಹುದು. ರಕ್ಷಿತ್​ ಶೆಟ್ಟಿ (Rakshit Shetty) ವೃತ್ತಿಜೀವನದ ಡಿಫರೆಂಟ್​ ಚಿತ್ರವಾಗಿ ‘777 ಚಾರ್ಲಿ’ ಹೊರಹೊಮ್ಮಿದೆ. ಕಿರಣ್​ ರಾಜ್​ ನಿರ್ದೇಶನದ ಈ ಚಿತ್ರಕ್ಕೆ ‘ಪರಂವಾ ಸ್ಟುಡಿಯೋಸ್​’ ಬಂಡವಾಳ ಹೂಡಿದೆ.

ಜೂನ್​ 10ರಂದು ‘777 ಚಾರ್ಲಿ’ ಸಿನಿಮಾ ಬಿಡುಗಡೆ ಆಗಿತ್ತು. ಅದಕ್ಕೂ ಮುನ್ನವೇ ದೇಶದ ಅನೇಕ ಕಡೆಗಳಲ್ಲಿ ಪೇಯ್ಡ್​ ಪ್ರೀಮಿಯರ್​ ಮಾಡಲಾಗಿತ್ತು. ದೆಹಲಿ, ಹೈದರಾಬಾದ್​, ಮುಂಬೈ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಎಮೋಷನಲ್​ ಆಗಿದ್ದರು. ಈ ಕಾರಣದಿಂದ ಭರ್ಜರಿ ಓಪನಿಂಗ್​ ಪಡೆದುಕೊಂಡಿತು. ಈಗ ಈ ಚಿತ್ರ 50ನೇ ದಿನದ ಹೊಸ್ತಿಲಿನಲ್ಲಿದೆ.

ಜುಲೈ 29ಕ್ಕೆ ‘777 ಚಾರ್ಲಿ’ ಸಿನಿಮಾ 49 ದಿನ ಪೂರೈಸಿದಂತಾಗುತ್ತಿದೆ. ಈ ಸಮಯದಲ್ಲಿ ಒಟಿಟಿಗೆ ಈ ಚಿತ್ರ ಎಂಟ್ರಿ ನೀಡಿದೆ. ವೂಟ್​ ಸೆಲೆಕ್ಟ್​ನಲ್ಲಿ ಸದ್ಯಕ್ಕೆ ಕನ್ನಡ ವರ್ಷನ್​ ಮಾತ್ರ ಲಭ್ಯವಾಗಿದೆ. ಥಿಯೇಟರ್​ನಲ್ಲಿ ಮಿಸ್​ ಮಾಡಿಕೊಂಡವರು ಹಾಗೂ ಮನೆಯಲ್ಲೇ ಕುಳಿತು ಮತ್ತೆ ಮತ್ತೆ ನೋಡಬೇಕು ಎಂದು ಹಂಬಲಿಸುವವರಿಗೆ ಒಟಿಟಿ ಮೂಲಕ ‘777 ಚಾರ್ಲಿ’ ಲಭ್ಯವಾಗಿದೆ. ಚಿತ್ರದ ಗೆಲುವನ್ನು ಸಂಭ್ರಮಿಸಲು ಇಡೀ ತಂಡ ಥೈಯ್ಲೆಂಡ್​ಗೆ ತೆರಳಲಿದೆ.

TV9 Kannada


Leave a Reply

Your email address will not be published. Required fields are marked *