
ಸಾಂದರ್ಭಿಕ ಚಿತ್ರ
Narendra Modi Govt. Schemes: ಕಳೆದ ಎಂಟು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರವು ಸಮಾಜದ ವಿವಿಧ ಸ್ತರಗಳಿಗೆ ನೇರವಾಗಿ ಪ್ರಯೋಜನವಾಗುವಂತೆ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ತಂದಿರುವ ಬದಲಾವಣೆಗಳ ವಿವರ ಇಲ್ಲಿದೆ.
ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಮುಂದಾಳತ್ವದ ಎನ್ಡಿಎ ಸರ್ಕಾರ ಅಧಿಕಾರ ಹಿಡಿದು 8 ವರ್ಷ ಪೂರ್ಣಗೊಂಡಿದೆ. 2014ನೇ ಇಸವಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರದಲ್ಲಿ ದೇಶದ ಡಿಜಿಟಲ್ ವ್ಯವಸ್ಥೆಯಲ್ಲೇ ಕ್ರಾಂತಿಕಾರಿ ಬದಲಾವಣೆಗಳಾಗಿವೆ. 2013-14ರ ವರೆಗೆ ಡಿಜಿಟಲ್ ಮೂಲಸೌಕರ್ಯದ ಕೊರತೆಯಿಂದಾಗಿ ಭಾರತದ ಪಾವತಿ ಎಕೋ ಸಿಸ್ಟಮ್ ಹೆಚ್ಚಾಗಿ ಭೌತಿಕ ವಿಧಾನಗಳಲ್ಲಿ – ನಗದು, ಚೆಕ್ ಇತ್ಯಾದಿಗಳಲ್ಲಿ ನಡೆಯುತ್ತಿತ್ತು; ಆ ಹೊತ್ತಿಗೆ ಇ-ಪೇಮೆಂಟ್ ಆಯ್ಕೆಗಳು ಇದ್ದಾಗಲೂ ಆ ರೀತಿಯ ಬಳಕೆ ಹೆಚ್ಚಾಗಿತ್ತು. 2013-14ರಲ್ಲಿ ಭಾರತದಲ್ಲಿ ಕೇವಲ 220 ಕೋಟಿ ಇ-ವಹಿವಾಟುಗಳು ನಡೆದಿವೆ. ಇದು ವಿಶ್ವಾದ್ಯಂತ ಡಿಜಿಟಲ್ ವಹಿವಾಟಿನ ಒಂದು ಸಣ್ಣ ಭಾಗವಾಗಿತ್ತು. ದೊಡ್ಡ ಪ್ರಮಾಣದ ಭೌತಿಕ ವಿತ್ತೀಯ ವಹಿವಾಟುಗಳು ತೆರಿಗೆ ವಂಚನೆಗೆ ಸಹಾಯ ಮಾಡಿತ್ತು ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗೆ ಪರ್ಯಾಯವಾಗಿ ವಹಿವಾಟುಗಳನ್ನು ಸುಗಮಗೊಳಿಸಿತು. ಮೋದಿ ಸರ್ಕಾರವು ಅಧಿಕಾರ ವಹಿಸಿಕೊಂಡ ನಂತರ ಸಮಾಜದ ಎಲ್ಲ ವರ್ಗಗಳಿಗೆ ಹಣಕಾಸು ವಹಿವಾಟಿನ ಆದ್ಯತೆ ವಿಧಾನವನ್ನಾಗಿ ಮಾಡುವ ದೃಷ್ಟಿಯಿಂದ ಡಿಜಿಟಲ್ ಪಾವತಿ ಎಕೋ ಸಿಸ್ಟಮ್ ಅಭಿವೃದ್ಧಿಪಡಿಸಲು ಶೀಘ್ರವಾಗಿ ಮುನ್ನಡೆಸಿತು. ಈ ಪ್ರಯತ್ನದ ಫಲಿತಾಂಶಗಳು ಅದ್ಭುತವಾಗಿವೆ.
– ಎಲ್ಲ ಭಾರತೀಯರಿಗೆ ಡಿಜಿಟಲ್ ಪೇಮೆಂಟ್ಗಳು ಈಗ ಅತ್ಯಂತ ಜನಪ್ರಿಯ ವಹಿವಾಟು ವಿಧಾನವಾಗಿದೆ.
– ಡಿಜಿಟಲ್ ಪೇಮೆಂಟ್ಗಳನ್ನು ಸಕ್ರಿಯಗೊಳಿಸಲು ಹೆಚ್ಚಿನ ಸ್ಮಾರ್ಟ್ಫೋನ್ ಬಳಕೆ ಇದೆ.
– 45 ಕೋಟಿಗೂ ಹೆಚ್ಚು ಜನ್ ಧನ್ ಖಾತೆಗಳು, UPI, ರುಪೇ ಕಾರ್ಡ್ಗಳಂತಹ ವಿಶ್ವಾಸಾರ್ಹ ಪಾವತಿ ಆಯ್ಕೆಗಳಿವೆ.
– ಭಾರತವು ಈಗ ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ಎಕೋ ಸಿಸ್ಟಮ್ ವ್ಯವಸ್ಥೆಯನ್ನು ಹೊಂದಿದ್ದು, ಇದನ್ನು 10 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ನಿರ್ಮಿಸಲಾಗಿದೆ.
2020-21ರಲ್ಲಿ ಭಾರತವು 5,554 ಕೋಟಿ ಡಿಜಿಟಲ್ ಪಾವತಿ ವಹಿವಾಟುಗಳನ್ನು ದಾಖಲಿಸಿದೆ. ಇದು 2021-22ರಲ್ಲಿ 7,422 ಕೋಟಿ ಡಿಜಿಟಲ್ ವಹಿವಾಟುಗಳಿಗೆ ಏರಿಕೆಯಾಗಿದೆ.
– 2020 ಮತ್ತು 2021ರಲ್ಲಿ, ಚೀನಾ, ದಕ್ಷಿಣ ಕೊರಿಯಾ ಮತ್ತು ಅಮೆರಿಕಾಗಿಂತ ಭಾರತವು ರಿಯಲ್ ಟೈಮ್ ಆನ್ಲೈನ್ ಪಾವತಿಗಳಲ್ಲಿ ವಿಶ್ವಕ್ಕೇ ನಂಬರ್ 1 ಆಗಿ ಹೊರಹೊಮ್ಮಿದೆ.
2020ರಲ್ಲಿ ಚೀನಾದ 25.4 ಬಿಲಿಯನ್ಗೆ ಹೋಲಿಸಿದರೆ ಭಾರತವು 25.5 ಬಿಲಿಯನ್ ರಿಯಲ್ ಟೈಮ್ ಡಿಜಿಟಲ್ ವಹಿವಾಟುಗಳನ್ನು ದಾಖಲಿಸಿದೆ