ಮ್ಯಾಂಚೆಸ್ಟರ್ ಸಿಟಿ ಪರ ಆಡುತ್ತಿರುವ ಕ್ಲೋಯ್ ಕೆಲ್ಲಿ ಈ ಗೋಲನ್ನು ಎಂದಿಗೂ ಮರೆಯುವುದಿಲ್ಲ. ಏಕೆಂದರೆ ಅದು ಅವರ ಮೊದಲ ಅಂತಾರಾಷ್ಟ್ರೀಯ ಗೋಲು. ಕೆಲ್ಲಿ ಅವರ ಗೋಲ್ ನೆರವಿನಿಂದ ಇಂಗ್ಲೆಂಡ್ ಚಾಂಪಿಯನ್ ಆಯಿತು.
UEFA ಮಹಿಳಾ ಯುರೋ 2022 ಫೈನಲ್ನಲ್ಲಿ (UEFA Women’s Euro 2022 final) ಇಂಗ್ಲೆಂಡ್ ಮಹಿಳಾ ತಂಡ ಜರ್ಮನಿಯನ್ನು ಸೋಲಿಸಿ ಪಂದ್ಯವನ್ನು 2-1 ಅಂತರದಿಂದ ಗೆದ್ದುಕೊಂಡಿತು. ಇಂಗ್ಲೆಂಡ್ನ ಈ ಗೆಲುವಿಗೆ ಕ್ಲೋಯ್ ಕೆಲ್ಲಿ ವಿಜೇತ ಸ್ಕ್ರಿಪ್ಟ್ ಬರೆದರು. ಅವರು 110ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟರು. ಕಾರ್ನರ್ನಿಂದ ಬಂದ ಪಾಸ್ ಅನ್ನು ಕ್ಲೋಯ್ ಗೋಲ್ ಆಗಿ ಪರಿವರ್ತಿಸಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಮಾಡಿದರು. ಗೋಲು ದಾಖಲಾದ ಕೂಡಲೇ ಕ್ಲೋಯ್ ತನ್ನ ಟೀ ಶರ್ಟ್ ಕಳಚಿ ತನ್ನ ಸಹ ಆಟಗಾರರೊಂದಿಗೆ ಸಂತಸ ಹಂಚಿಕೊಂಡರು. ಆದರೆ, ಈಕೆಯ ಕೆಲಸ ನೋಡಿದ ನೆಟ್ಟಿಗರು ನ್ಯಾಟ್ ವೆಸ್ಟ್ ಸರಣಿಯ ಫೈನಲ್ ವೇಳೆ ಟೀಂ ಇಂಡಿಯಾದ ಮಾಜಿ ನಾಯಕ ಗಂಗೂಲಿ ಅವರನ್ನು ನೆನಪಿಸಿಕೊಳ್ಳುತ್ತಿದ್ದರು.
ಜೆರ್ಸಿ ಬಿಚ್ಚಿದ ಕೆಲ್ಲಿ..
ಕ್ಲೋಯ್ ಕೆಲ್ಲಿಯ ಸಂಭ್ರಮಾಚರಣೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕ್ಲೋಯ್ ಗೋಲು ಹೊಡೆದ ತಕ್ಷಣ, ಅವರು ರೆಫರಿಯತ್ತ ನೋಡಿದರು. ರೆಫರಿ ಗೋಲು ಮಾನ್ಯವೆಂದು ಘೋಷಿಸಿದ ತಕ್ಷಣ, ಅವರು ತನ್ನ ಟೀ-ಶರ್ಟ್ ಅನ್ನು ತೆಗೆದು ಸಂತೋಷದಿಂದ ಮೈದಾನದಲ್ಲಿ ಜೆರ್ಸಿಯನ್ನು ಗಾಳಿಯಲ್ಲಿ ತಿರುಗಿಸುತ್ತ ಓಡಲು ಆರಂಭಿಸಿದರು. ಈ ಗೆಲುವಿನ ನಂತರವೂ ಸಹ ಕೆಲ್ಲಿ ತನ್ನ ಟೀ ಶರ್ಟ್ ಧರಿಸಿರಲಿಲ್ಲ. ಡ್ರೆಸ್ಸಿಂಗ್ ರೂಮ್ನಲ್ಲೂ ಅದೇ ಶೈಲಿಯಲ್ಲಿ ಕಂಡುಬಂದರು.
Chloe Kelly goal😍❤️She give lead 2_1#WEURO2022 pic.twitter.com/KiNpJclU7M
— Maheen (@Madridheen) July 31, 2022
ಮೊದಲ ಅಂತಾರಾಷ್ಟ್ರೀಯ ಗೋಲು..
ಮ್ಯಾಂಚೆಸ್ಟರ್ ಸಿಟಿ ಪರ ಆಡುತ್ತಿರುವ ಕ್ಲೋಯ್ ಕೆಲ್ಲಿ ಈ ಗೋಲನ್ನು ಎಂದಿಗೂ ಮರೆಯುವುದಿಲ್ಲ. ಏಕೆಂದರೆ ಅದು ಅವರ ಮೊದಲ ಅಂತಾರಾಷ್ಟ್ರೀಯ ಗೋಲು. ಕೆಲ್ಲಿ ಅವರ ಗೋಲ್ ನೆರವಿನಿಂದ ಇಂಗ್ಲೆಂಡ್ ಚಾಂಪಿಯನ್ ಆಯಿತು. ಕಳೆದ ವರ್ಷ ಮೇ ತಿಂಗಳಲ್ಲಿ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದ ಕೆಲ್ಲಿ ಇದರಿಂದಾಗಿ ಟೋಕಿಯೋ ಒಲಿಂಪಿಕ್ಸ್ನಿಂದ ಹೊರಬಂದಿದ್ದಲ್ಲದೆ ಮಾನಸಿಕವಾಗಿಯೂ ತೊಂದರೆಗೀಡಾಗಿದ್ದರು. ಕ್ಲಬ್ಗೆ ಮರಳಿದ ನಂತರವೇ ಅವರಿಗಾದ ಇಂಜುರಿ ಅವರಿಗೆ ಮಾನಸಿಕವಾಗಿ ಪರಿಣಾಮ ಬೀರಿತ್ತು ಎಂದು ತಿಳಿದುಬಂದಿದೆ. ಈ ಟೂರ್ನಿಯಲ್ಲಿ ಬದಲಿ ಆಟಗಾರ್ತಿಯಾಗಿ ಕಣಕ್ಕೆ ಇಳಿದಿದ್ದ ಅವರು ಫೈನಲ್ನಲ್ಲಿ 87,192 ರ ದಾಖಲೆಯ ಪ್ರೇಕ್ಷಕರ ಮುಂದೆ ಜರ್ಮನಿ ವಿರುದ್ಧ ಪಂದ್ಯಾವಳಿಯ ಗೆಲುವಿನ ಗೋಲು ಗಳಿಸಿದರು.
Chloe Kelly. England’s hero 💥 pic.twitter.com/U3NAe90igg
— B/R Football (@brfootball) July 31, 2022