ದುಡ್ಡಿದ್ದರೆ ಸಾಕು, ಹೇಗೆ ಬೇಕಾದರು ಬದುಕಬಹುದು. ಎಷ್ಟು ಐಷಾರಾಮಿ ಜೀವನ ಬೇಕಾದರು ನಡೆಸಬಹುದು. ಅದಕ್ಕೆ ತಾಜ ಉದಾಹರಣೆ ಸಿನಿಮಾ ತಾರೆಯರು. ಬಾಲಿವುಡ್ ನಟಿಯರಂತೂ ಈಗ ಕಾಲಿಗೆ ಹಾಕುವ ಪಾದ ರಕ್ಷೆಗಳಿಗೂ ಲಕ್ಷಗಟ್ಟಲೇ ಹಣ ಖರ್ಚು ಮಾಡುತ್ತಾರೆ. ಈ ಸಾಲಿಗೆ ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಸೇರ್ಪಡೆಯಾಗಿದ್ದಾರೆ.
ಹೌದು, ನಟಿ ಜಾಹ್ನವಿ ಕಪೂರ್ ಈಗ ದುಬಾರಿ ಶೂ ಖರಿದೀಸಿ ಸುದ್ದಿಯಲ್ಲಿದ್ದಾರೆ. ಹಾಲಿಡೇ ಎಂಜಾಯ್ ಮಾಡುತ್ತಿರುವ ಜಾಹ್ನವಿ ಕಪೂರ್, ಸ್ಟೈಲಿಶ್ ಶೂಗಳಿಗೆ ಬರೋಬ್ಬರಿ 87 ಸಾವಿರ ರೂಪಾಯಿ ನೀಡಿದ್ದಾರೆ. ಈಗ ತನ್ನ ಇನ್ಸ್ಟಾಗ್ರಾಂನಲ್ಲಿ ಹಾಲಿಡೇ ಫೋಟೋ ಪೋಸ್ಟ್ ಮಾಡಿರುವ ಜಾಹ್ನವಿ ಕಪೂರ್, ಶೂ ಎದ್ದು ಕಾಣುವಂತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಜಾಹ್ನವಿ ಕಪೂರ್ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಹೇಳಿಕೊಳ್ಳುವಂತಹ ಯಶಸ್ಸು ಸಿಗದೆ ಹೋದರೂ ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ಬೇಡಿಕೆ ಇದೆ. ದೊಡ್ಡ ಯಶಸ್ಸಿಗಾಗಿ ಈ ಯುವನಟಿ ಕಾಯುತ್ತಿದ್ದಾರೆ.
ಇತ್ತೀಚೆಗೆ ಜಾಹ್ನವಿ ಕೆಲವು ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದ್ದವು. ಈ ಚಿತ್ರಗಳಲ್ಲಿ ಖುಷಿ ಮತ್ತು ಜಾಹ್ನವಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಫೋಟೋದಲ್ಲಿ ಜಾಹ್ನವಿ ಕಪೂರ್ ಟ್ಯೂಬ್ ಟಾಪ್ ಧರಿಸಿ, ಒಂದು ಕಾಲನ್ನು ಮೇಲಕ್ಕೆ ಎತ್ತಿದ್ದರು. ಜಾಹ್ನವಿ ತನ್ನ ತೊಡೆಯ ಮೇಲಿರುವ ಉಡುಪನ್ನು ಸ್ಲಿಪ್ ಮಾಡಿದ್ದರು. ಈ ಕಾರಣಕ್ಕೆ ಈ ಫೋಟೋಗಳು ವೈರಲ್ ಆಗಿದ್ದವು.
ಜಾಹ್ನವಿ ಕಪೂರ್ ನಿತ್ಯ ಜಿಮ್ಗೆ ಹೋಗಲು ಸುಮಾರು 50 ಸಾವಿರ ಬೆಲೆಯ ಜಾಗರ್ಸ್ ಶೂ ಹಾಕಿಕೊಳ್ಳುತ್ತಾರಂತೆ. ಈ ಹಿಂದೆ ಸಲೂನ್ಗೆ ಹೋಗುವಾಗ ಈ ಶೂ ಧರಿಸಿದ್ದರು.