2015 ಆ. 11ರಂದು ನಡೆದಿದ್ದ ಯುವಕನ ಭೀಭತ್ಸ ಕೊಲೆ ರಹಸ್ಯ 8 ವರ್ಷದ ಬಳಿಕ ಬೆಳಕಿಗೆ ಬಂದಿದೆ. ಭಾಗ್ಯಶ್ರೀ ಮತ್ತು ಶಿವಪುತ್ರನನ್ನು ಬೆಂಗಳೂರಿನ ಜಿಗಣಿ ಪೊಲೀಸರು ಬಂಧಿಸಿದ್ದಾರೆ.

ಭಾಗ್ಯಶ್ರೀ, ಲಿಂಗರಾಜ್, ಶಿವಪುತ್ರ,
ಬೆಂಗಳೂರು: 2015 ಆ. 11ರಂದು ನಡೆದಿದ್ದ ಯುವಕನ ಭೀಭತ್ಸ ಕೊಲೆ (murder) ರಹಸ್ಯ 8 ವರ್ಷದ ಬಳಿಕ ಬೆಳಕಿಗೆ ಬಂದಿದೆ. ಸಿ ರಿಪೋರ್ಟ್ ಆಗಿದ್ದ ಕೇಸ್ನ ಹಂತಕರು ಕೊನೆಗೂ ಸಿಕ್ಕಿ ಬಿದಿದ್ದಾರೆ. ಭಾಗ್ಯಶ್ರೀ ಮತ್ತು ಶಿವಪುತ್ರನನ್ನು ಬೆಂಗಳೂರಿನ ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಲಿಂಗರಾಜ್ ಪೂಜಾರಿ ಎಂಬ ಯುವಕನನ್ನು ಕೊಲೆ ಮಾಡಿ ಮೃತದೇಹ ಪೀಸ್ ಪೀಸ್ ಮಾಡಿ ಕೈ, ಕಾಲು, ರುಂಡ ಕತ್ತರಿಸಿ ಏರ್ ಬ್ಯಾಗ್ನಲ್ಲಿ ಈ ಇಬ್ಬರು ಆರೋಪಿಗಳು ತುಂಬಿದ್ದರು. ಗುರುತು ಸಿಗದಂತೆ ದೇಹದ ಭಾಗ ಬೇರೆ ಬೇರೆ ಕಡೆ ಎಸೆದಿದ್ದರು. ಬಳಿಕ ಮಹಾರಾಷ್ಟ್ರದ ನಾಸಿಕ್ನಲ್ಲಿ ತಲೆಮರೆಸಿಕೊಂಡಿದ್ದರು. ಬಂಧಿತರು ಮೂಲತಃ ವಿಜಯಪುರ ಜಿಲ್ಲೆಯವರು. ಆದರೆ ಬೆಂಗಳೂರು ಹೊರವಲಯ ಜಿಗಣಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೆಲಸ ಮಾಡಿಕೊಂಡಿದ್ದರು. ಜೊತೆಗೆ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಜಿಗಣಿಯ ವಡೇರಮಂಚನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಬಂಧಿತರು ವಾಸವಾಗಿದ್ದರು.
ಈ ವೇಳೆ ಜಿಗಣಿಯ ವಡೇರಮಂಚನಹಳ್ಳಿಗೆ ಲಿಂಗರಾಜು ಬಂದಿದ್ದಾನೆ. ಇಬ್ಬರು ಒಂದೇ ಮನೆಯಲ್ಲಿ ವಾಸ ಮಾಡುತ್ತಿರೋದಕ್ಕೆ ಅಕ್ಕನ ಜೊತೆ ಗಲಾಟೆ ಮಾಡಿದ್ದಾನೆ. ಇಬ್ಬರ ಪ್ರೀತಿಗೆ ಭಾಗ್ಯಶ್ರೀ ಸಹೋದರ ಲಿಂಗರಾಜು ವಿರೋಧಿಸಿದ್ದಾನೆ. ಹಾಗಾಗಿ ಪ್ರಿಯಕರ ಶಿವಪುತ್ರ ಜೊತೆ ಸೇರಿ ತಮ್ಮನನ್ನೇ ಭಾಗ್ಯಶ್ರೀ ಹತ್ಯೆಗೈದಿದ್ದಾಳೆ. ಬಳಿಕ ಆತನ ಮೃತದೇಹವನ್ನು ಪೀಸ್ ಪೀಸ್ ಮಾಡಿದ್ದಾರೆ. ಬ್ಯಾಗ್ನಲ್ಲಿ ಹಾಕಿಕೊಂಡು ದೇಹದ ಭಾಗಗಳನ್ನು ಬೇರೆ ಬೇರೆ ಕಡೆ ಬಿಸಾಡಿದ್ದಾರೆ. ಕೆರೆಯಲ್ಲಿ ಕಾಲು ಮಾತ್ರ ಪೊಲೀಸರಿಗೆ ಸಿಕ್ಕಿತ್ತು.