9ನೇ ವಯಸ್ಸಿಗೆ ಯೋಗ ಟೀಚರ್​ ಆಗುವ ಮೂಲಕ ಗಿನ್ನಿಸ್​ ವರ್ಲ್ಡ್​ ರೆಕಾರ್ಡ್ ನಿರ್ಮಿಸಿದ ​ ಬಾಲಕ | 9 year old set the guinness world record become youngest yoga teacher in the world


9ನೇ ವಯಸ್ಸಿಗೆ ಯೋಗ ಟೀಚರ್​ ಆಗುವ ಮೂಲಕ ಗಿನ್ನಿಸ್​ ವರ್ಲ್ಡ್​ ರೆಕಾರ್ಡ್ ನಿರ್ಮಿಸಿದ ​ ಬಾಲಕ

ರೆಯಾಶ್​ ಸುರಾನಿ

ಸಾಧನೆಗೆ ವಯಸ್ಸಿನ ಹಂಗಿಲ್ಲ, ವಯಸ್ಸು ಎಷ್ಟೇ ದಾಟಿದರು, ಎಷ್ಟೇ ಸಣ್ಣದಾದರೂ ಸಾಧನೆ ಸಾಧ್ಯವಾಗುವುದು ಮಾತ್ರ ದೃಢ ಸಂಕಲ್ಪದಿಂದಲೇ ಆಗಿದೆ. ಇಲ್ಲೊಬ್ಬ 9 ವರ್ಷದ ಬಾಲಕ  ಅತೀ ಕಿರಿಯ ಪ್ರಮಾಣೀಕೃತ ಯೋಗ ಟೀಚರ್ (Yoga Teacher)​ ಎನಿಸಿಕೊಂಡಿದ್ದಾನೆ. ಅಲ್ಲದೆ ಅತಿ ಕಿರಿಯ ಯೋಗ ಟೀಚರ್​ ಎನಿಸಿಕೊಳ್ಳುವ ಮೂಲಕ  ಗಿನ್ನಿಸ್​ ವರ್ಲ್ಡ್​​ ರೆಕಾರ್ಡ್(Guinness World Record)​ ನಿರ್ಮಿಸಿದ್ದಾನೆ. ಈ ಕುರಿತು ಗಿನ್ನೀ ಸ್ ​ವರ್ಲ್ಡ್​​ ರೆಕಾರ್ಡ್​ ಸಂಸ್ಥೆ ತನ್ನ ಯುಟ್ಯೂಬ್ ​(YouTube) ನಲ್ಲಿ ಮಾಹಿತಿ ಹಂಚಿಕೊಂಡಿದೆ.

ರೆಯಾಶ್​ ಸುರಾನಿ ಎನ್ನುವ 9 ವರ್ಷದ ಬಾಲಕ ಈ ಸಾಧನೆ ಮಾಡಿದ್ದಾನೆ. ಗಿನ್ನೀಸ್​ವರ್ಲ್ಡ್​​ ರೆಕಾರ್ಡ್​ ಹಂಚಿಕೊಂಡಿರುವ ವಿಡಿಯೋದಲ್ಲಿ  ಬಾಲಕ ಮೊದಲು ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಾನೆ. ನಂತರ ಯೋಗದ ಬಗೆಗೆ ಆತನಿಗಿರುವ ಆಸಕ್ತಿಯ ಬಗ್ಗೆ ಹೇಳುತ್ತಾನೆ. ಯೋಗವನ್ನು ಮಾಡುವುದನ್ನು ನಾನು ಎಂಜಾಯ್​ ಮಾಡುತ್ತೇನೆ ಎನ್ನುವ ರೆಯಾಶ್​ ಯೋಗದಿಂದ ಇಂಟರ್​ನೆಟ್​ ಮತ್ತುಏರ್​ಕೂಲರ್​ಗಳಿಲ್ಲದೆಯೂ ಬದುಕಬಹುದು ಎಂದಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ಸಖತ್​ ವೈರಲ್​ ಆಗಿದೆ. ಯುಟ್ಯೂಬ್​ನಲ್ಲಿ ಹಂಚಿಕೊಂಡ ವಿಡಿಯೋ 500 ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಳಿಸಿದ್ದು, ಬಾಲಕನ ಸಾಧನೆ ನೋಡಿ ನೆಟ್ಟಿಗರು ಶ್ಲಾಘಿಸಿದ್ದಾರೆ.

ರೆಯಾಶ್​ ಆನಂದ ಶೇಖರ್​ ಯೋಗ ಶಾಲೆಯಲ್ಲಿ 200 ಗಂಟೆಗಳ ಯೋಗ ತರಬೇತಿಯನ್ನು ಪಡೆದು ನಂತರ ಪ್ರಮಾಣಪತ್ರವನ್ನು ಪಡೆದಿದ್ದಾರೆ.  ವರ್ಲ್ಡ್​ ರೆಕಾರ್ಡ್​ ವರದಿಯ ಪ್ರಕಾರ ರೆಯಾಶ್​ ತನ್ನ 4ನೇ ವಯಸ್ಸಿಗೇ ಯೋಗದ ತರಬೇತಿ ಪಡೆಯಲು ಆರಂಭಿಸಿದ್ದನು.  ಸದ್ಯ ಅತೀ ಕಿರಿಯ ಯೋಗ ಟೀಚರ್​ ಬಗ್ಗೆ ಕೇಳಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *