ದಾವಣಗೆರೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಕಾರ ಮಳೆ ಸಾಕಷ್ಟು ಅವಾಂತರ ಸೃಷ್ಟಿಸುತ್ತಿದೆ. ನಿನ್ನೆ ರಾತ್ರಿ ಸುರಿದ ಜೋರಾದ ಮಳೆಗೆ ಕುರಿ ಕೊಟ್ಟಿಗೆ ಕುಸಿದು ವ್ಯಕ್ತಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಗೋವಿಹಾಳ್ ಗ್ರಾಮದಲ್ಲಿ ನಡೆದಿದೆ.
ಬಸವರಾಜ್ (60) ಮೃತ ದುರ್ದೈವಿ. ರಾತ್ರಿ ವೇಳೆ ಸುರಿದ ಮಳೆಗೆ ದಿಢೀರ್ನೆ ಕೊಟ್ಟಿಗೆ ಮೇಲ್ಛಾವಣಿ ಸಮೇತ ಕುಸಿದು ಬಿದ್ದಿದೆ. ಕೊಟ್ಟಿಗೆಯಲ್ಲಿದ್ದ 8 ಕುರಿಗಳು ಸಹಿತ ಸಾವನ್ನಪ್ಪಿವೆ. ಇನ್ನು ಸ್ಥಳಕ್ಕೆ ಹರಿಹರ ತಹಶೀಲ್ದಾರ್ ರಾಮಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.