– ಚಾಲಕನ ಬಂಧಿಸಿದ ಪೊಲೀಸರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಜೈನ್ ಪೇಟೆ ಬಳಿ ರಸ್ತೆ ಬದಿಯಲ್ಲಿದ್ದ 80 ವರ್ಷದ ವೃದ್ಧೆಗೆ ಆಟೋ ಗುದ್ದಿ ಚಾಲಕ ಪರಾರಿಯಾದ ಘಟನೆ ನಡೆದಿದೆ.

ಕಳೆದ ಮೇ 30ರಂದು ಈ ಘಟನೆ ನಡೆದಿದ್ದು, ಇಂದು ಸಿಸಿಟಿವಿ ದೃಶ್ಯದಿಂದ ಬೆಳಕಿಗೆ ಬಂದಿದೆ. ಮಳೆ ಬರುತ್ತಿದ್ದ ವೇಳೆ ವೃದ್ಧೆ ಗುಲಾಬಿ(80) ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಆಟೋ ಗುದ್ದಿ ಚಾಲಕ ಪರಾರಿಯಾಗಿದ್ದಾನೆ. ವೃದ್ಧೆ ರಸ್ತೆ ಬದಿಯಲ್ಲಿ ಬಿದ್ದಿದ್ದರೂ ಅವರನ್ನು ರಕ್ಷಣೆ ಮಾಡದೆ ಸಾಕಷ್ಟು ವಾಹನ ಸವಾರರು ತೆರಳಿದ್ದರು.

ತುಂಬಾ ಹೊತ್ತಿನ ಬಳಿಕ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಸಂಪತ್ ಪೂಜಾರಿ ಅವರು ತಮ್ಮ ವಾಹನದಲ್ಲಿ ಕೂರಿಸಿ ಬಳಿಕ ಅಂಬುಲೆನ್ಸ್ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದರು. ಇದೀಗ ವೃದ್ಧ ಮಹಿಳೆ ಚೇತರಿಸಿಕೊಂಡಿದ್ದು, ಆರೋಪಿ ಆಟೋ ಚಾಲಕನನ್ನು ಮೂಡಬಿದ್ರೆ ಪೊಲೀಸರು ಇಂದು ಬಂಧಿಸಿದ್ದಾರೆ.

The post 80ರ ವೃದ್ಧೆಗೆ ಆಟೋ ಗುದ್ದಿ ಪರಾರಿ- ಸಿಸಿಟಿವಿ ದೃಶ್ಯದಿಂದ ಘಟನೆ ಬೆಳಕಿಗೆ appeared first on Public TV.

Source: publictv.in

Source link