8 ವರ್ಷದ ಪ್ರೀತಿಗೆ ಪೋಷಕರ ನಿರಾಕರಣೆ; ವಿಷ ಸೇವಿಸಿ ಯುವಕ ಸಾವು, ಸಾಮಾಜಿಕ ಜಾಲತಾಣದಲ್ಲಿ ಯುವತಿ, ಪೋಷಕ ಪೋಟೋ ಹಾಕಿ ಸ್ನೇಹಿತರ ಆಕ್ರೋಶ | Lover commits to suicide after rejection of marriage and his friends virals girl and her family photos in hassan


8 ವರ್ಷದ ಪ್ರೀತಿಗೆ ಪೋಷಕರ ನಿರಾಕರಣೆ; ವಿಷ ಸೇವಿಸಿ ಯುವಕ ಸಾವು, ಸಾಮಾಜಿಕ ಜಾಲತಾಣದಲ್ಲಿ ಯುವತಿ, ಪೋಷಕ ಪೋಟೋ ಹಾಕಿ ಸ್ನೇಹಿತರ ಆಕ್ರೋಶ

ಸಾಮಾಜಿಕ ಜಾಲತಾಣದಲ್ಲಿ ಯುವತಿ, ಪೋಷಕ ಪೋಟೋ ಹಾಕಿ ಸ್ನೇಹಿತರ ಆಕ್ರೋಶ

ಕಾಫಿ ಬೆಳೆಗಾರ ಗಂಗಾಧರ್-ಪಾರ್ವತಿ ಪುತ್ರ ಅನಿಲ್, ಕಾಫಿ ಬೆಳೆಗಾರ ಶಿವರಾಂ-ಸವಿತಾ ಪುತ್ರಿ ಭಾವನಾಳನ್ನ ಪ್ರೀತಿಸುತ್ತಿದ್ದ. ಆದ್ರೆ ಭಾವನಾ ಪೋಷಕರು ಮದುವೆ ನಿರಾಕರಿಸಿದ್ದರು. ಇದರಿಂದ ಮನನೊಂದು ಶುಕ್ರವಾರ ಬೆಳಿಗ್ಗೆ ಭಾವನಾಳ ಮನೆ ಮುಂದೆಯೇ‌ ವಿಷ ಸೇವಿಸಿದ್ದಾನೆ.

ಹಾಸನ: ಮದುವೆ ನಿರಾಕಸಿದ್ದಕ್ಕೆ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದ್ದು ಪ್ರೇಮಿಯ ದುರಂತ ಅಂತ್ಯ ಕಂಡ ಲವ್‌ಸ್ಟೋರಿ ವಿಷಯ ವೈರಲ್ ಆಗಿದೆ. ಮೃತನ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಾಕಿಸಿ ಯುವತಿ ಹಾಗೂ ಆಕೆಯ ಪೋಷಕರ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾಲೇಬೇಲೂರು ಗ್ರಾಮದಲ್ಲಿ ಅನಿಲ್ (24) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ. ಹೀಗಾಗಿ ಈತನ ಸ್ನೇಹಿತರು ಅನಿಲ್ ಪ್ರೇಯಸಿಯ ಕುಟುಂಬಸ್ಥರ ಫೋಟೋಗಳನ್ನು ವೈರಲ್ ಮಾಡಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾಲೇಬೇಲೂರು ಗ್ರಾಮದ ನಿವಾಸಿ ಅನಿಲ್, ಅದೇ ಊರಿನ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಸುಮಾರು 8ವರ್ಷಗಳ ಕಾಲ ಇಬ್ಬರು ಓಡಾಡಿಕೊಂಡಿದ್ರು. ಈ ವಿಚಾರ ಹುಡುಗಿಯ ಪೋಷಕರಿಗೆ ಗೊತ್ತಾಗುತ್ತಿದ್ದಂತೆ, ಹೊರಗೆ ಹೋಗದಂತೆ ಸ್ಟ್ರಿಕ್ಟ್ ಮಾಡಿದ್ದಾರೆ. ಹುಡುಗ ಮನೆ ಬಳಿ ಹೋದ್ರು, ಹುಡುಗಿ ಕ್ಯಾರೆ ಎಂದಿಲ್ಲ. ಇದರಿಂದ ಮನನೊಂದ ಅನಿಲ್ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

TV9 Kannada


Leave a Reply

Your email address will not be published. Required fields are marked *