ಕಲಬುರಗಿ: ಕಾಂಗ್ರೆಸ್ ಹಿರಿಯ ಮುಖಂಡ, ರಾಜ್ಯ ಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 80ನೇ ವರ್ಷಕ್ಕೆ ಕಾಲಿಟ್ಟ ಮಲ್ಲಿಕಾರ್ಜುನ ಖರ್ಗೆಯವರ ಹುಟ್ಟು ಹಬ್ಬವನ್ನು ಕಲಬುರಗಿಯಲ್ಲಿ ಅವರ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ್ದಾರೆ.


ಮಲ್ಲಿಕಾರ್ಜುನ ಖರ್ಗೆ ಅವರ ಕಟ್ಟಾ ಅಭಿಮಾನಿ ಶರಣು ತೆಗನೂರ್ ನೇತೃತ್ವದಲ್ಲಿ ನಗರದ ಜಗತ್ ಸರ್ಕಲ್​ನಲ್ಲಿ ಮಲ್ಲಿಕಾರ್ಜುನ್​ ಖರ್ಗೆ ಅವರ 80 ಅಡಿ ಎತ್ತರದ ಬ್ಯಾನರ್ ಸಿದ್ಧಪಡಿಸಿ, 7 ಜೆಸಿಬಿಗಳಿಂದ ಕಟೌಟ್​ಗೆ ಹೂ ಮಳೆ ಸುರಿಸಿದ್ದಾರೆ.

ಬಾಸ್​​ ಅಕ್ಷರ ವಿನ್ಯಾಸದ ಬೃಹತ್​ ಕೇಕ್​ ​ಕತ್ತರಿಸಿ, ಪಟಾಕಿ ಸಿಡಿಸಿ ನೆಚ್ಚಿನ ನಾಯಕನ ಹುಟ್ಟಿದ ದಿನವನ್ನ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿ ಸಂಭ್ರಮಿಸಿದ್ದಾರೆ.

The post 80 ಅಡಿ ಕಟೌಟ್​ಗೆ ಹೂ ಮಳೆ ಸುರಿಸಿ ಮಲ್ಲಿಕಾರ್ಜುನ ಖರ್ಗೆ ಹುಟ್ಟುಹಬ್ಬ ಆಚರಣೆ appeared first on News First Kannada.

Source: newsfirstlive.com

Source link