7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ ಮನೆ ಖರೀದಿ ಮುಂಗಡ – 7th Pay Commission: Get up to Rupees 25 lakh at 7.1 percent interest for buying a new house Details here latest personal finance business news in Kannada


7th Pay Commission; ಎಚ್​ಬಿಎ ನಿಯಮದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು 34 ತಿಂಗಳ ಮೂಲ ವೇತನ ಅಥವಾ 25 ಲಕ್ಷ ರೂ. ವರೆಗೆ ಮುಂಗಡ ಪಡೆಯಬಹುದಾಗಿದೆ.

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ ಮನೆ ಖರೀದಿ ಮುಂಗಡ

ಸಾಂದರ್ಭಿಕ ಚಿತ್ರ

ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗ(7th Pay Commission) ಶಿಫಾರಸಿನ ಪ್ರಕಾರ, 2023ರ ಮಾರ್ಚ್ 31ರ ವರೆಗೆ ಕಡಿಮೆ ಬಡ್ಡಿ ದರದಲ್ಲಿ (Interest Rate) ಮನೆ ನಿರ್ಮಾಣ ಮುಂಗಡ ಅಥವಾ ಹೌಸ್ ಬ್ಯುಲ್ಡಿಂಗ್ ಅಡ್ವಾನ್ಸ್ (HBA) ಪಡೆಯಬಹುದಾಗಿದೆ. ಸದ್ಯ ಎಚ್​ಬಿಎ ಬಡ್ಡಿ ದರ ಶೇಕಡಾ 7.1ರಷ್ಟಿದೆ. ಬಡ್ಡಿ ದರವನ್ನು ಕಡಿಮೆ ಮಾಡುವ ಬಗ್ಗೆ 2022ರ ಏಪ್ರಿಲ್ 1ರಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತೀರ್ಮಾನ ಕೈಗೊಂಡಿತ್ತು. ಎಚ್​ಬಿಎ ನಿಯಮದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು (Central Government Employees) ಮನೆ ನಿರ್ಮಾಣ, ಮನೆ ನಿರ್ಮಾಣಕ್ಕಾಗಿ ನಿವೇಶನ ಖರೀದಿ, ವಸತಿ ಸೌಕರ್ಯಗಳ ವಿಸ್ತರಣೆ, ಫ್ಲ್ಯಾಟ್ ಅಥವಾ ಮನೆ ಖರೀದಿಸಲು ಮನೆ ನಿರ್ಮಾಣ ಮುಂಗಡ ಹಣ ಪಡೆಯಬಹುದಾಗಿದೆ. ಮನೆ ನಿರ್ಮಾಣ ಈಗಾಗಲೇ ಪ್ರಾರಂಭಿಸಿದ್ದರೂ ಸಹ ಮುಂಗಡ ಪಡೆಯಲು ಅವಕಾಶವಿದೆ.

ಶೇಕಡಾ 7.1ರ ಬಡ್ಡಿಯಲ್ಲಿ 25 ಲಕ್ಷ ರೂ.ವರೆಗೆ ಲಭ್ಯ

2017ರ ಎಚ್​ಬಿಎ ನಿಯಮದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು 34 ತಿಂಗಳ ಮೂಲ ವೇತನ ಅಥವಾ 25 ಲಕ್ಷ ರೂ. ವರೆಗೆ ಮುಂಗಡ ಪಡೆಯಬಹುದಾಗಿದೆ. ಒಂದು ವೇಳೆ ಮನೆ ಅಥವಾ ಫ್ಲ್ಯಾಟ್​ ದರ 25 ಲಕ್ಷ ರೂ.ಗಿಂತ ಕಡಿಮೆ ಇದ್ದಲ್ಲಿ ಕಡಿಮೆ ಮುಂಗಡ ಪಡೆಯಬಹುದು.

ಮನೆ ವಿಸ್ತರಣೆಗೂ ಪಡೆಯಬಹುದು ಮುಂಗಡ

ಕೇಂದ್ರ ಸರ್ಕಾರಿ ಉದ್ಯೋಗಿಗಳು ಈಗಾಗಲೇ ಮನೆ ಹೊಂದಿದ್ದರೆ ಅದರ ವಿಸ್ತರಣೆಗೂ ಎಚ್​ಬಿಎ ನಿಯಮದ ಅಡಿಯಲ್ಲಿ ಮುಂಗಡ ಪಡೆಯಬಹುದಾಗಿದೆ. ನೌಕರರ 34 ತಿಂಗಳ ಮೂಲ ವೇತನ ಅಥವಾ 10 ಲಕ್ಷ ರೂ. ವರೆಗೆ ಮುಂಗಡ ಪಡೆಯಲು ಅವಕಾಶವಿದೆ.

ಮುಂಗಡದ ಮೊತ್ತ ನೌಕರರು ಖರೀದಿಸುವ ಮನೆ ಅಥವಾ ನಿವೇಶನದ ಒಟ್ಟು ಮೊತ್ತದ ಶೇಕಡಾ 80 ಅನ್ನು ಮೀರುವಂತಿಲ್ಲ ಎಂದು ನಿಯಮದಲ್ಲಿ ಹೇಳಲಾಗಿದೆ. ಮನೆ ವಿಸ್ತರಣೆಗೂ ಇದೇ ನಿಯಮ ಅನ್ವಯವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆ ಖರೀದಿ ಅಥವಾ ನಿರ್ಮಾಣ ಮಾಡುವುದಾದರೆ ಸಂಬಂಧಿಸಿದ ವಿಭಾಗ ಮುಖ್ಯಸ್ಥರಿಂದ ಅನುಮತಿ ದೊರೆತರೆ ಶೇಕಡಾ 100ರ ವರೆಗೂ ಮುಂಗಡ ಪಡೆಯಬಹುದಾಗಿದೆ. ಆದರೆ, 25 ಲಕ್ಷ ರೂ. ಒಳಗಿದ್ದಲ್ಲಿ ಮಾತ್ರ ಇದು ಅನ್ವಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.