ಹಾಸನ: ಅಧಿದೇವತೆ ಹಾಸನಾಂಬೆ ವರ್ಷಕ್ಕೊಮ್ಮೆ ಮಾತ್ರ ಪವಾಡಗಳ ಮೂಲಕ ದರ್ಶನ ನೀಡ್ತಾಳೆ. ಈ ವರ್ಷವೂ ಹಾಸನಾಂಬೆ 9 ದಿನ ದರ್ಶನ ಕೊಟ್ಟಿದ್ಲು. ಈ ಬಾರಿ ದರ್ಶನ ಪಡೆಯೋಕೆ ಅಭಿಮಾನಿಗಳು ನಾ ಮುಂದು, ತಾ ಮುಂದು ಅಂತಾ ಬಂದಿದ್ರು. ಇನ್ನು ಒಂಬತ್ತು ದಿನಗಳ ಈ ದರ್ಶನದಲ್ಲಿ ಹಾಸನಾಂಬೆಯ ಸನ್ನಿಧಿಗೆ ಕಾಣಿಕೆ ರೂಪದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣ, ಮತ್ತು ಚಿನ್ನಾಭರಣ ಹರಿದು ಬಂದಿದೆ.
ಇಂದು ಸಂಜೆ ಹಾಸನಂಬೆ ದೇವಿಯ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ಒಟ್ಟು 1,54,37,940 ರೂಪಾಯಿ ಹಣ ಸಂಗ್ರವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಇದರಲ್ಲಿ ದೇವಾಲಯದ ಹುಂಡಿಯಲ್ಲಿ ₹ 83,89,770. ವಿಶೇಷ ಟಿಕೆಟ್ ಮತ್ತು ಪ್ರಸಾದದಿಂದ ₹63,97,815. ಸಿದ್ದೇಶ್ವರ ದೇವಸ್ಥಾನದ ಹುಂಡಿಯಲ್ಲಿ ₹6,50,355 ಸಂಗ್ರಹವಾಗಿದೆ. ಜೊತೆಗೆ 598 ಗ್ರಾಂ ಬೆಳ್ಳಿ, 28 ಗ್ರಾಂ ಚಿನ್ನದ ವಸ್ತಗಳನ್ನು ಕಾಣಿಕೆ ರೂಪದಲ್ಲಿ ದೇಗುಲಕ್ಕೆ ಹರಿದು ಬಂದಿದೆ.
ಇನ್ನು ಹಾಸನಾಂಬೆಯ ಗರ್ಭಗುಡಿ ಬಾಗಿಲು ತೆರೆಯಲು ದಿನಗಣನೆ ಆರಂಭದ ಹೊತ್ತಲ್ಲಿ ಕೊರೊನಾ ಹಿನ್ನೆಲೆ ಹಾಸನಾಂಬೆಯ ನೇರ ದರ್ಶನಕ್ಕೆ ಸಾರ್ವಜನಿಕರಿಗೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಈ ಕುರಿತ ವ್ಯಾಪಕ ಟೀಕೆಗಳು ಕೇಳಿ ಬಂದ ಕೂಡಲೇ ಜಿಲ್ಲಾಡಳಿತ ಆದೇಶ ಹಿಂಪಡೆದು ಮೊದಲ ಎರಡು ದಿನ ಹೊರತುಪಡಿಸಿ ಉಳಿದ ದಿನಗಳಿಗೆ ಸಾರ್ವಜನಿಕರಿಗೆ ದರ್ಶನ ಅವಕಾಶ ಕಲ್ಪಿಸಿತ್ತು.