ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಜನರ ಜೀವ ಹಿಂಡುತ್ತಿದ್ರೆ, ಇದನ್ನೇ ಬಂಡವಾಳ ಮಾಡಿಕೊಂಡಿರೋ ಸಾಕಷ್ಟು ಖಾಸಗಿ ಆಸ್ಪತ್ರೆಗಳು ಬಡವರ ರಕ್ತ ಹೀರುತ್ತಿವೆ. ಈ ಬಗ್ಗೆ ನ್ಯೂಸ್​ಫಸ್ಟ್​ ವರದಿ ಬಿತ್ತರಿಸ್ತಾನೆ ಇದೆ. ಕೆಲ ದಿನಗಳ ಹಿಂದಷ್ಟೇ ಆಕ್ಸಫರ್ಡ್​ ಆಸ್ಪತ್ರೆಯ ಕರ್ಮಕಾಂಡದ ಬಗ್ಗೆ ವರದಿ ಮಾಡಿತ್ತು. ಇದೀಗ ನಗರದ ಮತ್ತೊಂದು ಆಸ್ಪತ್ರೆ ನೋಟಿಸ್​ ಕೊಟ್ಟರೂ ಕ್ಯಾರೆ ಎನ್ನದೇ ಮೊಂಡುತನ ತೋರಿ ತನ್ನ ಕಾಲ ಮೇಲೆ ತಾನೇ ಕಲ್ಲು ಎತ್ತಿಹಾಕೊಂಡಿದೆ.

ಕಂಫರ್ಟ್​ ಆಸ್ಪತ್ರೆ. ಹೆಸರಿಗೆ ಮಾತ್ರ ಇದು ಕಂಫರ್ಟ್​ ಬಿಟ್ರೆ, ರೋಗಿಗಳಿಗೆ ಅಲ್ಲಿ ಕಂಫರ್ಟ್​ ಸ್ವಲ್ಪವೂ ಇಲ್ಲ.. ಅದ್ರಲ್ಲೂ, ನಗರದಲ್ಲಿ ಕೊರೊನಾ ಆರ್ಭಟಿಸ್ತಿರೋ ಈ ಸಂದರ್ಭದಲ್ಲಂತೂ ಈ ಆಸ್ಪತ್ರೆ ಅದನ್ನೇ ಬಂಡವಾಳ ಮಾಡ್ಕೊಂಡು ರೋಗಿಗಳ ಜೀವ ಹಿಂಡುತ್ತಿದೆ. ಸರ್ಕಾರ ಚಿಕಿತ್ಸೆಗೆ ರೇಟ್​ ಫಿಕ್ಸ್​ ಮಾಡಿದ್ರೂ ಕೂಡ ದುಪ್ಪಟ್ಟು ಹಣ ಕಸಿಯುತ್ತಿದೆ.

ಕೊರೊನಾ ಚಿಕಿತ್ಸೆಗೆ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಹಣ ಪಡೆದಿದ್ದ ಆರೋಪ ಕಂಫರ್ಟ್​ ಆಸ್ಪತ್ರೆ ವಿರುದ್ಧ ಕೇಳಿ ಬಂದಿತ್ತು. ಹಣ ಹಿಂದಿರುಗಿಸುವಂತೆ ಹೇಳಿದ್ರೂ ಕಳ್ಳಾಟ ತೋರಿದ್ದ ಆಸ್ಪತ್ರೆ ವಿರುದ್ಧ ಇದೀಗ ಎಫ್​ಐಆರ್​ ದಾಖಲಾಗಿದೆ.

ನಿಮಿಷದ ಲೆಕ್ಕದಲ್ಲಿ ಆಕ್ಸಿಜನ್​ ನೀಡಲು ಸಾವಿರಾರು ರೂಪಾಯಿ ಬಿಲ್​..

ಕಗ್ಗದಾಸಪುರ ಮುಖ್ಯ ರಸ್ತೆಯಲ್ಲಿರುವ ಕಂಫರ್ಟ್ ಆಸ್ಪತ್ರೆಯ ವಿರುದ್ಧ ದೂರುಗಳು ಕೇಳಿ ಬಂದಿದ್ವು. ನೋಡೆಲ್​ ಅಧಿಕಾರಿಗಳಾದ ಕೆಎಸ್​ಆರ್​ಪಿ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಐಎಎಸ್ ಅಧಿಕಾರಿ ಮಣಿವಣ್ಣನ್ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ರೂ. 81 ಮಂದಿ ಸೋಂಕಿತರಿಂದ 65 ಲಕ್ಷ ಹಣವನ್ನ ಕಂಪರ್ಟ್ ಆಸ್ಪತ್ರೆ ಪಡೆದಿತ್ತು. ನಿಮಿಷದ ಲೆಕ್ಕದಲ್ಲಿ ಆಕ್ಸಿಜನ್​ ನೀಡಲು ಸಾವಿರಾರು ರೂಪಾಯಿ ಬಿಲ್​ ಮಾಡ್ತಿದ್ರು. ಐಸಿಯು ಬೆಡ್ ಹೆಸರಿನಲ್ಲಿ ಲಕ್ಷಾಂತರ ಹಣ ವಸೂಲಿ ಮಾಡಿದ್ದ ಆಸ್ಪತ್ರೆ. ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯನ್ನ ಆಸ್ಪತ್ರೆ ಒದಗಿಸಿರಲಿಲ್ಲ.

ಹೀಗಾಗಿ ಸೋಂಕಿತರಿಗೆ ಹಣವನ್ನ ಮರಳಿ ನೀಡುವಂತೆ ಆಸ್ಪತ್ರೆಗೆ ನೋಟಿಸ್ ನೀಡಿದ್ರು. ಅಲ್ಲದೇ ಪಡೆದಿರುವ ಹಣವನ್ನ ರೋಗಿಗಳಿಗೆ ವಾಪಸ್ ನೀಡಿ ವರದಿ ನೀಡುವಂತೆ ಕೂಡ ಅಲೋಕ್​ ಕುಮಾರ್​ ಸೂಚನೆ ಕೊಟ್ಪಿದ್ರು. ಆಸ್ಪತ್ರೆಗೆ ನೋಟಿಸ್ ನೀಡಿದ್ರೂ ಯಾವುದೇ ಉತ್ತರ ನೀಡದೆ ಉಡಾಫೆ ತೋರಿತ್ತು. ಈ ಹಿನ್ನೆಲೆ ಬಿಬಿಎಂಪಿ ಸಿ.ವಿ. ರಾಮನ್ ನಗರ ವಿಭಾಗದ ಆರೋಗ್ಯಧಿಕಾರಿ ಡಾ. ಶ್ರೀನಿವಾಸ್ ಬೆಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಧಿಕಾರಿಗಳೇ ಆಸ್ಪತ್ರೆ ಮೇಲೆ ದಾಳಿ ಮಾಡಿ ನೋಟಿಸ್ ನೀಡಿದ್ರೂ ಕಂಫರ್ಟ್​ ಆಸ್ಪತ್ರೆ ಕ್ಯಾರೆ ಅಂದಿಲ್ಲ. ಸದ್ಯ ಆಸ್ಪತ್ರೆ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಇದ್ರಿಂದಲಾದ್ರೂ, ಎಚ್ಚೆತ್ತು ಇತರ ಖಾಸಗಿ ಆಸ್ಪತ್ರೆಗಳು ಬುದ್ಧಿ ಕಲಿಯುತ್ವಾ? ಬಡವರ ರಕ್ತ ಹೀರುವುದನ್ನ ನಿಲ್ಲಿಸುತ್ವಾ? ಕಾದು ನೋಡಬೇಕಿದೆ.

The post 81 ಮಂದಿಗೆ 65 ಲಕ್ಷ ಬಿಲ್: ನೋಟಿಸ್ ಕೊಟ್ರೂ ಕ್ಯಾರೇ ಎನ್ನದ ಆಸ್ಪತ್ರೆ ವಿರುದ್ಧ ದಾಖಲಾಯ್ತು FIR appeared first on News First Kannada.

Source: newsfirstlive.com

Source link