9 ಮಕ್ಕಳಿಗೆ ಒಂದೇ ಸೈಕಲ್​; ಚೀಲಗಳಂತೆ ಸಿಕ್ಕಿಸಿಕೊಂಡು ಹೋಗುತ್ತಿದ್ದಾನಲ್ಲ ಈತ! – Man rides bicycle with 9 children in bizarre viral video Internet reacts


Man rides bicycle with 9 children : ಈ ದೃಶ್ಯ ನೋಡಿದ ಯಾರಿಗೂ ಆತಂಕವಾಗುವುದು ಖಚಿತವೇ. 1.5 ಲಕ್ಷ ಜನ ನೋಡಿದ ಈ ವಿಡಿಯೋ ಎಲ್ಲಿಯದು ಎಂದು ನೀವೇನಾದರೂ ಗುರುತಿಸಬಲ್ಲಿರಾ? ಪಾಪ ಮಕ್ಕಳು…

9 ಮಕ್ಕಳಿಗೆ ಒಂದೇ ಸೈಕಲ್​; ಚೀಲಗಳಂತೆ ಸಿಕ್ಕಿಸಿಕೊಂಡು ಹೋಗುತ್ತಿದ್ದಾನಲ್ಲ ಈತ!

Man rides bicycle with 9 children in bizarre

Viral Video : ವಿಶ್ವದ ಜನಸಂಖ್ಯೆ 8 ಶತಕೋಟಿ ದಾಟಿದೆ. ಈ ಸಂದರ್ಭದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿವೆ. ಇದೀಗ ಹರಿದಾಡುತ್ತಿರುವ ಈ ವಿಡಿಯೋ ನೋಡಿ, 9 ಮಕ್ಕಳನ್ನು ಒಂದೇ ಸೈಕಲ್​ ಮೇಲೆ ಹೊತ್ತೊಯ್ಯುತ್ತಿದ್ದಾನೆ ಈ ಸವಾರ. ನೆಟ್ಟಿಗರು ಈ ವಿಡಿಯೋ ನೋಡಿ ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಜೈಕಿ ಯಾದವ್​ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.

ಹಿಂಭಾಗದಲ್ಲಿ ಮುಂಭಾಗದಲ್ಲಿ ಅಲ್ಲದೆ ಭುಜವನ್ನೇರಿ, ಚಕ್ರದ ಮೇಲೆ ಹೀಗೆ ಎಲ್ಲೆಂದರಲ್ಲಿ ಚೀಲಗಳನ್ನು ಸಿಕ್ಕಿಸಿಕೊಂಡಂತೆ ಪುಟ್ಟ ಮಕ್ಕಳನ್ನು ಕೂರಿಸಿಕೊಂಡು ನಿಲ್ಲಿಸಿಕೊಂಡು ಈ ವ್ಯಕ್ತಿ ಸೈಕಲ್​ ಓಡಿಸುತ್ತಿದ್ದಾನೆ. ಯಾರಿಗೂ ಈ ವಿಡಿಯೋ ತಮಾಷೆ ಎನ್ನಿಸದು. ಸ್ವಲ್ಪ ಆಯ ತಪ್ಪಿದರೆ ಮಕ್ಕಳ ಜೀವಕ್ಕೇ ಅಪಾಯ. ಎಂಥ ಪುಟ್ಟಪುಟ್ಟ ಮಕ್ಕಳಿವೆ ಇಲ್ಲಿ.

ಇಂಥವರಿಗೆ ತಿಳಿವಳಿಕೆ ನೀಡುವುದು ಮತ್ತು ಸೌಲಭ್ಯ ಕಲ್ಪಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದಿದ್ದಾರೆ ನೆಟ್ಟಿಗರು. ಇದು ಭಾರತದ್ದೇ ವಿಡಿಯೋ ಎಂದಿದ್ದಾರೆ ಮತ್ತೊಬ್ಬರು. ಇಲ್ಲ ಇದು ಭಾರತದ ವಿಡಿಯೋ ಅಲ್ಲ ಎಂದಿದ್ದಾರೆ ಕೆಲವರು. ಹಲವರು ಇದು ಆಫ್ರಿಕಾದಲ್ಲಿರಬೇಕು ಎಂದಿದ್ದಾರೆ. ಆದರೂ ಈ ವಿಡಿಯೋ ಯಾವ ಸ್ಥಳದ್ದು ಎಂದು ಈತನಕ ಗೊತ್ತಾಗಿಲ್ಲ.

ನಿಮಗೇನು ಅನ್ನಿಸುತ್ತಿದೆ  ಈ ವಿಡಿಯೋ ನೋಡಿದಾಗ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.