ಉತ್ತರಕನ್ನಡ: ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮಹಿಳೆಯನ್ನ ಪೊಲೀಸರು ವಶಕ್ಕೆ ಪಡೆದಿರೋ ಘಟನೆ ನಡೆದಿದೆ. ಖತೀಜಾ ಮೆಹರಿನ್ ಬಂಧಿತ ಪಾಕಿಸ್ತಾನಿ ಮಹಿಳೆ.

8 ವರ್ಷದ ಹಿಂದೆ ಭಟ್ಕಳದ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್‌ನ್ನ ದುಬೈನಲ್ಲಿ ವಿವಾಹವಾಗಿದ್ದ ಮಹಿಳೆ 2015ರಲ್ಲಿ ಕಳ್ಳಮಾರ್ಗದ ಮೂಲಕ ಭಾರತ ಪ್ರವೇಶಸಿದ್ದರು ಎನ್ನಲಾಗಿದೆ. 2014ರಲ್ಲಿ ಪ್ರವಾಸಿ ವೀಸಾ ಪಡೆದು 3 ತಿಂಗಳು ಭಾರತಕ್ಕೆ ಬಂದಿದ್ದ ಮಹಿಳೆ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿಯೇ ಭಟ್ಕಳದ ನವಾಯತ ಕಾಲೋನಿಯಲ್ಲಿ ನೆಲೆಸಿದ್ದರು ಎನ್ನಲಾಗಿದೆ. 3 ಮಕ್ಕಳೊಂದಿಗೆ ಭಟ್ಕಳದಲ್ಲೇ ವಾಸ್ತವ್ಯ ಹೂಡಿದ್ದ ಈ ಮಹಿಳೆ ಕಳೆದ 8 ವರ್ಷದಿಂದ ಸುಳ್ಳು ದಾಖಲೆ ನೀಡಿ ವೋಟರ್ ಐಡಿ, ರೇಷನ್ ಕಾರ್ಡ್, ಜನ್ಮದಾಖಲೆ ಎಲ್ಲವನ್ನೂ ಪಡೆದಿದ್ದಾರಂತೆ.  ಖಚಿತ ಮಾಹಿತಿ ಮೇರೆಗೆ ಮಹಿಳೆಯನ್ನ ಪತ್ತೆಹಚ್ಚಿದ್ದ ಭಟ್ಕಳ ಪೊಲೀಸರು ಐಪಿಸಿ ಸೆಕ್ಷನ್ 468, 471 ಅಡಿ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

The post 8 ವರ್ಷಗಳಿಂದ ಭಟ್ಕಳದಲ್ಲಿ ಅಕ್ರಮ ವಾಸ: ಪೊಲೀಸರ ವಶಕ್ಕೆ ಸಿಕ್ಕಳು ಪಾಕಿಸ್ತಾನಿ ಮಹಿಳೆ appeared first on News First Kannada.

Source: newsfirstlive.com

Source link