ಬೆಂಗಳೂರು: ದಿನೇ ದಿನೇ ಕೊರೊನಾ ಮಹಾಮಾರಿ ಹೆಚ್ಚಾಗಿ ಹರಡುತ್ತಿದೆ. ಜನರಿಗೆ ಪ್ರತಿದಿನ ಎಚ್ಚರಿಕೆ ಕೊಡ್ತಿದ್ರೂ ಕೆಲವರು ಅದನ್ನ ಗಂಭೀರವಾಗಿ ಪರಿಗಣಿಸುತ್ತಿರುವಂತೆ ಕಾಣ್ತಿಲ್ಲ. ಅನಗತ್ಯವಾಗಿ ಹೊರಗಡೆ ಓಡಾಟ ನಡೆಸೋದು, ಮಾಸ್ಕ್​ ಧರಿಸದೇ, ಸಾಮಾಜಿಕ ಅಂತರ ಪಾಲಿಸದೇ ನಿರ್ಲಕ್ಷ್ಯ ವಹಿಸುತ್ತಿರೋದು ಕಂಡುಬರ್ತಾನೆ ಇದೆ. ಹೀಗೆ ಕೊರೊನಾ ಬಗ್ಗೆ ನೆಗ್ಲೆಟ್ ಮಾಡ್ತಿರೋರು ಓದಲೇಬೇಕಾದ ಸುದ್ದಿ ಇದು.

ಈಗ ಸೋಂಕಿತಗರಿಗೆ ಸರಿಯಾದ ಪ್ರಮಾಣದಲ್ಲಿ ಬೆಡ್ ಇಲ್ಲ, ಆಕ್ಸಿಜನ್ ಇಲ್ಲ ಅನ್ನೋ ಪರಿಸ್ಥಿತಿ ಇದೆ. ಮುಂದೆ ಟ್ರೀಟ್ ಮಾಡೋಕೆ ಯಾರು ಇಲ್ಲದ ಪರಿಸ್ಥಿತಿ ಬರಬಹುದು. ನ್ಯೂಸ್​​ಫಸ್ಟ್​​ಗೆ ಆರೋಗ್ಯ ಇಲಾಖೆ ಮೂಲಗಳಿಂದ ಸಿಕ್ಕಿರೋ ಮಾಹಿತಿ ಇಂಥದ್ದೊಂದು ಸಂಗತಿಯನ್ನ ಬಿಚ್ಚಿಟ್ಟಿದೆ.

ಕಾರಣ ಪ್ರತಿದಿನ ಕೊರೊನಾದ ರಿಸ್ಕ್​ನಲ್ಲೇ ಕೆಲಸ ಮಾಡ್ತಿರೋ ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿಗೆ ತುತ್ತಾಗ್ತಿದ್ದಾರೆ. ಒಂದೊಂದು ಝೋನ್ನಲ್ಲಿ 28-32 ಆರೋಗ್ಯ ಸಿಬ್ಬಂದಿ ಪಾಸಿಟಿವ್ ಆಗ್ತಿದೆ. ಒಬ್ಬೊಬ್ಬರು ಕನಿಷ್ಠ 15 ದಿನ ಐಸೋಲೇಷನ್​ಗೆ ಹೋಗ್ತಿದ್ದಾರೆ. ಇರುವ ಸಿಬ್ಬಂದಿಯಲ್ಲಿ ಶೇಕಡಾ 8ರಷ್ಟು ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ದಿನೇ ದಿನೇ ಕೇಸ್ ಜಾಸ್ತಿಯಾದ್ರೆ ಮುಂದೆ ಪರದಾಡುವ ಸ್ಥಿತಿ ಎದುರಾಗಬಹುದು.

ಆರೋಗ್ಯ ಸಿಬ್ಬಂದಿಗೆ ವರ್ಕ್​ ಪ್ರೆಶರ್​
ಇದರ ನಡುವೆ ಆರೋಗ್ಯ ಸಿಬ್ಬಂದಿಗೆ ವರ್ಕ್ ಪ್ರೆಜರ್ ಜಾಸ್ತಿಯಿದ್ದು, ಸೂಕ್ತ ಶಿಫ್ಟ್ ಇಲ್ವಂತೆ. ಹೀಗಾಗಿ ಮುಂದೆ ಆರೋಗ್ಯ ಇಲಾಖೆ ಸಿಬ್ಬಂದಿ ಅಭಾವ ಎದುರಾಗಬಹುದು ಎನ್ನಲಾಗ್ತಿದೆ. ಇದನ್ನ ನಿಮಗೆ ಹೆದರಿಸಲು ಹೇಳ್ತಿಲ್ಲ. ಎಚ್ಚರಿಕೆಯಿಂದಿರಿ ಅನ್ನೋದಷ್ಟೇ ನಮ್ಮ ಉದ್ದೇಶ. ಒಂದೆಡೆ ತಮ್ಮ ಕುಟುಂಬಸ್ಥರು ಸೋಂಕಿಗೀಡಾದಾಗ ವೈದ್ಯರು ಬೇಗ ನೋಡ್ತಿಲ್ಲ ಅಂತ ಪರದಾಡುತ್ತಿರೋ ಜನರು, ಮತ್ತೊಂದೆಡೆ ಕೊರೊನಾ ವಿರುದ್ಧ ಹೋರಾಡ್ತಿರೋ ವೈದ್ಯರೇ ಸೋಂಕಿಗೆ ತುತ್ತಾಗ್ತಿದ್ದಾರೆ. ಹೀಗಾಗಿ ಪ್ರಿವೆನ್ಷನ್ ಈಸ್​ ಬೆಟರ್ ದ್ಯಾನ್ ಕ್ಯೂರ್​ ಅನ್ನೋದನ್ನ ಜನರು ಅರ್ಥ ಮಾಡಿಕೊಳ್ಳಬೇಕು. ಕೊರೊನಾದಿಂದ ರಕ್ಷಿಸಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆಗಳನ್ನ ವಹಿಸೋದು ಅಗತ್ಯ. ಎಲ್ಲರೂ ಕೋವಿಡ್ ನಿಯಮ ಪಾಲಿಸಿ, ಸುರಕ್ಷಿವಾಗಿರಿ, ಲಸಿಕೆ ಪಡೆಯಿರಿ ಅನ್ನೋದು ವೈದ್ಯರ ಮನವಿಯೂ ಆಗಿದೆ.

ನ್ಯೂಸ್​ಫಸ್ಟ್​ ಕಳಕಳಿ : ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ. ಕೈ ತೊಳೆಯುತ್ತಿರಿ. ಮತ್ತು ಮೇ 1 ರಿಂದ 18ರ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/  ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮುಖ್ಯ ಸಂಗತಿ ಗಮನಿಸಿ CoWin ಆ್ಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.

The post 8% ಆರೋಗ್ಯ ಸಿಬ್ಬಂದಿಗೆ ಸೋಂಕು: ಕೊರೊನಾ ಬಗ್ಗೆ ನೆಗ್ಲೆಟ್ ಮಾಡೋರು ಓದ್ಲೇಬೇಕಾದ ಸುದ್ದಿ ಇದು appeared first on News First Kannada.

Source: newsfirstlive.com

Source link