ನವದೆಹಲಿ: ಒಟ್ಟು ಸೋಂಕಿತರಲ್ಲಿ 90 ಪರ್ಸೆಂಟ್ ಸೋಂಕಿತರು ಮನೆಯಲ್ಲಿ ಇದ್ದುಕೊಂಡೇ ಗುಣಮುಖರಾಗಬಹುದು ಎಂದು ಮೇದಾಂತ ಆಸ್ಪತ್ರೆಯ ಹಿರಿಯ ವೈದ್ಯ ಡಾ. ನರೇಶ್ ತೆಹ್ರಾನ್ ಹೇಳಿದ್ದಾರೆ.

ಸೋಂಕಿತರು ಸಮಯಕ್ಕೆ ಸರಿಯಾಗಿ ಔಷಧಗಳನ್ನು ತೆಗೆದುಕೊಂಡರೆ ಅವರು ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆಯೇ ಬೀಳುವುದಿಲ್ಲ. 90 ಪರ್ಸೆಂಟ್ ಸೋಂಕಿತರು ಶಿಸ್ತುಬದ್ಧ ಮೆಡಿಕೇಷನ್​ನಿಂದಲೇ ಗುಣಮುಖರಾಗಬಹುದು ಎಂದು ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು.. ನಿಮ್ಮ ಆರ್​ಟಿಪಿಸಿಆರ್ ರಿಪೋರ್ಟ್ ನಲ್ಲಿ ಪಾಸಿಟಿವ್ ಎಂದು ಬರುತ್ತಿದ್ದಂತೆಯೇ ಸ್ಥಳೀಯ ವೈದ್ಯರನ್ನ ಸಂಪರ್ಕಿಸಿ. ಈಗಿನ ಸಮಯದಲ್ಲಿ ಎಲ್ಲ ವೈದ್ಯರಿಗೂ ಪ್ರೊಟೋಕಾಲ್ ಗೊತ್ತಿದ್ದು ಅವರೇ ನಿಮಗೆ ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆ ಎಂದಿದ್ದಾರೆ.

ಮುಂದುವರೆದು ಕೊರೊನಾ ಸೋಂಕಿತರು ವ್ಯಾಯಾಮವನ್ನೂ ಸಹ ಪ್ರಯತ್ನಿಸಬಹುದು. ಯೋಗದಲ್ಲಿ ಅನುಲೋಮ್ ವಿಲೋಮ್ ವ್ಯಾಯಾಮ ನಮ್ಮ ಶ್ವಾಸಕೋಸವನ್ನು ಹಿಗ್ಗಿಸುತ್ತದೆ. ದೀರ್ಘ ಉಸಿರನ್ನು ಎಳೆದುಕೊಂಡಾಗ ಆಕ್ಸಿಜನ್​ ಬದಲಾವಣೆ ಹೆಚ್ಚುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

The post 90% ಕೊರೊನಾ ಸೋಂಕಿತರು ಮನೆಯಲ್ಲಿದ್ದುಕೊಂಡೇ ಗುಣಮುಖರಾಗಬಹುದು-ಹಿರಿಯ ವೈದ್ಯ appeared first on News First Kannada.

Source: News First Kannada
Read More